2.95 ಪಟ್ಟು ಹೆಚ್ಚು ಎಲ್ಐಸಿ ಐಪಿಒ ಬಿಡ್ಡಿಂಗ್
Team Udayavani, May 10, 2022, 12:39 AM IST
ಹೊಸದಿಲ್ಲಿ: ಎಲ್ಐಸಿ ಐಪಿಒ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೂಡಿಕೆದಾರರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.
ಕೊನೆಯ ದಿನವಾದ ಸೋಮವಾರವೂ ಭರ್ಜರಿಯಾಗಿಯೇ ಬಿಡ್ಡಿಂಗ್ ನಡೆದಿದೆ. 16.2 ಕೋಟಿ ಷೇರುಗಳನ್ನು ಎಲ್ಐಸಿ ಮಾರಾಟಕ್ಕಿ ಟ್ಟಿದ್ದರೆ, 47.83 ಕೋಟಿ ಷೇರುಗಳಿಗೆ ಬೇಡಿಕೆ ಬಂದಿದೆ.
ಅಂದರೆ ಒಟ್ಟಾರೆ ನಿರೀಕ್ಷೆಗಿಂತ 2.95 ಪಟ್ಟು ಹೆಚ್ಚು ಬಿಡ್ಡಿಂಗ್ ಆಗಿದೆ. ರಿಟೇಲ್ ಹೂಡಿಕೆದಾರರ ವಿಭಾಗದಲ್ಲಿ 1.99 ಪಟ್ಟು, ಉದ್ಯೋಗಿಗಳ ವಿಭಾಗದಲ್ಲಿ 4.39 ಪಟ್ಟು, ಪಾಲಿಸಿದಾರರ ವಿಭಾಗದಲ್ಲಿ 6.11 ಪಟ್ಟು ಹೆಚ್ಚು ಬಿಡ್ಡಿಂಗ್ ಆಗಿದೆ.
ಆದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾತ್ರ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಐಸಿ ಐಪಿಒ ದಿಂದ ದೂರ ಉಳಿದಿದ್ದಾರೆ. ಮೇ 12ರಂದು ಬಿಡ್ಡರ್ಗಳಿಗೆ ಷೇರುಗಳ ಹಂಚಿಕೆಯಾಗಲಿದೆ.