ಬೇಟೆಗಾರರ ಗುಂಡೇಟಿಗೆ ಚಿರತೆ ಬಲಿ


Team Udayavani, Aug 29, 2021, 9:27 PM IST

ಬೇಟೆಗಾರರ ಗುಂಡೇಟಿಗೆ ಚಿರತೆ ಬಲಿ

ಕನಕಪುರ: ಬೇಟೆಗಾರರ ಗುಂಡೇಟಿಗೆ 3 ವರ್ಷದ ಹೆಣ್ಣು ಚಿರತೆಯೊಂದು ಬಲಿಯಾಗಿರುವ ಘಟನೆ ಕನಕಪುರ ವಲಯ ಅರಣ್ಯ ವ್ಯಾಪ್ತಿಯ ಚಿಕ್ಕ ಮರಳವಾಡಿ ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಕನಕಪುರ ವಲಯ ಅರಣ್ಯ ಪ್ರದೇಶದ ಚಿಕ್ಕ ಮರಳವಾಡಿ ಗ್ರಾಮದ ಸಮೀಪದ ಜಮೀನಿನಲ್ಲಿ ಚಿರತೆಯ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಎಸಿಎಫ್ ಸೀಮಾ. ಆರ್‌ಎಫ್ಒ ದಾಳೇಶ್‌, ಡಿವೈಆರ್‌ಎಫ್ಒ ರಮೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರ ಗುಂಡೇಟಿಗೆ ಚಿರತೆ ಬಲಿಯಾಗಿರಬಹುದು. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಚಿರತೆಗೆ ಗುಂಡೇಟು ಬಿದ್ದು ಸುಮಾರು 250 ಮೀ. ದೂರ ಬಂದು ನಂತರ ನರಳಾಡಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಎಐಎಡಿಎಂಕೆಯನ್ನು ಹಿಡಿತಕ್ಕೆ ಪಡೆಯಲು ಶಶಿಕಲಾ ಕಾದು ನೋಡುವ ತಂತ್ರ!

ಈ ಸಂಬಂಧ ಮರಳವಾಡಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ರಾಮಚಂದ್ರ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಗುಂಡೇಟಿನಿಂದಲೇ ಚಿರತೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದು, ಚಿರತೆಯ ಮುಂಗಾಲಿನ ಮೇಲ್ಭಾಗದಲ್ಲಿ ತೂರಿರುವ ಗುಂಡು ಹೃದಯವನ್ನು ಸೀಳಿಕೊಂಡು ಮತ್ತೂಂದು ಭಾಗದಿಂದ ಹೊರ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಡೆದು ಚಿರತೆಯನ್ನು ಕನಕಪುರ ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಮಣ್ಣು ಮಾಡಿ, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎಸಿಎಫ್ ಸೀಮಾ, ಆರ್‌ಎಫ್ಒ ದಾಳೇಶ್‌, ಡಿವೈಆರ್‌ಎಫ್ಒ ರಮೇಶ್‌, ಸಿಬ್ಬಂದಿ ಅರುಣ್‌, ರಾಜು ಇದ್ದರು.

ಟಾಪ್ ನ್ಯೂಸ್

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

HDK BJP

BJP ಯೊಂದಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ: ಶಾ ಭೇಟಿ ಬಳಿಕ ಎಚ್.ಡಿ.ಕುಮಾರಸ್ವಾಮಿ

gmail

ಆಗಸ್ಟ್ ನಿಂದ Gmail ಸ್ಥಗಿತ? ಸ್ಪಷ್ಟನೆ ನೀಡಿದ ಗೂಗಲ್

CT Ravi

BJP; ಬೇಡಿಕೆಯಿಟ್ಟಿಲ್ಲ,ಪಕ್ಷ ಬಯಸಿದರೆ ಸ್ಪರ್ಧಿಸುತ್ತೇನೆ: ಸಿ.ಟಿ.ರವಿ

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿಯ ದೇವಿಯ ಪೂಜೆ

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿ ದೇವಿಯ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನಗರ: ಬೇಸಿಗೆಗೆ ಮುನ್ನವೇ ಜಿಲ್ಲೆಯಲ್ಲಿ ನೀರಿನ ಬವಣೆ

ರಾಮನಗರ: ಬೇಸಿಗೆಗೆ ಮುನ್ನವೇ ಜಿಲ್ಲೆಯಲ್ಲಿ ನೀರಿನ ಬವಣೆ

Suspended: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ‌ಅಮಾನತ್ತು

Suspended: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ‌ಅಮಾನತ್ತು

Ramanagar; ರಾಜಕೀಯತಿರುವು ಪಡೆದ ಪೊಲೀಸ್-ವಕೀಲರ ತಿಕ್ಕಾಟ;DK ವಿರುದ್ದ ಎಚ್ಡಿಕೆ-ಅಶೋಕ್ ಆರೋಪ

Ramanagar; ರಾಜಕೀಯತಿರುವು ಪಡೆದ ಪೊಲೀಸ್-ವಕೀಲರ ತಿಕ್ಕಾಟ;DK ವಿರುದ್ದ ಎಚ್ಡಿಕೆ-ಅಶೋಕ್ ಆರೋಪ

1-wqewqewqe

Ramanagara: ಡಿಸಿ ಕಚೇರಿಗೆ ವಕೀಲರ ದಿಗ್ಬಂಧನ!

12

Kanakapura: ದುಷ್ಕರ್ಮಿಗಳಿಂದ ನಿಧಿ ಶೋಧ: ಪಾಂಡವರಗುಡ್ಡೆ ರೈತರಲ್ಲಿ ಹೆಚ್ಚಿದ ಆತಂಕ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

1-adsddasds

Canada; Halton Regional ಸಾರ್ವಜನಿಕ ಆರೋಗ್ಯ ಮುಖ್ಯಸ್ಥೆಯಾಗಿ ಡಾ. ದೀಪಿಕಾ ಲೋಬೋ

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

HDK BJP

BJP ಯೊಂದಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ: ಶಾ ಭೇಟಿ ಬಳಿಕ ಎಚ್.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.