ಇಂಡೋನೇಶ್ಯ ಸೂಪರ್ 1000 ಬ್ಯಾಡ್ಮಿಂಟನ್ : ಲಕ್ಷ್ಯಸೇನ್, ಕಶ್ಯಪ್ಗೆ ಸೋಲು
Team Udayavani, Nov 24, 2021, 5:13 AM IST
ಬಾಲಿ (ಇಂಡೋನೇಶ್ಯ): ಇಂಡೋನೇಶ್ಯ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಪಿ. ಕಶ್ಯಪ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-23, 15-21 ನೇರ ಗೇಮ್ಗಳಿಂದ ಸೋಲನುಭವಿಸಿದರು.
ಮೊದಲ ಗೇಮ್ನಲ್ಲಿ ಸೇನ್ ಅಗ್ರ ಶ್ರೇಯಾಂಕದ ಮೊಮೊಟಗೆ ತೀವ್ರ ತೀವ್ರ ಪೈಪೋಟಿಯೊಡ್ಡಿದರು. ಆದರೆ ದ್ವಿತೀಯ ಸುತ್ತಿನಲ್ಲಿ ಅನುಭವಿ ಆಟಗಾರನ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ವಿಫಲರಾದರು.
ಇದನ್ನೂ ಓದಿ:ಕಾಂಪ್ಲೆಕ್ಸ್ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್
ಮತ್ತೊಂದು ಪಂದ್ಯದಲ್ಲಿ ಪಿ. ಕಶ್ಯಪ್ ಅವರನ್ನು ಸಿಂಗಾಪುರದ ಲೋಹ್ ಕೀನ್ ಯೂ 21-11, 21-15 ಅಂತರದಿಂದ ಹಿಮ್ಮೆಟ್ಟಿಸಿದರು.