ಮಾ. 4-26: ವನಿತಾ ಪ್ರೀಮಿಯರ್ ಲೀಗ್: ಮುಂಬೈ-ಗುಜರಾತ್ ಮೊದಲ ಪಂದ್ಯ
Team Udayavani, Feb 15, 2023, 7:42 AM IST
ಹೊಸದಿಲ್ಲಿ: ವನಿತಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಡೆದ 24 ಗಂಟೆಗಳಲ್ಲಿ ಬಿಸಿಸಿಐ ಚೊಚ್ಚಲ “ವನಿತಾ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಹು ನಿರೀಕ್ಷೆಯ ಈ ಟಿ20 ಲೀಗ್ ಮಾರ್ಚ್ 4ರಿಂದ 26ರ ತನಕ ನಡೆಯಲಿದೆ.
ಎಲ್ಲ ಪಂದ್ಯಗಳು ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂ ಹಾಗೂ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯ
ಲಿವೆ. ಮಾ. 4ರ ಉದ್ಘಾಟನ ಪಂದ್ಯದಲ್ಲಿ ಮುಂಬೈ-ಗುಜರಾತ್ ಮುಖಾಮುಖಿ ಆಗಲಿವೆ. ಆರ್ಸಿಬಿ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.
ರೌಂಡ್ ರಾಬಿನ್ ಲೀಗ್ ಮಾದ ರಿಯ ಈ ಪಂದ್ಯಾವಳಿ ಎರಡು ಸುತ್ತುಗಳಲ್ಲಿ ನಡೆಯಲಿದೆ.
ಮೊದಲ ಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ತಲುಪಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ಇಲ್ಲಿ ಗೆದ್ದ ತಂಡ ದ್ವಿತೀಯ ತಂಡವಾಗಿ ಪ್ರಶಸ್ತಿ ಸುತ್ತಿನಲ್ಲಿ ಹೋರಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…