ಖಟೀಮಾ “ಅಗ್ನಿಪರೀಕ್ಷೆ’ ಗೆಲ್ಲುವರೇ ಸಿಎಂ ಧಮಿ?


Team Udayavani, Feb 3, 2022, 7:55 AM IST

ಖಟೀಮಾ “ಅಗ್ನಿಪರೀಕ್ಷೆ’ ಗೆಲ್ಲುವರೇ ಸಿಎಂ ಧಮಿ?

ಈ ಬಾರಿಯ ಉತ್ತರಾಖಂಡ ಚುನಾವಣೆಯ ನಂತರ ಅಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಇದರ ನಡುವೆಯೇ, ಅಲ್ಲಿನ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ, ಉಧಮ್‌ ಸಿಂಗ್‌ ನಗರ್‌ ಜಿಲ್ಲೆಯ ಖಟೀಮಾ ವಿಧಾನಸಭಾ ಕ್ಷೇತ್ರದಲ್ಲಿ ಪುನಃ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಅವರಿಗೆ ಅಗ್ನಿಪರೀಕ್ಷೆಯಾಗಲಿದೆ ಎಂದು ಹೇಳಲಾಗುತ್ತಿದೆ.

2017ರಲ್ಲಿ ಉತ್ತರಾಖಂಡದಲ್ಲಿ ಅಧಿಕಾರ ಗದ್ದುಗೆಯಲ್ಲಿದ್ದ ಕಾಂಗ್ರೆಸ್‌ ಸರಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ, ಹೈಕಮಾಂಡ್‌ ಅಂದುಕೊಂಡಂತೆ ಅಲ್ಲಿ ಆಗಲಿಲ್ಲ. ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದ ನಲುಗಿದ ರಾಜ್ಯ ಬಿಜೆಪಿಗೆ ತೇಪೆ ಹಾಕಲು, ಪಕ್ಷದ ಹೈಕಮಾಂಡ್‌ ಪದೇ ಪದೆ ಅಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕಾಗಿ ಬಂದಿದ್ದು ವಿಪರ್ಯಾಸ. ಇದು ಧಮಿಯವರಿಗೆ ಟ್ರಬಲ್‌ ಆಗಿ ಪರಿಣಮಿಸಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.

5 ವರ್ಷಗಳಲ್ಲಿ ಮೂವರು ಸಿಎಂ!
2017ರ ಮಾ. 18ರಂದು ಮುಖ್ಯಮಂತ್ರಿಯಾ ಗಿದ್ದ ತ್ರಿವೇಂದ್ರ ಸಿಂಗ್‌ ರಾವತ್‌ರನ್ನು ಬದಲಾ ಯಿಸಿ ತೀರಥ್‌ ಸಿಂಗ್‌ ರಾವತ್‌ ಅವರನ್ನು ಸಿಎಂ ಮಾಡಲಾಯಿತು. 2021ರ ಮಾ. 10ರಂದು ಅಧಿಕಾರ ಗದ್ದುಗೆಯೇರಿದ ತೀರಥ್‌, 116 ದಿನಗಳ ಆಡಳಿತ ನಡೆಸುವಷ್ಟರಲ್ಲಿ ಮತ್ತೆ ಅಲ್ಲಿ ಒಳಬೇ ಗುದಿ ಭುಗಿಲೆದ್ದಿತು. ಮುಖ್ಯಮಂತ್ರಿಯನ್ನು ಬದಲಿಸುವ ನಿಟ್ಟಿನಲ್ಲಿ ಆಲೋಚಿಸಿದ ಬಿಜೆಪಿ ಹೈಕಮಾಂಡ್‌, ತನ್ನ ಎಂದಿನ ಸರ್‌ಪ್ರೈಸ್‌ ಸಿಎಂ ಕ್ಯಾಂಡಿಡೇಟ್‌ ತಂತ್ರಗಾರಿಕೆಯ ಮೊರೆ ಹೋಯಿತು. ಅದರ ಪರಿಣಾಮವಾಗಿ, 2021ರ ಜು. 4ರಂದು ತೀರಥ್‌ ಅವರಿಂದ ಸಿಎಂ ಹುದ್ದೆಗೆ ರಾಜೀನಾಮೆ ಪಡೆದ ಹೈಕ ಮಾಂಡ್‌, ಅವರ ಜಾಗಕ್ಕೆ ಕೇವಲ 2 ಬಾರಿ ಶಾಸಕರಾಗಿ ಅನುಭವವಿದ್ದ ಪುಷ್ಕರ್‌ ಸಿಂಗ್‌ ಧಮಿ ಅವರನ್ನು ತಂದು ಕುಳಿಸಿತು.

ಈ ಬಾರಿ ಜಯ ಸುಲಭವಲ್ಲ
2012ರಲ್ಲಿ ಖಾಟೀಮಾದಲ್ಲಿ ಮೊದಲ ಬಾರಿ ಸ್ಪರ್ಧಿಸಿ, ಕಾಂಗ್ರೆಸ್‌ನ ದೇವೇಂದ್ರ ಚಂದ್‌ ವಿರುದ್ಧ ಜಯ ಗಳಿಸಿದ್ದ ಧಮಿ, 2017ರಲ್ಲಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆದರೆ 2ನೇ ಬಾರಿಯ ಜಯ ಅಷ್ಟು ದೊಡ್ಡದಾಗಿರಲಿಲ್ಲ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಭುವನ್‌ ಚಂದ್ರ ಕಾಪ್ರಿ ಅವರ ವಿರುದ್ಧ ಕೇವಲ 2,709 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಪುನಃ ಅದೇ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿರುವ ಧಮಿಗೆ, ಈ ಬಾರಿ ಜಯ ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಅದಕ್ಕೆ ಕಾರಣ, ಹಿಂದಿನ ಚುನಾವಣೆಯಲ್ಲಿ ಅವರ ಎದುರು ಮಾರ್ಜಿನ್‌ನಲ್ಲಿ ಸೋತಿದ್ದ ಕಾಪ್ರಿ ಅವರೇ ಈ ಬಾರಿಯೂ ಇವರಿಗೆ ಎದುರಾಳಿ ನಿಂತಿರುವುದು. ಧಮಿಯವರ ಎದುರಾಳಿ ಕಾಪ್ರಿಯ ಕಡೆಗೆ ನೋಡುವುದಾದರೆ ಅವರೀಗ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರೆನಿಸಿದ್ದಾರೆ.

ಇನ್ನು ಮತ್ತೊಂದು ಕಾರಣವೆಂದರೆ, ಪದೇ ಪದೆ ಮುಖ್ಯ ಮಂತ್ರಿಯನ್ನು ಬದಲಾಯಿಸಿರುವ ಬಿಜೆಪಿಯ ವರ್ಚಸ್ಸು ಕೊಂಚ ಕುಂದಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿರುವುದು.

ರಾಜ್ಯದ ಜನ ಹೇಗಿದ್ದಾರೆ?
ಉತ್ತರಾಖಂಡ ರಾಜ್ಯ ಉದಯಿಸಿ 21 ವರ್ಷ ಗಳೇ ಕಳೆದಿದ್ದು, ಇಷ್ಟು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ರಾಜ್ಯದ ಜನತೆ ಬಿಜೆಪಿ ಅಥವಾ ಕಾಂಗ್ರೆಸ್‌ – ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರವೇ ಮಣೆ ಹಾಕಿದ್ದಾರೆ. ಅದರಲ್ಲೂ ಅತೀ ಹೆಚ್ಚು ಬಾರಿ ಅಧಿಕಾರ ಗದ್ದುಗೆಯಲ್ಲಿ ಇದ್ದದ್ದು ಕಾಂಗ್ರೆಸ್ಸೇ. ಈ ಹಿಂದೆ, ಎರಡು ಬಾರಿ (2000-21, 2009-11) ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ, ಅವರೆಡೂ ಒಂದೆರಡು ವರ್ಷಗಳ ಸರಕಾ ರಗಳಾಗಿದ್ದು ಗಮನಾರ್ಹ.

ಖಟೀಮಾದ ಸದ್ಯದ ಪಲ್ಸ್‌
ಖಟೀಮಾ ಕ್ಷೇತ್ರದಲ್ಲಿ 1.20 ಲಕ್ಷ ಮತದಾರ ರಿದ್ದಾರೆ. ಇವರಲ್ಲಿ, 45 ಸಾವಿರ ಮತದಾರರು ಪಹಡಿ ಸಮುದಾಯಕ್ಕೆ ಸೇರಿದವರು. 25 ಸಾವಿರ ಮತದಾರರು ಎಸ್‌ಟಿ ಸಮುದಾಯ ದವರು. 14 ಸಾವಿರ ಮತದಾರರು ಪೂರ್ವಾಂಚಲದವರು. 10 ಸಾವಿರ ಸಿಕ್ಖ್ , 5 ಸಾವಿರ ಬಂಗಾಲಿಯರು ಹಾಗೂ ಆಗ್ರಾ ಮೂಲದವರು ಇದ್ದಾರೆ. ಇವರಲ್ಲಿ ಮುಸ್ಲಿಂ ಮತದಾರರು ಮೊದಲಿನಿಂದಲೂ ಬಿಜೆಪಿಯಿಂದ ದೂರ ಉಳಿದವರು. ಇನ್ನು, ಸಿಕ್ಖ್ ಸಮುದಾಯದ ಮಂದಿ ಇತ್ತೀಚೆಗಿನ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.