Ram Mandir ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಗೆ ಭರದ ಸಿದ್ಧತೆ: ಪೇಜಾವರ ಶ್ರೀ

ಎ.17 ಮತ್ತೊಂದು ಬೃಹತ್‌ ಕಾರ್ಯಕ್ರಮ

Team Udayavani, Mar 11, 2024, 7:20 AM IST

Ram Mandir ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಗೆ ಭರದ ಸಿದ್ಧತೆ: ಪೇಜಾವರ ಶ್ರೀ

ಮಣಿಪಾಲ/ಅಯೋಧ್ಯೆ: ಶ್ರೀ ರಾಮಮಂದಿರದಲ್ಲಿ ಪ್ರಥಮ ಶ್ರೀ ರಾಮನವಮಿಯನ್ನು ಭವ್ಯವಾಗಿ ಆಚರಿಸುವ ಸಂಬಂಧ ಪೂರ್ವಸಿದ್ಧತೆ ಶೀಘ್ರವೇ ಆರಂಭವಾಗಲಿದೆ.

ಎಪ್ರಿಲ್‌ 17ರಂದು ಶ್ರೀ ರಾಮ ನವಮಿ ಆಚರಣೆ ದೇಶಾದ್ಯಂತ ನಡೆಯಲಿದೆ. ಭವ್ಯವಾದ ಶ್ರೀರಾಮಮಂದಿರ ಲೋಕಾರ್ಪಣೆಯಾಗಿ, ಬಾಲ ರಾಮನ ಪ್ರಾಣ ಪ್ರತಿಷ್ಠೆಯಾದ ಬಳಿಕ ನಡೆಯಲಿ ರುವ ಮೊದಲನೇ ರಾಮನವಮಿ ಇದು ಎಂದು ಪೇಜಾವರ ಶ್ರೀಗಳು ಉದಯವಾಣಿಗೆ ತಿಳಿಸಿದ್ದಾರೆ. “ಮುಂದಿನ ಉತ್ಸವಗಳ ಬಗ್ಗೆಯೂ ಟ್ರಸ್ಟ್‌ ಸಭೆಯಲ್ಲಿ ಚರ್ಚಿಸಲಾಗುವುದು.

ಪ್ರಥಮ ಶ್ರೀರಾಮನ ನವಮಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು’ ಎಂದು 48 ದಿನಗಳ ಮಂಡಲೋತ್ಸವ ನೇತೃತ್ವದ ವಹಿಸಿದ್ದ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

“ಉದಯವಾಣಿ’ ಜತೆಗೆ ಮಾತನಾ ಡಿದ ಅವರು, ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಉತ್ಸವಾದಿಗಳ ಸಂದರ್ಭ ದಲ್ಲಿ ಇನ್ನಷ್ಟು ಹೆಚ್ಚಬಹುದು ಎಂದರು.

ಭವ್ಯ ಶ್ರೀ ರಾಮ ಮಂದಿರದೊಳಗೆ ವಿರಾಜಮಾನರಾಗಿರುವ ಶ್ರೀ ರಾಮ ದೇವರನ್ನು ನೋಡಿ, ಮನ ದೊಳಗೆ ಆನಂದ ತುಂಬಿಕೊಂಡು ಹಿಂದಿ ರುಗುವ ಭಕ್ತರನ್ನು ಕಂಡಾಗ ಜನ್ಮ ಸಾರ್ಥಕ್ಯದ ಭಾವ ಮೂಡುತ್ತದೆ. ದೇಶದ ಮೂಲೆ ಮೂಲೆಗಳಿಂದ ಶ್ರೀ ರಾಮ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ. ಒಂದು ರೀತಿಯ ದಿವ್ಯಾನುಭೂತಿಯ ಕ್ಷಣಗಳಿವು. ಶ್ರೀ ರಾಮ ದೇವರು ಭಾರತದ ಅಖಂಡ ತೆಯ ಸಂಕೇತವಾಗಿ ಎಲ್ಲರನ್ನು ಒಗ್ಗೂಡಿ ಸುತ್ತಿರುವುದೇ ಶ್ರೇಷ್ಠವಾದ ಸಂಗತಿ ಎಂದು ಶ್ರೀಪಾದರು ವರ್ಣಿಸಿದರು.

ದೇವರನ್ನು ನೋಡಲು ಬಂದವ ರೆಲ್ಲರೂ ದೇವರನ್ನು ಕಂಡು ಆನಂದ ತುಂಬಿಕೊಂಡು, ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಊರಿಗೆ ತೆರಳುತ್ತಿ ದ್ದಾರೆ. ಇಲ್ಲಿ ನಿತ್ಯ ಪೂಜೆ ನಿರಂತರವಾಗಿ ನಡೆಯಲಿದೆ. ಇದರ ಜತೆಗೆ ಮಂದಿರ ನಿರ್ಮಾಣದ ಉಳಿದ ಕಾಮಗಾರಿಗಳು ವೇಗವಾಗಿ ಸಾಗಲಿವೆ. ಭಕ್ತರ ದರ್ಶನಕ್ಕೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂಬ ಮಾಹಿತಿ ನೀಡಿದರು.

ಶ್ರೀರಾಮ ಮತ್ತು ಶ್ರೀ ಕೃಷ್ಣ ಇಬ್ಬರನ್ನೂ ಪೂಜಿಸುವ ಸುವರ್ಣ ಅವಕಾಶ ಸಿಕ್ಕಿತಲ್ಲ ಎಂಬ ಪ್ರಸ್ತಾವಕ್ಕೆ, “ಹೌದು. ನನ್ನ ಬಾಳಿನ ಪುಣ್ಯ, ನನ್ನ ಗುರುಗಳ ಆಶೀರ್ವಾದ. ಆದರೆ ದೇವರು ಒಬ್ಬನೇ. ನಾನು ಶ್ರೀ ರಾಮನಲ್ಲಿ ನನ್ನ ಶ್ರೀಕೃಷ್ಣನನ್ನು, ನನ್ನ ಶ್ರೀಕೃಷ್ಣನಲ್ಲಿ ಶ್ರೀರಾಮ ದೇವರನ್ನು ಕಾಣುತ್ತಿದ್ದೇನೆ. ಹಾಗಾಗಿ ಇಬ್ಬರ ರೂಪ, ಹೆಸರಿನಲ್ಲಿ ಭಿನ್ನತೆ ತೋರದು. ಭಗವಂತನಷ್ಟೇ’ ಎಂದರು.

ಅಯೋಧ್ಯೆಗೆ ಭೇಟಿ ನೀಡುತ್ತಿ ರುವ ಭಕ್ತರ ಸಂಖ್ಯೆ ಕುರಿತು ವಿವರಿಸಿ, ಪ್ರಾಣಪ್ರತಿಷ್ಠೆಯ ಮಾರನೇ ದಿನ ಜ. 23ರ ಬಳಿಕ ಆರಂಭಗೊಂಡ ಮಂಡಲೋತ್ಸವ ಪೂರ್ಣಗೊಳ್ಳುವ ವರೆಗೂ ಭಕ್ತರ ಸಂಖ್ಯೆ ಒಂದಿನಿತೂ ಕಡಿಮೆಯಾಗಿಲ್ಲ. ಮುಂದೆಯೂ ದಿನೇದಿನೆ ಹೆಚ್ಚುತ್ತ ಹೋಗುತ್ತದೆಯೇ ವಿನಾ ಕಡಿಮೆಯಾಗದು. ಪ್ರಸ್ತುತ ನಿತ್ಯವೂ ಸರಿಸುಮಾರು 2-3 ಲಕ್ಷ ಭಕ್ತರು ಶ್ರೀ ರಾಮದೇವರ ದರ್ಶನ ಪಡೆಯುತ್ತಿದ್ದಾರೆ. ಹಾಗಾಗಿ ಭಕ್ತರಿಗೆ ಯಾವುದೇ ಅಡ್ಡಿಯಿಲ್ಲದೆ ದರ್ಶನ ಅವಕಾಶ ಮುಂದುವರಿಯಲಿದೆ. ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಬರುತ್ತಿದ್ದಾರೆ ಎಂದರು.

ನಿತ್ಯ ಭಜನೆ ನಿರಂತರ
ಅಯೋಧ್ಯೆಯಲ್ಲಿ ವರ್ಷಕ್ಕೆ ಒಮ್ಮೆ ಉತ್ಸವ ಮಾಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಈ ಬಗ್ಗೆ ಟ್ರಸ್ಟ್‌ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನವಾಗಬೇಕಿದೆ. ಆದರೆ ನಿತ್ಯ ಭಜನೆ ಮುಂದುವರಿಯಲಿದೆ. ಶ್ರೀರಾಮ ಮಂದಿರದ ನಿಗದಿತ ಸ್ಥಳದಲ್ಲಿ ಭಜನೆ ಸೇವೆ ಸಲ್ಲಿಸಲು ಯಾವುದೇ ಅರ್ಜಿ ಸಲ್ಲಿಸುವ ಆವಶ್ಯಕತೆ ಇಲ್ಲ. ವ್ಯವಸ್ಥೆಯ ದೃಷ್ಟಿಯಿಂದ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಭಾರತದ (ಉಳಿದುಕೊಳ್ಳುವ ವ್ಯವಸ್ಥೆ ಬೇಕಾಗದವರಿಗೆ) ಆರಂಭದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಸುತ್ತಮುತ್ತಲಿನ ಭಜನ ಮಂಡಳಿಯವರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಬೇಕಾದರೂ ಬಂದು ಭಜನೆ ಸೇವೆ ನೀಡಬಹುದು ಎಂದರು.

ಹಲವಾರು ಸಂಗೀತ, ನೃತ್ಯ ಕಲಾವಿ ದರೂ ಬಂದು ಶ್ರೀ ರಾಮ ದೇವರಿಗೆ ತಮ್ಮ ನರ್ತನ, ಗಾಯನದ ಮೂಲಕ ಸೇವೆಯನ್ನು ಸಲ್ಲಿಸುತ್ತಿರು ವುದು ವಿಶಿಷ್ಟವಾದುದು. ಎಲ್ಲರೂ ಶ್ರೀರಾಮ ಮಂದಿರ ಹಾಗೂ ಬಾಲರಾಮದೇವರನ್ನು ಕಂಡು ಶತಮಾನದ ಕನಸು ಈಡೇರಿಸಿಕೊಂ ಡೆವು ಎಂಬಂತೆ ಭಾವುಕರಾಗುತ್ತಾರೆ. ಅವೆಲ್ಲವೂ ಶ್ರೇಷ್ಠವಾದ ಗಳಿಗೆಗಳು ಎಂದು ಶ್ರೀಪಾದರು ಉಲ್ಲೇಖಿಸಿದರು.

ಭಾವಕ್ಕೆ ಮಾತ್ರ ನಿಲುಕುವಂಥದ್ದು
ಭಗವಂತನ ಸೇವೆಯನ್ನು ಮಾಡಲು ಸಿಕ್ಕ ಅವಕಾಶ. ಇದು ನನ್ನ ಬಾಳಿನ ದಿವ್ಯ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಭಾವುಕರಾಗಿ ಮಂಡಲೋತ್ಸವ ನೇತೃತ್ವದ ಬಗ್ಗೆ ನುಡಿದ ಪೇಜಾವರ ಶ್ರೀಪಾದರು, ಶ್ರೀ ರಾಮ ದೇವರ ಸನ್ನಿಧಾನದಲ್ಲಿ ಮಂಡಲೋತ್ಸವ ನಡೆಸುವ ಭಾಗ್ಯ ಸಿಗಲು ಮೂಲ ಕಾರಣರು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಅವರು ಮಾಡಿದ ಸೇವೆಯ ಫ‌ಲ ನಮಗೆ ಈ ಭಾಗ್ಯದ ರೂಪದಲ್ಲಿ ಸಿಕ್ಕಿದೆ. ಇದಕ್ಕಿಂತ ದೊಡ್ಡದೇನು ಬೇಕು ಬಾಳಿನಲ್ಲಿ! ಶ್ರೀ ರಾಮ ದೇವರ ಪೂಜೆ ಮಾಡುವಾಗ ಮೂಡುವ ಧನ್ಯತಾ ಭಾವ ಹೇಳಲಿಕ್ಕೆ ಬಾರದು, ಪದಗಳೂ ಸಿಗದು, ಅನುಭವಕ್ಕೆ ಮಾತ್ರ ನಿಲುಕುವಂಥದ್ದು ಹಾಗೂ ಸ್ವ ಅನುಭವಿಸುವಂಥದ್ದು ಎಂದರು.

ಶ್ರೀ ರಾಮ ದೇವರ ಸನ್ನಿಧಾನದಲ್ಲಿ ಮಂಡಲೋತ್ಸವ ನಡೆಸುವ ಭಾಗ್ಯ ಲಭ್ಯವಾಗಲು ಮೂಲ ಕಾರಣರು ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು. ಅವರು ನಡೆಸಿದ ಸೇವೆಯ ಫ‌ಲ ನಮಗೆ ಈ ಭಾಗ್ಯದ ರೂಪ ದಲ್ಲಿ ಲಭಿಸಿದೆ. ಇದಕ್ಕಿಂತ ದೊಡ್ಡ ದೇನು ಬೇಕು ಬಾಳಿನಲ್ಲಿ!
-ಪೇಜಾವರ ಶ್ರೀ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.