ರೊಮೇನಿಯಾ -ಬಲ್ಗೇರಿಯನ್ನರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ
Team Udayavani, Jul 26, 2020, 2:16 PM IST
ರೋಮ್: ಈ ಹಿಂದೆ ಸೋಂಕು ಪೀಡಿತ ರಾಷ್ಟ್ರ ಬ್ರೆಜಿಲ್ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮವನ್ನು ಕಡ್ಡಾಯಗೊಳಿಸಿದ್ದ ಇಟಲಿ ಇದೀಗ ಮತ್ತೆರೆಡು ರಾಷ್ಟ್ರಗಳಿಗೆ ವಿಸ್ತರಿಸಿದೆ.
ರೊಮೇನಿಯಾ, ಬಲ್ಗೇರಿಯಾ ಪ್ರದೇಶಗಳಿಂದ ಬರುವ ಅನಿವಾಸಿ ಇಟಲಿಯನ್ನರಿಗೆ ಹಾಗೂ ವಿದೇಶಿ ಪ್ರಯಾಣಿಕರಿಗೆ ಇಟಲಿ ಸರಕಾರ 14 ದಿನಗಳ ಕಠಿನ ಕ್ವಾರಂಟೈನ್ ವಿಧಿಸುವುದಾಗಿ ಘೋಷಿಸಿದೆ.
ಈ ಕುರಿತು ಅಧಿಕೃತ ಘೋಷಣೆ ಮಾಡಿರುವ ಇಟಲಿಯ ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜ್ , ಇನ್ನೂ ದೇಶ ಸಹಿತ ವಿಶ್ವದೆಲ್ಲೆಡೆ ಸೋಂಕು ಹರಡುತ್ತಲೇ ಇದ್ದು, ಕೋವಿಡ್ ವಿರುದ್ಧ ನಾವು ಸಂಪೂರ್ಣವಾಗಿ ಗೆಲವು ಸಾಧಿಸಿಲ್ಲ. ಹಾಗಾಗಿ ನಾವು ಇನ್ನೂ ಜಾಗರೂಕರಾಗಿರಬೇಕು ಎಂದಿದ್ದಾರೆ.
ಅತೀ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾದ ಐರೋಪ್ಯ ದೇಶಗಳ ಪೈಕಿ ಇಟಲಿ ಕೂಡ ಒಂದಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಬ್ರೆಜಿಲ್ ಸೇರಿದಂತೆ 16 ದೇಶಗಳಿಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್