ಓಟದ ದೊರೆಯ ಮಗಳ ಹೆಸರು ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್!
Team Udayavani, Jul 9, 2020, 6:55 AM IST
ಕಿಂಗ್ಸ್ಟನ್ (ಜಮೈಕಾ): ಓಟದ ದೊರೆ, ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಇವರ ಪುಟಾಣಿ ಪುತ್ರಿ. ಈಕೆಯ ಚಿತ್ರವೊಂದನ್ನು ಟ್ವಿಟರ್ನಲ್ಲಿ ಪ್ರಕಟಿಸಿರುವ ಬೋಲ್ಟ್, ಮಗಳ ಹೆಸರನ್ನೂ ಉಲ್ಲೇಖೀಸಿದ್ದಾರೆ. ಈ ಹೆಸರು ಬಹಳ ಆಕರ್ಷಕವಾಗಿದೆ. ತಮ್ಮ ಒಲಿಂಪಿಕ್ ಸಾಧನೆಯ ಸವಿನೆನಪಿಗಾಗಿ “ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್’ ಎಂಬ ಹೆಸರನ್ನಿರಿಸಿದ್ದಾರೆ.
ಬಾಳಸಂಗಾತಿ ಕ್ಯಾಸಿ ಬೆನೆಟ್ಗೆ ಹುಟ್ಟಿದ ಹಬ್ಬದ ಶುಭಾಶಯ ತಿಳಿಸುವ ಸಂದರ್ಭದಲ್ಲಿ ಮಗಳ ಹೆಸರನ್ನೂ ಬಹಿರಂಗಗೊಳಿಸುವ ಮೂಲಕ ಬೋಲ್ಟ್ ಕ್ರೀಡಾಭಿಮಾನಿಗಳ ಕುತೂಹಲ ತಣಿಸಿದರು.
“ನಾವೀಗ ಪುತ್ರಿ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಜತೆ ನೂತನ ಅಧ್ಯಾಯವೊಂದನ್ನು ಎದುರು ನೋಡುತ್ತಿದ್ದೇವೆ’ ಎಂದು ಉಸೇನ್ ಬೋಲ್ಟ್ ಪ್ರಕಟಿಸಿದ್ದಾರೆ. ಮೇ 14ರಂದು ಈಕೆಯ ಜನನವಾಗಿತ್ತು.
11 ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಉಸೇಲ್ ಬೋಲ್ಟ್, ಸತತ 3 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ವಿಶ್ವದ ಏಕೈಕ ಸಾಧಕನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ