Vitla: ಅಡಿಕೆ, ಕರಿಮೆಣಸು ಕಳವು; ಪ್ರಕರಣ ದಾಖಲು
Team Udayavani, Mar 14, 2024, 1:05 AM IST
ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿನ ಮನೆಯ ಸಮೀಪದ ಕೊಠಡಿಯಲ್ಲಿಟ್ಟಿದ್ದ ಅಡಿಕೆ ಮತ್ತು ಕರಿಮೆಣಸು ಕಳವಾಗಿದೆ.
ಕುಡ್ತಮುಗೇರು ಕೆ. ಅಣ್ಣು ಸಪಲ್ಯ (62) ಅವರು ಒಣಗಿಸಿ ಸುಲಿಯದ ಅಡಿಕೆ (ಅಂದಾಜು 150 ಕೆ.ಜಿ.) ಮತ್ತು 4 ಗೋಣಿಚೀಲದಲ್ಲಿ ಒಣಗಿದ ಕರಿಮೆಣಸು (ಅಂದಾಜು 30 ಕೆ.ಜಿ.)ಗಳನ್ನು ದಾಸ್ತಾನಿರಿಸಿದ್ದರು.
ಕೊಠಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ, ಅಡಿಕೆ ಮತ್ತು ಕಾಳುಮೆಣಸು ಕಳ್ಳತನ ಆಗಿರುವುದು ತಿಳಿಯಿತು. ಕಳ್ಳತನವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 57,000 ರೂ. ಆಗಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು