100 ಬಿಲಿಯನ್ ಡಾಲರ್ ಕ್ಲಬ್ಗೆ ಮುಕೇಶ್?
ಇನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ 199 ಬಿಲಿಯನ್ ಡಾಲರ್ಗಳಾಗಿದೆ.
Team Udayavani, Sep 8, 2021, 12:20 PM IST
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮಾಲಕ ಮುಕೇಶ್ ಅಂಬಾನಿ ನಿವ್ವಳ ಆಸ್ತಿ ಮೌಲ್ಯ ಸದ್ಯದಲ್ಲೇ 100 ಶತಕೋಟಿ ಡಾಲರ್ಗಳಿಗೆ ಮುಟ್ಟ ಬಹುದು! ಇದರಿಂದ ಸದ್ಯದಲ್ಲೇ ಅವರು ಜಾಗತಿಕ ಬಿಲಿಯನ್ ಡಾಲರ್ ಕ್ಲಬ್ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಪ್ರಸ್ತುತ ಜಗತ್ತಿನಲ್ಲೇ 12ನೇ ಶ್ರೀಮಂತರಾಗಿರುವ ಮುಕೇಶ್ ಆಸ್ತಿ ಮೌಲ್ಯವೀಗ 92.6 ಬಿಲಿಯನ್ ಡಾಲರ್(6.80 ಲಕ್ಷ ಕೋಟಿ ರೂ.). ಒಂದು ವಾರ ದಲ್ಲಿ ಈ ಮೌಲ್ಯ 4.8 ಬಿಲಿಯನ್ ಡಾಲರ್(35, 200 ಕೋಟಿ ರೂ.)ಗಳಷ್ಟು ಹೆಚ್ಚಾಗಿದೆ. 2021ರಲ್ಲಿ 16 ಬಿಲಿಯನ್ ಡಾಲರ್(1.17 ಲಕ್ಷ ಕೋಟಿ ರೂ.)ಗಳಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಅವರ ಆಸ್ತಿ 80.7 ಬಿಲಿಯನ್ ಡಾಲರ್ಗಳಿದ್ದದ್ದು ಈಗ 92.6 ಬಿಲಿಯನ್ ಡಾಲರ್ವರೆಗೆ ಏರಲು ಕಾರಣ ಷೇರು ಮೌಲ್ಯ! ಮಂಗಳವಾರ ರಿಲಯನ್ಸ್ ಷೇರು ಮೌಲ್ಯ ತುಸು ಕಡಿಮೆಯಾಗಿತ್ತು, ಆದರೆ ಸೋಮವಾರ ಒಂದು ಷೇರಿನ ಬೆಲೆ 2479.85 ರೂ.ನಷ್ಟಿತ್ತು.
ಈ ಭಾರೀ ಏರಿಕೆಯೇ ಮುಕೇಶ್ ಅಂಬಾನಿ ಶ್ರೀಮಂತಿಕೆ ಹೆಚ್ಚಲು ಕಾರಣ. ಸದ್ಯ ಅಮೆಜಾನ್ ಸ್ಥಾಪಕ ಜೆಫ್ ಬೆಝೋಸ್ ವಿಶ್ವದ ನಂ.1 ಶ್ರೀಮಂತ. ಅವರ ನಿವ್ವಳ ಆಸ್ತಿ ಮೌಲ್ಯ 201 ಬಿಲಿಯನ್ ಡಾಲರ್. ಇನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ 199 ಬಿಲಿಯನ್ ಡಾಲರ್ಗಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?