Lok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

Team Udayavani, Apr 21, 2024, 6:50 AM IST

eLok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

ಸುಳ್ಯ: ತಾಲೂಕಿನಲ್ಲಿ ಚುನಾವಣ ಕಾವು ಅಷ್ಟೇನೂ ಇನ್ನಷ್ಟೇ ಏರಬೇಕಿದೆ. ಸ್ಥಳೀಯ ಚುನಾವಣೆಗಳ ಸಂದರ್ಭದಲ್ಲೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುವ ದೃಶ್ಯಾವಳಿ ಹಳ್ಳಿಹಳ್ಳಿ ಗಳಲ್ಲೂ ಸಾಮಾನ್ಯ. ಆದರೆ ಈ ಬಾರಿ ಅದಾವುದೂ ಕಾಣ ಸಿಗುತ್ತಿಲ್ಲ. ಮತದಾನಕ್ಕೆ ಆರು ದಿನಗಳಷ್ಟೇ ಇದ್ದರೂ ಪ್ರಚಾರದ ಅಬ್ಬರವಾಗಲೀ, ಕಾರ್ಯಕರ್ತರ ಬಿರುಸಿನ ಓಡಾಟವಾಗಲೀ ಕಂಡುಬರುತ್ತಿಲ್ಲ.

ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿ ಗಳು ಈವರೆಗೆ ಎರಡು ಬಾರಿ ಕ್ಷೇತ್ರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ, ಸಭೆಗಳಲ್ಲಿ ಪಾಲ್ಗೊಂಡು ಪ್ರಚಾರ ನಡೆಸಿದ್ದಾರೆ. ಉಳಿದಂತೆ ಸಣ್ಣ-ಪುಟ್ಟ ಸಭೆಗಳು ನಡೆಯುತ್ತಿವೆಯೇ ಹೊರತು ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲೂ ಜೋರು ಪ್ರಚಾರ ಕಂಡಿಲ್ಲ.

ತಪ್ಪದೆ ಮತ ಚಲಾಯಿಸುತ್ತೇವೆ
ಸುಳ್ಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗಳು ಪ್ರಮುಖ ಕಡೆಗಳಲ್ಲಿ ಸಭೆ, ಭೇಟಿ ನೀಡಿ ಮತಯಾಚಿಸಿದ್ದನ್ನು ಹೊರತು ಪಡಿಸಿದಂತೆ ಬೃಹತ್‌ ಸಭೆ, ಸಮಾವೇಶ ನಡೆದಿಲ್ಲ. ಚುನಾವಣೆ ದಿನದಂದು ನಾವು ತಪ್ಪದೆ ಮತ ಚಲಾಯಿಸುತ್ತೇವೆ ಎನ್ನುತ್ತಾರೆ ಹಲವರು. ಪ್ರಚಾರದ ಬಗ್ಗೆ ನಮಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂದು ಕೆಲವರು ಉತ್ತರಿಸಿದರೆ, ಮತ್ತೆ ಕೆಲವರು ರಾಜಕೀಯ ಪಕ್ಷಗಳ, ನಾಯಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪತ್ರಿಕಾಗೋಷ್ಠಿ ಭರಾಟೆ
ಚುನಾವಣೆ ಘೋಷಣೆಯಾದ ದಿನದಿಂದ ರಾಜಕೀಯ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳು ಪತ್ರಿಕಾಗೋಷ್ಠಿ, ಸಭೆ ನಡೆಸಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಜನರ ಬೇಡಿಕೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿ ಪರ ಮಾತನಾಡಿ, ಇನ್ನೊಂದು ಪಕ್ಷಗಳನ್ನು ದೂರುತ್ತಿದ್ದಾರೆ. ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸುತ್ತಿದ್ದಾರೆ. ಇವೆಲ್ಲದರ ನಡುವೆ ಒಂದೆರಡು ಕಡೆ ಮತದಾನ ಬಹಿಷ್ಕಾರದ ಮಾತು ಕೇಳಿಬರುತ್ತಿದೆಯಾದರೂ ಅದು ಅಷ್ಟೊಂದು ತೀವ್ರತೆಯನ್ನು ಹೊಂದಿಲ್ಲ. ಕ್ಷೇತ್ರದ ಕೆಲವೆಡೆ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರ ಪಕ್ಷಾಂತರ ಪರ್ವ ಕೂಡ ನಡೆದಿದೆ.

“ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ನಮಸ್ಕಾರ, ಹೇಗಿದ್ದೀರಾ ಎಂದು ಕೇಳುತ್ತಾರೆ. ಚುನಾವಣೆ ಬಳಿಕ ನಾವು ನಮಸ್ಕರಿಸಿದರೂ ಅವರು ನಮ್ಮತ್ತ ನೋಡು ವುದಿಲ್ಲ. ಚುನಾವಣೆ ಸನಿಹ ವಾದಾಗ ಮಾತ್ರ ಅವರಿಗೆ ನಮ್ಮ ನೆನಪಾಗುತ್ತದೆ’ ಎಂದು ಸುಳ್ಯದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರೆ, ಚುನಾವಣೆ ತುಂಬ ದಿನಗಳವರೆಗೆ ನಡೆಯುತ್ತಿರುವುದು ಸರಿ ಕಾಣುತ್ತಿಲ್ಲ, ಮೊದಲೇ ಸಿದ್ಧತೆಗಳನ್ನು ಮಾಡಿ ಕೊಂಡು ಅಲ್ಪ ದಿನಗಳಲ್ಲೇ ಪ್ರಕ್ರಿಯೆ ಮುಗಿಸಬೇಕು. ತುಂಬಾ ದಿನಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿದ್ದರೆ ಜನಸಾಮಾನ್ಯರಿಗೆ ಸಮಸ್ಯೆ ಎಂಬುದು ಹಲವು ಮತದಾರರ ಅಭಿಪ್ರಾಯ.

ವಿವಿಧ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿ, ಪ್ರಾರ್ಥನೆ ಸಲ್ಲಿಸುವ ಕೆಲಸವೂ ನಡೆಯುತ್ತಿದೆ. ನಾಗರಿಕರು ತಮ್ಮ ಸಮಸ್ಯೆಯನ್ನು ಅಭ್ಯರ್ಥಿಗಳಿಗೆ ಮನವರಿಕೆ ಮಾಡಲು ಇದನ್ನೇ ಅವಕಾಶವನ್ನಾಗಿ ಬಳಸುತ್ತಿದ್ದಾರೆ.

ಮತದಾನಕ್ಕೆ ಬೆರಳೆಣಿಕೆಯ ದಿನಗ ಳಷ್ಟೇ ಬಾಕಿ ಇದ್ದು, ಪಕ್ಷದವರು ಮನೆ ಮನೆ ಭೇಟಿ ಯೋಜಿಸಿದ್ದಾರೆ. ಆದರೆ ಬಹುತೇಕ ಮಂದಿ ತಮ್ಮದೇ ಕಾರಣಗಳೊಂದಿಗೆ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿರುವಂತೆ ತೋರುತ್ತಿದ್ದು, ಪ್ರಚಾರದ ಬಗ್ಗೆ ಯೋಚಿಸುತ್ತಿಲ್ಲ ಎಂಬ ಅಭಿಪ್ರಾಯವಿದೆ. ಸಾಮಾಜಿಕ ಜಾಲ ತಾಣಗಳ ಮೂಲಕವೂ ಮತದಾರರನ್ನು ಸಂಪರ್ಕಿಸುವ ಅಭ್ಯರ್ಥಿಗಳ ಪ್ರಯತ್ನವೂ ಚಾಲ್ತಿಯಲ್ಲಿದೆ.

- ದಯಾನಂದ ಕಲ್ನಾರ್‌

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (5) copy

Vitla: ಮಲೆತ್ತಡ್ಕ ಗೌರಿಮೂಲೆ: ಈಡೇರದ ಸರ್ವಋತು ರಸ್ತೆ ಬೇಡಿಕೆ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

7-uv-fusion

UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.