Kashmir: ಸುಂದರ ಕಾಶ್ಮೀರದಲ್ಲಿ ವಿಶ್ವಸುಂದರಿ ಸ್ಪರ್ಧೆ
ವರ್ಷಾಂತ್ಯದಲ್ಲಿ ನಡೆಯಲಿದೆ ಅದ್ದೂರಿ ಕಾರ್ಯಕ್ರಮ
Team Udayavani, Aug 30, 2023, 12:33 AM IST
ಹೊಸದಿಲ್ಲಿ/ಶ್ರೀನಗರ: ಜಮ್ಮು-ಕಾಶ್ಮೀರವು ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ಸಮ್ಮೇಳನದ ಬಳಿಕ ವರ್ಷಾಂತ್ಯದಲ್ಲಿ ಮತ್ತೂಂದು ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದೆ. 71ನೇ ಆವೃತ್ತಿಯ ವಿಶ್ವ ಸುಂದರಿ-2023 (ಮಿಸ್ ವರ್ಲ್ಡ್-2023) ಸ್ಪರ್ಧೆ ಡಿ. 8ರಂದು ಶ್ರೀನಗರದಲ್ಲಿ ನಡೆಯಲಿದೆ. ಈ ಬಗ್ಗೆ ಮಿಸ್ ವರ್ಲ್ಡ್ನ ಸಿಇಒ ಜ್ಯೂಲಿನಾ ಎರಿಕ್ ಮೋರ್ಲೆ ಘೋಷಣೆ ಮಾಡಿದ್ದಾರೆ.
ಹಾಲಿ ಸಾಲಿನ ಪ್ರಸಕ್ತ ಭುವನ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿರುವ ಕರೋಲಿನಾ ಬೈಲಾವ್ಸ್ಕ ಸಹಿತ ಚೆಲುವೆಯರ ತಂಡವೇ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡು ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದೆ. “ಕಾಶ್ಮೀರವನ್ನು ವೀಕ್ಷಿಸಿ ಬೆರಗಾಗಿದ್ದೇನೆ. ಅಂಥ ಸ್ಥಳವನ್ನು ನೋಡಿಯೇ ಇಲ್ಲ’ ಎಂದು ಕರೋಲಿನಾ ಹೇಳಿದ್ದಾರೆ.
ಮಿಸ್ ವರ್ಲ್ಡ್, ಕರಾವಳಿ ಮೂಲದ ಸಿನಿ ಶೆಟ್ಟಿ ಮತ್ತು ಮಿಸ್ ಕೆರೀಬಿ ಯನ್ ಎಮ್ಮಿ ಪೆನಾ ಮಾತನಾಡಿ “ನಾವು ಕಾಶ್ಮೀರದ ಶಕ್ತಿಯನ್ನು ಗಮನಿಸಿದ್ದೇವೆ. ನಮ್ಮ ಪ್ರವಾಸದ ವೇಳೆ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.
ಜಮ್ಮು -ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಅಲ್ಲಿ ಪರಿಸ್ಥಿತಿ ಸುಧಾರಣೆಯಾಗತೊಡಗಿದೆ. ಅದನ್ನು ಜಗತ್ತಿಗೆ ಕಾಣಿಸುವ ಮೊದಲ ಹೆಜ್ಜೆಯಾಗಿ ಮೇ 22, 23ರಂದು ಜಿ20 ಸಮ್ಮೇಳನ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!