ಸೆಕೆಂಡ್‌ ಹ್ಯಾಂಡ್‌ ಕಾರಿಗೆ ಬೇಡಿಕೆ; ಖರೀದಿ ಮುನ್ನ ಸುರಕ್ಷತೆಗೆ ಗಮನಹರಿಸಿ


Team Udayavani, Sep 28, 2020, 7:10 PM IST

Untitled

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ಕೋವಿಡ್‌ ಬಳಿಕ ಜಗತ್ತಿನಾದ್ಯಂತ ಹಲವು ಬದಲಾವಣೆಗಳು ಕಂಡುಬರುತ್ತಿವೆ. ಸಾಂಕ್ರಾಮಿಕ ಸಮಯದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ಒಬ್ಬರಿಂದ ಕೋವಿಡ್‌ ಗಾಳಿಯ ಮೂಲಕ ಅಥವ ಇತರ ಮೂಲಗಳಿಂದ ತಗುಲಬಹುದು ಎಂಬ ಕಾರಣಕ್ಕೆ ನಾವು ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಪ್ರಾರಂಭಿಸಿದ್ದೇವೆ.

ಈಗ ನಾವು ಎಲ್ಲಿಯಾದರೂ ಹೋಗಬೇಕು ಎಂದಾದರೆ ಸ್ವಂತ ವಾಹನಗಳನ್ನು ನಾವು ಬಳಸುತ್ತಿದ್ದೇವೆ. ಕಾರಿಲ್ಲದವರು ಕಾರು ಕೊಂಡುಕೊಳ್ಳುವತ್ತ ಮುಂದಡಿಯಿಟ್ಟಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲವು ತಿಂಗಳುಗಳಲ್ಲಿ ಹಳೆಯ ಕಾರುಗಳ ಖರೀದಿಯೂ ಹೆಚ್ಚಾಗಿದೆ. ಹಾಗಾದರೆ ನೀವು ಹಳೆಯ ಕಾರು ಖರೀದಿಸುವ ಬಗ್ಗೆಯೂ ಯೋಚಿಸುತ್ತಿದ್ದರೆ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿ ಕಾರು ಖರೀದಿಸುವವರಾಗಿದ್ದರೆ ಈ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ದಾಖಲೆ ಪತ್ರಗಳನ್ನು ಸರಿಯಾಗಿ ಗಮನಿಸಿ
ಕಾರನ್ನು ಖರೀದಿಸುವುದು ಸಹಜವಾಗಿಯೇ ದುಬಾರಿ ಬಜೆಟ್‌. ಇದರ ಹೊರತಾಗಿಯೂ ನೀವು ಮಾಡದ ತಪ್ಪಿಗೆ ಕಾನೂನಿನ ಕುಣಿಕೆಗೆ ನೀವು ಸಿಲುಕಿಕೊಳ್ಳುವ ಸಾಧ್ಯತೆ ಕೆಲವು ಸಂದರ್ಭ ಇರುತ್ತದೆ. ನೀವು ಕಾರನ್ನು ಖರೀದಿಸುವ ಮುನ್ನ ಅದರ ದಾಖಲೆ ಪತ್ರಗಳನ್ನು ಸರಿಯಾಗಿ ಗಮನಿಸುವುದು ಒಳ್ಳೆಯದು. ದಾಖಲೆ ಪತ್ರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಇನ್ನೂ ಉತ್ತಮ. ಯಾರಾದರೂ ಅಕ್ರಮವಾಗಿ ನಿಮಗೆ ಮಾರಾಟ ಮಾಡಲು ಯತ್ನಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಹೀಗೆ ಮಾಡುವುದು ಒಳ್ಳೆಯದು. ಇನ್ನು ಕಾರನ್ನು ಖರೀದಿಸಿದ ಮೊದಲ ದಿನವೇ ಕಾರಿನ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ. ಈ ಪುಸ್ತಕದ ಮೂಲಕ ನೀವು ಕಾರಿನ ಸೇವೆ ಮತ್ತು ಇತರ ಪರಿಕರಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಟಯರ್‌ಗಳ ಬಗೆಗೆ ನಿಗಾ ಇರಲಿ
ಟಯರ್‌ಗಳು ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ನೀವು ಅವುಗಳನ್ನು ಸರಿಯಾಗಿ ನೋಡದೇ ಇದ್ದರೆ ನಿಮ್ಮ ಪ್ರಯಾಣ ಅರ್ಧದಲ್ಲಿ ಮೊಟಕಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಮೊದಲೇ ಟಯರ್‌ಗಳು ಸರಿಯಾಗಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಪ್ರತಿ ವಾರ ಟೈರ್‌ನ ಗಾಳಿಯನ್ನು ಪರಿಶೀಲಿಸಿ. ವಿಶೇಷವಾಗಿ ಚಾಲನೆ ಮಾಡುವ ಮೊದಲು. ಇನ್ನು ಕಾರಿನ ದಾಖಲೆಯಲ್ಲಿ ಇರುವ ಅನುಸಾರ ಅದೇ ನಿಯಮಗಳ ಪ್ರಕಾರ ಗಾಳಿಯನ್ನು ತುಂಬಿಸಿ. ಜತೆಗೆ ಎಂಜಿನ್‌ ಮೊದಲಾದ ಮಾಹಿತಿಯನ್ನು ತಜ್ಞರ ಮೂಲಕ ತಿಳಿದುಕೊಳ್ಳುವುದು ಉತ್ತಮ. ವೀಲ್ಹ್ಲ್ ಗಳು ತಪ್ಪಿದ್ದರೆ ನೀವು ಸರಿಪಡಿಸಿಕೊಳ್ಳಬಹುದು.

ಆಯಿಲ್‌ ಮಟ್ಟವನ್ನು ಪರಿಶೀಲಿಸಿ
ನಿಮ್ಮ ಕಾರಿನಲ್ಲಿ ಆಯಿಲ್‌ ಮಟ್ಟ ಕಡಿಮೆಯಾಗಿದ್ದರೆ, ಅದು ನಿಮ್ಮ ಎಂಜಿನ್‌ಗೆ ಹಾನಿ ಮಾಡುತ್ತದೆ. ಅದನ್ನು ನೀವು ನಿಯಮಿತವಾಗಿ ಪರೀಕ್ಷಿಸುತ್ತಿರಬೇಕು. ಪರೀಕ್ಷಿಸಲು ಡಿಪ್‌ಸ್ಟಿಕ್‌ ಅನ್ನು ಮೇಲಕ್ಕೆತ್ತಿ ಅದನ್ನು ಸ್ವ‌ಚ್ಛಗೊಳಿಸಿ ಮರುಹೊಂದಿಸಿಕೊಳ್ಳಿ. ಈ ಮೂಲಕ ವಾಹನಕ್ಕೆ ಆಯಿಲ್‌ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿಯಲು ಸಾಧ್ಯವಾಗುತ್ತದೆ. ಆಯಿಲ್‌ ಬೇಗ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅದನ್ನು ನಿಯಮಿತವಾಗಿ ಬದಲಾಯಿಸಿ. ಹಳೆಯ ಕಾರು ಆದ ಕಾರಣ ಕೆಲವೊಮ್ಮೆ ಹೆಚ್ಚು ಆಯಿಲ್‌ ಅನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅದನ್ನು ಪರಿಶೀಲಿಸುವುದು ಎಲ್ಲ ಕಡೆಗಳಲ್ಲಿಯೂ ಉತ್ತಮ.

ವೈಪರ್‌ ಕೆಲಸ ಮಾಡುತ್ತಾ?
ಮಳೆಗಾಲದಲ್ಲಿ ವೈಪರ್‌ಗಳ ಪಾತ್ರ ಮಹತ್ವದ್ದಾಗಿದೆ. ನೀವು ವೈಪರ್‌ ಬಳಸಿದ ಬಳಿಕ ಕಾರಿನ ಮುಂಭಾಗದ ಗಾಜಿನ ಮೇಲೆ ಸಾಲುಗಳು ಅಥವ ಗೆರೆಗಳನ್ನು ನೋಡಿದರೆ ವೈಪರ್‌ ಅನ್ನು ಬದಲಿಸುವ ಸಮಯ ಬಂದಿದೆ ಎಂದರ್ಥ. ನೀವು ಅದರ ಮಾಹಿತಿಯನ್ನು ಕಾರಿನ ಕೈಪಿಡಿಯಲ್ಲಿ ಕಾಣಬಹುದು. ನಿಮ್ಮ ಗಾಜಿನಲ್ಲಿ ಹೆಚ್ಚು ಗೆರೆಗಳು ಇವೆ ಎಂದಾದರೆ ಹಗಲು ನೀವು ಅಷ್ಟೊಂದು ಕಿರಿಕಿರಿ ಅನುಭವಿಸದೇ ಇದ್ದರೂ ರಾತ್ರಿ ಪ್ರಯಾಣದಲ್ಲಿ ಲೈಟ್‌ನ ತೀವ್ರತೆಗೆ ಮಾರ್ಗ ಕಾಣದೇ ಇರಬಹುದು.

ದೀಪಗಳು ಉರಿಯುತ್ತಿದೆಯೇ?
ಹಳೆಯ ಕಾರನ್ನು ಖರೀದಿಸುವಾಗ, ದೀಪಗಳು ಉರಿಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರಿಯಾಗಿ ಪರಿಶೀಲಿಸಿ. ಇದಾಗ ಬಳಿಕ ಪ್ರತಿ ತಿಂಗಳು ಅವುಗಳನ್ನು ಪರಿಶೀಲಿಸಿ. ಕೆಲವು ಬ‌ಲ್ಭ್‌ ಗಳನ್ನು ಸುಲಭವಾಗಿ ಬದಲಾಯಿಸಬಹುದು, ಆದರೆ ಕೆಲವು ಎಲ್ಇಡಿಗಳನ್ನು ಬದಲಾಯಿಸಲು ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಲೈಟ್‌ಗಳಲ್ಲಿ ಲೋಪ ಇದ್ದರೆ ಸರಿಪಡಿಸಿ ಚಲಾಯಿಸಿ.

ಕಾರನ್ನು ಸ್ವಚ್ಛಗೊಳಿಸುತ್ತಿರಿ
ಕಾರನ್ನು ನಿಯತಕಾಲಿಕವಾಗಿ ಸ್ವಚ್ಛಗೊಳಿಸುವುದು ಒಳ್ಳೆಯದು. ಇಲ್ಲದಿದ್ದರೆ ಕೆಲವು ಕೀಟಗಳು ಮತ್ತು ಇತರ ಅನೇಕ ವಸ್ತುಗಳು ಕಾರಿನ ಬಣ್ಣವನ್ನು ಹಾಣಿಗೊಳಿಸಬಹುದು. ಕಾರನ್ನು ತೊಳೆಯುವ ಸಂದರ್ಭ ನೀವು ಸರ್ವೀಸ್‌ ಸ್ಟೇಶನ್‌ ಮೊರೆ ಹೋಗುವುದು ಒಳ್ಳೆಯದು. ಯಾಕೆಂದರೆ ನಾವು ಹೆಚ್ಚು ನೀರನ್ನು ವ್ಯಯ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರ್ವೀಸ್‌ನ ಸಹಾಯ ಪಡೆಯುವುದು ಒಳ್ಳೆಯದು. ಏಕೆಂದರೆ ನೀರನ್ನು ಮರುಬಳಕೆ ಮಾಡಲಾಗುತ್ತದೆ.

 

 

 

 

 

 

 

 

 

 

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.