ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ದಿಢೀರ್‌ ಕಡ್ಡಾಯ!

ಪೈಲಟ್‌ ಯೋಜನೆ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿ

Team Udayavani, Feb 19, 2022, 8:05 AM IST

ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ದಿಢೀರ್‌ ಕಡ್ಡಾಯ!ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ದಿಢೀರ್‌ ಕಡ್ಡಾಯ!

ಕುಂದಾಪುರ: ರಾಜ್ಯದ ನಾಲ್ಕು ಉಪನೋಂದಣಿ ಕಚೇರಿಗಳಲ್ಲಿ ಪ್ರಾಪರ್ಟಿ ಕಾರ್ಡ್‌ ಇಲ್ಲದೆ ಆಸ್ತಿ ನೋಂದಣಿ ಮಾಡದಂತೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗಿದೆ. ಇದಿನ್ನೂ ಪೈಲಟ್‌ ಹಂತವಾದ ಕಾರಣ ದಿನಕ್ಕೆ 45ರಷ್ಟು ನೋಂದಣಿಯಾಗುವ ಕಚೇರಿಗಳಲ್ಲಿ ಕಷ್ಟಪಟ್ಟು 12ರಷ್ಟು ನೋಂದಣಿ ಆಗುತ್ತಿದೆ.

ಸಂಯೋಜಿತ ತಂತ್ರಾಂಶ
ಈ ವರೆಗೆ ಕಾವೇರಿ ತಂತ್ರಾಂಶದಲ್ಲಿ ನೋಂದಣಿಯಾಗುತ್ತಿತ್ತು. ಭೂಮಿ ತಂತ್ರಾಂಶ ಜೋಡಣೆಯಾಗಿತ್ತು. ಸರ್ವೆ ನಂಬರ್‌ ಹಾಕಿ  ದಾಗ ಭೂಮಿ ಮೂಲಕ ಮಾಹಿತಿ ದೊರೆತು, ಕಾವೇರಿ ತಂತ್ರಾಂಶದಲ್ಲಿ ಆಸ್ತಿ ಪರ ಭಾರೆ ಮಾಹಿತಿ ಅಪ್‌ ಡೇಟ್‌ ಆಗಿ ಎರಡೂ ತಂತ್ರಾಂಶಗಳಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತಿತ್ತು. ಈಗ ಕಾವೇರಿ ಬ್ಲಾಕ್‌ ಚೈನ್‌ ಎಂಬ ಸಂಯೋಜಿತ ತಂತ್ರಾಂಶ ಜಾರಿಗೆ ಬಂದಿದೆ.

ಕೊಂಕಣ ಸುತ್ತಿ ಮೈಲಾರಕ್ಕೆ
ಹೊಸ ತಂತ್ರಾಂಶದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು. ಆರಂಭದಲ್ಲಿ ಆಸ್ತಿ ಮಾರುವ, ಕೊಳ್ಳುವವರ ಹೆಬ್ಬೆಟ್ಟಿನ ಗುರುತು ಆಧಾರ್‌ ಸರ್ವರ್‌ಗೆ ಪಡೆದು ಪರಿಶೀಲಿಸಲ್ಪಡಬೇಕು. ಬಳಿಕ ಎಟಿಎಂ ಕಾರ್ಡ್‌ ಮಾದರಿಯ, ನಂಬರ್‌ ಹೊಂದಿದ ಪ್ರಾಪರ್ಟಿ ಕಾರ್ಡ್‌ ಪ್ರಿಂಟ್‌ ತೆಗೆಯ ಬೇಕು. ಆ ಬಳಿಕ ನೋಂದಣಿ ಪ್ರಕ್ರಿಯೆ, ದಾಖಲೆಗಳ ಸಲ್ಲಿಕೆ. ಮತ್ತೆ ಪರಿಶೀಲನೆ (ಸರ್ವರ್‌ ಮೂಲಕ ವೇರಿಫೈ) ಆಗಿ ರಿಜಿಸ್ಟ್ರೇಶನ್‌. ಬಳಿಕ ಉಪನೋಂದಣಾಧಿಕಾರಿ ಅಧಿಕೃತಗೊಳಿಸಬೇಕು. ಆಗ ಸರ್ವರ್‌ನಿಂದ ಮೊದಲೇ ಕಳುಹಿಸಿದ ಸ್ಕ್ಯಾನ್‌ ಮಾಡಿದ ದಾಖಲೆ ಗಳು ಪರಿಶೀಲನೆಗೆ ಒಳಪಟ್ಟು ಉಪ ನೋಂದಣಾಧಿಕಾರಿಯ ಕಂಪ್ಯೂಟರ್‌ಗೆ ಬರುತ್ತವೆ. ಆಮೇಲೆ ಡಿಜಿಟಲ್‌ ಸಹಿ ಹಾಕಿ, ಹೆಬ್ಬೆಟ್ಟಿನ ಗುರುತು ನೀಡಬೇಕು. ಉಪ ನೋಂದಣಿ ಕಚೇರಿ ಅವಧಿಯನ್ನು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ವಿಸ್ತರಿಸಲಾಗಿದೆ.

ನಿಧಾನ ಪ್ರಕ್ರಿಯೆ
ಆಧಾರ್‌, ಕಾವೇರಿ, ಭೂಮಿ ತಂತ್ರಾಶದಲ್ಲಿ ಅಧಿಕೃತಗೊಳಿಸುವ ಪ್ರಕ್ರಿಯೆ ನಡೆಯಬೇಕು. ಮೂರು ಸರ್ವರ್‌ಗಳ ಪೈಕಿ ಒಂದು ನಿಧಾನ ವಿದ್ದರೂ ವಿಳಂಬ ತಪ್ಪಿದ್ದಲ್ಲ. ಆಧಾರ್‌ ಹೆಬ್ಬೆಟ್ಟು ಪಡೆಯುವಾಗ ಸಮಸ್ಯೆ ಆಗುತ್ತದೆ. ಸ್ಥಳೀಯ ಕಂಪ್ಯೂಟರ್‌ನಲ್ಲೂ ಡ್ರೈವ್‌ಗಳು ಕೈ ಕೊಡುತ್ತವೆ. ಇದೆಲ್ಲ ಕಾರಣದಿಂದ ಒಟ್ಟು ಪ್ರಕ್ರಿಯೆ ತಡವಾಗುತ್ತಿದೆ.

ಎರಡು ಕಡೆ ಯಶಸ್ವಿ
ಗುಬ್ಬಿಯಲ್ಲಿ ಕಳೆದ ವರ್ಷ ಅ. 21ರಿಂದ, ಜಗಳೂರಿನಲ್ಲಿ ಅ. 28ರಿಂದ ಪೈಲಟ್‌ ಯೋಜನೆ ಯಶಸ್ವಿಯಾಗಿದೆ. ಈ ಹಿನ್ನೆಲೆ ಯಲ್ಲಿ ಕುಂದಾಪುರ, ಶಿರಸಿ, ಶಿಡ್ಲಘಟ್ಟ, ಹೊಸ ದುರ್ಗ ದಲ್ಲಿ ಫೆಬ್ರವರಿ ಎರಡನೆಯ ವಾರ ದಿಂದ ಹೊಸ ತಂತ್ರಾಂಶದ ಮೂಲಕ ನೋಂದಣಿ ಯಾಗಬೇಕೆಂದು ಆದೇಶ ಹೊರಡಿಸಲಾಗಿದೆ. ಶುಕ್ರವಾರದಿಂದ ತಂತ್ರಾಂಶವೇ ಬದಲಾಗಿದೆ. ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡಲಾಗುತ್ತಿದ್ದು, ಈ 4 ಕಡೆ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಮೂಲಗಳ ಪ್ರಕಾರ ವಿಳಂಬದಿಂದಾಗಿ ಗುಬ್ಬಿ, ಜಗಳೂರಿನಲ್ಲಿ ದಿನದಲ್ಲಿ ಶೇ. 40ರಷ್ಟು ಕಡಿಮೆ ನೋಂದಣಿ ನಡೆಯುತ್ತಿದೆ.

ಸಾರ್ವಜನಿಕರಿಗೆ ಸಮಸ್ಯೆ
ಆಸ್ತಿ ನೋಂದಣಿ, ಪಾಲುಪಟ್ಟಿ, ಬ್ಯಾಂಕ್‌ ಸಾಲಕ್ಕೆ ಅಡಮಾನ, ಸಾಲದ ದಾಖಲೆ ತೆಗೆಸುವುದು ಹೀಗೆ ನಾನಾ ಪ್ರಕ್ರಿಯೆಗೆ ದೂರದಲ್ಲಿರುವವರು ಊರಿಗೆ ಬರುತ್ತಾರೆ. ಆದರೆ ದಿಢೀರ್‌ ಆಗಿ ಇಂತಹ ಬದಲಾವಣೆ ಮಾಡಿದಾಗ ಸಮಸ್ಯೆಯಾಗುತ್ತದೆ.

ಪೈಲಟ್‌ ಹಂತ ಯಶಸ್ವಿಯಾಗುವ ವರೆಗೆ ಈ ಹಿಂದಿನ ಪದ್ಧತಿ ಮತ್ತು ಹೊಸ ಪದ್ಧತಿ ಎರಡೂ ಇರಲಿ. ಇಲ್ಲದಿದ್ದರೆ ದಿನಗಟ್ಟಲೆ ಕಾಯುವ ಪರಿಸ್ಥಿತಿ ಬರುತ್ತಿದೆ.
-ಗಿರೀಶ್‌ ಜಿ.ಕೆ.
ಸದಸ್ಯರು, ಪುರಸಭೆ

ಫೆ. 18ರಿಂದ ಬದಲಾದ ತಂತ್ರಾಂಶ ದಂತೆ ನೋಂದಣಿ ಮಾಡ ಲಾಗುತ್ತಿದೆ. ಮೊದಲಿಗೆ ಪ್ರಾಪರ್ಟಿ ಕಾರ್ಡ್‌ ಮಾಡಿ ಅನಂತರ ನೋಂದಣಿ ಯಾಗುತ್ತಿದೆ. ಇದಕ್ಕೆ ಬೇಕಾದ ಸಲಕರಣೆಗಳು ಇಲಾಖೆಯಿಂದ ಬಂದಿವೆ.
-ಯೋಗೇಶ್‌ ಎಂ.ಆರ್‌.
ಉಪನೋಂದಣಾಧಿಕಾರಿ, ಕುಂದಾಪುರ

- ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.