ಸೆಸ್‌ ಹೆಚ್ಚಳಕ್ಕೆ GIS ಅನುಸರಿಸಲು ಸೂಚನೆ: ಸಂತೋಷ್‌ ಲಾಡ್‌

Team Udayavani, Dec 2, 2023, 11:29 PM IST

santhosh lad

ಬೆಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಉಪಕರ(ಸೆಸ್‌)ವನ್ನು ಹೆಚ್ಚಳ ಮಾಡುವ ಸಲುವಾಗಿ ಭೌಗೋಳಿಕ ಮಾಹಿತಿ ಪದ್ಧತಿ (ಜಿಐಎಸ್‌) ಯನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸೂಚಿಸಿದರು.

ವಿಕಾಸಸೌಧದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ಮಂಡಳಿ ನಿರ್ಮಿಸುವ ಕಟ್ಟಡಗಳಿಗೆ ಜಿಐಎಸ್‌ ತಂತ್ರಜ್ಞಾನ ಅಳವಡಿಸುವ ಸಂಬಂಧ ಸಾಕಷ್ಟು ಸಲಹೆಗಳು ಬಂದಿದ್ದವು. ಇದನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡುವ ಸಲುವಾಗಿ ಅಧಿಕಾರಿಗಳು ಹಾಗೂ ಸಮಾಜಮುಖೀ ಸಂಸ್ಥೆಗಳ ಜತೆಗೆ ಸಭೆ ನಡೆಸಲಾಗಿದೆ ಎಂದರು.
2007ರಲ್ಲಿ ಮಂಡಳಿ ರಚನೆ ಆದಾಗಿನಿಂದ ಇದುವರೆಗೆ ನಿರ್ಮಿಸಿರುವ ಕಟ್ಟಡಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಂದಿನಿಂದಲೇ ಯಾವುದೇ ಕಟ್ಟಡಗಳಿಗೆ ಜಿಐಎಸ್‌ ಅಳವಡಿಸಿಲ್ಲ. ಇದರಿಂದಾಗಿ ಸ್ಪಷ್ಟ ಮಾಹಿತಿಗಳು ಇಲಾಖೆಯಲ್ಲಿ ಇಲ್ಲದಂತಾಗಿದೆ. ಹೀಗಾಗಿ ಜಿಐಎಸ್‌ ಅಳವಡಿಸಲು ಸೂಚಿಸಲಾಗಿದೆ. ಇದರಿಂದ ಪ್ರತಿ ಕಟ್ಟಡದ ನಿರ್ಮಾಣ, ವಿನ್ಯಾಸ, ಅಳತೆ, ವಿಸ್ತೀರ್ಣ, ನಿಯಮ ಉಲ್ಲಂಘನೆಯಾಗಿದ್ದರೆ ಅದರ ಮಾಹಿತಿ ಕೂಡ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನಿಷ್ಠ 2500 ಕೋಟಿ ರೂ. ಸಂಗ್ರಹ
ಪ್ರಸ್ತುತ ಮಂಡಳಿಗೆ ಸುಮಾರು 1 ಸಾವಿರ ಕೋಟಿ ರೂ. ಸೆಸ್‌ ಬರುತ್ತಿದೆ. ಸೂಕ್ತ ರೀತಿಯಿಂದ ಸಂಗ್ರಹಣೆ ಮಾಡಿದರೆ ಕನಿಷ್ಠ 2,000 ರಿಂದ 2,500 ಕೋಟಿ ರೂ. ಉಪಕರ ಸಂಗ್ರಹವಾಗುತ್ತದೆ. ಸೆಸ್‌ ಹೆಚ್ಚಳ ಮಾಡುವ ಅಗತ್ಯವಿಲ್ಲ. ಇರುವುದನ್ನು ಸಂಗ್ರಹಿಸಿದರೂ ದ್ವಿಗುಣಗೊಳ್ಳುತ್ತದೆ. ಅದಕ್ಕೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ.

ಮನಪಾ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಳವಡಿಕೆ ಸದ್ಯಕ್ಕೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ತಂತ್ರಜ್ಞಾನ ಅಳವಡಿಕೆ ಕಷ್ಟಸಾಧ್ಯವಿದ್ದು, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಕಟ್ಟಡ ನಿರ್ಮಾಣದ ಯೋಜನ ನಕ್ಷೆಗೆ ಅನುಮೋದನೆ ಪಡೆದುಕೊಂಡ ಕೂಡಲೇ ಜಿಐಎಸ್‌ ಅಳವಡಿಸಿದರೆ, ನಕ್ಷೆಗೆ ತಕ್ಕ ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣವೂ ಆಗುತ್ತದೆ. ಯಾವುದೇ ನಿಯಮ ಉಲ್ಲಂಘನೆಗೂ ಅವಕಾಶ ಇರುವುದಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ಕುರಿತು ಇನ್ನೊಮ್ಮೆ ಸಭೆ ನಡೆಸಿ ನಿರ್ಣಯಕ್ಕೆ ಬರುವುದಾಗಿ ಸಚಿವ ಲಾಡ್‌ ತಿಳಿಸಿದರು.

ಟಾಪ್ ನ್ಯೂಸ್

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.