Israel: ಪೀಳಿಗೆ ಬೆಳೆಸಲು ಮೃತ ಇಸ್ರೇಲಿಗರ ವೀರ್ಯ ಸಂಗ್ರಹ!
Team Udayavani, Nov 16, 2023, 12:07 AM IST
ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವೆಯೇ, ಇಸ್ರೇಲಿಗರು ತಮ್ಮ ಪೀಳಿಗೆ ಯನ್ನು ಮುಂದುವರಿಸಲು ಯುದ್ಧದಲ್ಲಿ ಹುತಾತ್ಮರಾದ ಯೋಧರು ಮತ್ತು ನಾಗರಿಕರ ವೀರ್ಯವನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. “ಅ.7ರಂದು ಹಮಾಸ್ ದಾಳಿಯಿಂದ ಮೃತಪಟ್ಟ 39 ಇಸ್ರೇಲಿ ಪುರುಷರ ವೀರ್ಯ ವನ್ನು ಸಂಗ್ರಹಿಸಲಾಗಿದೆ. ಭವಿಷ್ಯ ದಲ್ಲಿ ಸಂತಾನೋತ್ಪತ್ತಿಗಾಗಿ ಇದನ್ನು ಸುರಕ್ಷಿತವಾಗಿ ಇಡಲಾಗಿದೆ’ ಎಂದು ನೆಸ್ಸೆಟ್ ಆರೋಗ್ಯ ಸಮಿತಿಯು ತಿಳಿಸಿದೆ.
ಇಸ್ರೇಲ್ನ ಕಾನೂನಿನ ಪ್ರಕಾರ, ಮೃತ ವ್ಯಕ್ತಿಯ ಪತ್ನಿ ಅಥವಾ ಪೋಷಕರು ಮೃತರ ವೀರ್ಯವನ್ನು ಸಂಗ್ರಹಿಸುವಂತೆ ಮನವಿ ಸಲ್ಲಿಸಬಹುದು. ವ್ಯಕ್ತಿಯು ಮೃತಪಟ್ಟ 24 ಗಂಟೆಯೊಳಗೆ ವೀರ್ಯ ಸಂಗ್ರ ಹಿಸಿದರೆ, ಅದು ಹೆಚ್ಚು ಫಲಪ್ರದವಾಗಲಿದೆ. ಆದರೆ ವ್ಯಕ್ತಿ ಮೃತಪಟ್ಟ ಹಲವು ದಿನಗಳ ಅನಂತರವೂ ವೀರ್ಯ ಸಂಗ್ರಹಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. “ಅಕ್ಟೋಬರ್ ಅನಂತರ ಮೃತ ಇಸ್ರೇಲಿ ಯೋಧರು ಮತ್ತು ನಾಗರಿಕರ ವೀರ್ಯ ಸಂಗ್ರಹಿಸುವಂತೆ ಅವರ ಕುಟುಂಬದ ವರಿಂದ ಮನವಿಗಳು ಸಲ್ಲಿಕೆಯಾಗುತ್ತಿರುವ ಸಂಖ್ಯೆ ಅಧಿಕ ವಾಗಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ವೀರ್ಯ ಸಂಗ್ರಹ ಮತ್ತು ಅದರ ಸಂರಕ್ಷಣೆ ಸವಾಲಿನ ವಿಷಯವಾಗಿದೆ’ ಎಂದು ರೆಹೋವೋಟ್ನ ಕಪ್ಲಾನ್ ವೈದ್ಯಕೀಯ ಕೇಂದ್ರದ ಭ್ರೂ ಣಶಾಸ್ತ್ರ ತಜ್ಞ ಡಾ| ಯೇಲ್ ಹರಿರ್ ಮಾಹಿತಿ ನೀಡಿದ್ದಾರೆ.