Puttur: ಪರೀಕ್ಷಾ ಭಯದಿಂದ ಆರನೇ ತರಗತಿ ವಿದ್ಯಾರ್ಥಿನಿ ನಾಪತ್ತೆ; ಕೊನೆಗೂ ಪತ್ತೆ
Team Udayavani, Feb 3, 2024, 11:37 PM IST
ಪುತ್ತೂರು: ಮನೆಯಿಂದ ಶಾಲೆಗೆಂದು ಬಂದು ಇತ್ತ ಶಾಲೆಗೂ ಹೋಗದೆ, ಅತ್ತ ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೊನೆಗೂ ಪತ್ತೆಯಾಗಿದ್ದಾಳೆ. ನಗರದ ಖಾಸಗಿ ವಿದ್ಯಾಸಂಸ್ಥೆಯಲ್ಲಿನ 6ನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮಾ ಅಫ್ನಾ ನಾಪತ್ತೆಯಾಗಿರುವುದಾಗಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊನೆಗೂ ಫಾತಿಮಾ ಅಫ್ನಾ ಕಾಸರಗೋಡಿನಲ್ಲಿ ಪತ್ತೆಯಾಗಿದ್ದಾಳೆ.
ಅಫ್ನಾ ಬೆಳಗ್ಗೆ ಮನೆಯಿಂದ ಇತರ ಮಕ್ಕಳ ಜತೆ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಶಾಲೆಗೆಂದು ಬಂದಿದ್ದಳು. ಶಾಲೆಯಲ್ಲಿ ಪರೀಕ್ಷೆ ಇತ್ತು ಎನ್ನಲಾಗಿದ್ದು, ಅಫ್ನಾ ಶಾಲೆಗೆ ಹೋಗದೆ ನೇರವಾಗಿ ಪರ್ಲಡ್ಕದ ಬಾಲವನಕ್ಕೆ ತೆರಳಿದ್ದಳು. ಐಡಿ ಕಾರ್ಡ್ ಇಲ್ಲದ ಕಾರಣ ಬಾಲವನದ ಸಿಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬಂದ ಅಫ್ನಾ ಪರ್ಲಡ್ಕದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ತೆರಳಿ ನಾನು ಶಾಲೆಗೆ ಹೋಗಿಲ್ಲ, ಇಂದು ಇಲ್ಲಿ ಇರುವುದಾಗಿ ಹೇಳಿದ್ದಾಳೆ. ಮನೆಮಂದಿ ಆಕೆಯನ್ನು ಶಾಲೆಗೆ ಬಿಟ್ಟು ಬರಲು ಮುಂದಾದಾಗ ಅಫ್ನಾ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಮನೆಯ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದರೂ ಆಕೆ ಕಾಣಸಿಕ್ಕಿರಲಿಲ್ಲ. ಸಂಬಂಧಿಕರಿಂದ ಮಾಹಿತಿ ಪಡೆದ ಮನೆಯವರು ಬೆಳಗ್ಗಿನಿಂದಲೇ ಅಫ್ನಾಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಬಾಲಕಿ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ