ರಾಜಕಾರಣಿ ಅಳಿಯನ ಬಡ್ತಿಗೆ ನಡೆಯುತ್ತಿದೆ ಅಕ್ರಮ ಕಸರತ್ತು


Team Udayavani, Aug 27, 2019, 3:06 AM IST

rajakaani

ಹುಬ್ಬಳ್ಳಿ: ರಾಜ್ಯದ ಉನ್ನತ ಆಡಳಿತ ಸ್ಥಾನದಲ್ಲಿರುವ ರಾಜಕಾರಣಿ ಯೊಬ್ಬರ ಅಳಿಯನಿಗೆ ಶತಾಯಗತಾಯ ಬಡ್ತಿ ನೀಡಲೇಬೇಕು ಎನ್ನುವ ಪ್ರಯತ್ನದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರತರಾಗಿದ್ದು, ಬಡ್ತಿ ಎಂಬುದು ಅಧಿಕಾರಿಗಳ ಪಾಲಿಗೆ ಗಜಪ್ರಸವವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರ, ಅಂ.ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.

ಆದರೆ, ಆಡಳಿತಾತ್ಮಕ ತಿಕ್ಕಾಟದಿಂದ ಅವ್ಯವಹಾರಗಳ ಕೊಂಪೆ ಎಂಬ ಕಳಂಕ ಅಂಟಿಸಿಕೊಂಡಿದೆ. ಇದೀಗ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿಯಿಂದ ಹಿಡಿದು ಬಡ್ತಿ ವಿಚಾರದಲ್ಲೂ ಸ್ವಜನ ಪಕ್ಷಪಾತ ಹಾಗೂ ಶಿಸ್ತು ಪ್ರಕರಣಗಳ ಹೆಸರಲ್ಲಿ ಅಧಿಕಾರಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಸೇವಾ ಜ್ಯೇಷ್ಠತೆ ಇಲ್ಲದಿದ್ದರೂ ಪ್ರಮುಖ ರಾಜಕಾರಣಿಯೊಬ್ಬರ ಸಂಬಂಧಿ ಎನ್ನುವ ಕಾರಣಕ್ಕೆ ಹೇಗಾದರೂ ಮಾಡಿ ಅವರಿಗೆ ಬಡ್ತಿ ನೀಡಬೇಕೆಂಬ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಬಡ್ತಿ ನೀಡಲೇಬೇಕು ಎನ್ನುವ ಅಧಿಕಾರಿ ಜ್ಯೇಷ್ಠತಾ ಪಟ್ಟಿಯ ಪ್ರಕಾರ ಯಾವ ಹಂತದಲ್ಲೂ ಬಡ್ತಿಗೆ ಅರ್ಹರಾಗಿಲ್ಲ. ಆದರೆ ಇದೀಗ ಮೇಲಧಿಕಾರಿಗಳ ಮೇಲೆ ಇರುವ ಶಿಸ್ತು ಪ್ರಕರಣಗಳನ್ನು ಬಾಕಿ ಉಳಿಸಿ ಇವರಿಗೆ ಬಡ್ತಿ ನೀಡಲು ಸಿದ್ಧತೆ ನಡೆದಿದೆ. ರೆಗ್ಜಿನ್‌ ಗುಣಮಟ್ಟದ ವಿಚಾರದಲ್ಲಿ ವಿಭಾಗೀಯ ತಾಂತ್ರಿಕ ಶಿಲ್ಪಿಗಳಿಗೆ ನೀಡಿದ್ದ ಚಾರ್ಜ್‌ಶೀಟ್‌ಗಳನ್ನೇ ಮುಂದಿಟ್ಟುಕೊಂಡು ಸೇವಾ ಜ್ಯೇಷ್ಠತಾ ಹೊಂದಿರುವ ಅಧಿಕಾರಿಗಳನ್ನು ಹಿಂದಿಕ್ಕಿ, ಪ್ರಭಾವಿ ರಾಜ ಕಾರಣಿಯೊಬ್ಬರ ಸಂಬಂಧಿಗೆ ಬಡ್ತಿ ನೀಡುವ ಪ್ರಯತ್ನ ನಡೆದಿದೆ.

ರೆಗ್ಜಿನ್‌ ಪೂರೈಕೆ ವಿಚಾರದಲ್ಲಿ ಡಿಎಂಇಗಳ ಪಾತ್ರ ಇಲ್ಲ ಎಂದು ಮನವರಿಕೆಯಾಗಿದ್ದರೂ ಈ ಪ್ರಕರಣ ಜೀವಂತವಾಗಿ ಉಳಿಸಿ ಪ್ರಭಾವಿಗಳ ಸಂಬಂಧಿಯೊಬ್ಬರಿಗೆ ಅನುಕೂಲ ಮಾಡಿಕೊಡ ಲಾಗು ತ್ತಿದೆ. ಓರ್ವ ವ್ಯಕ್ತಿಯ ಬಡ್ತಿಗಾಗಿ ಅರ್ಹ ಅಧಿಕಾರಿಗಳಿಗೆ ವಂಚಿಸಲಾಗುತ್ತಿದೆ. ಕಣ್ಣೆದುರೇ ಇಂತಹ ಅನ್ಯಾಯಗಳು ನಡೆಯುತ್ತಿದ್ದರೂ ಇದನ್ನು ಪ್ರತಿಭಟಿಸುವ ನೈತಿಕತೆ ಕಳೆದುಕೊಂಡಿ ದ್ದೇವೆ ಎಂಬುದು ಕೇಂದ್ರ ಕಚೇರಿಯ ಅಧಿಕಾರಿಯೊಬ್ಬರ ಬೇಸರದ ಮಾತು.

ಯಾವ ಹುದ್ದೆಗೆ ಬಡ್ತಿ?: ಈಗಾಗಲೇ ತಾತ್ಕಾಲಿಕ ಪಟ್ಟಿ ನಂತರ ಪೂರ್ಣ ಪ್ರಮಾಣದ ಪಟ್ಟಿ ಪ್ರಕಟಿಸಿ ಬಡ್ತಿಗೆ ಬೇಕಾದ ಎಲ್ಲ ಕಾರ್ಯ ಗಳು ಪೂರ್ಣಗೊಂಡಿವೆ. ಇತ್ತೀಚೆಗಷ್ಟೇ ಕ್ಲಾಸ್‌ ಒನ್‌ ಸೀನಿಯರ್‌ ದರ್ಜೆಯಿಂದ ಆಯ್ಕೆ ಶ್ರೇಣಿಗೆ ಬಡ್ತಿ ನೀಡಲಾಗಿದೆ. ಕಾರ್ಮಿಕ, ಕಾನೂನು, ಮಾಹಿತಿ ತಂತ್ರಜ್ಞಾನ, ಮುದ್ರಣ, ಭದ್ರತೆ, ಉಗ್ರಾಣ, ಅಂಕಿ-ಸಂಖ್ಯೆ, ಆಡಳಿತ, ಸಿವಿಲ್‌ ಶಾಖೆಯ ಬಡ್ತಿ ಪಟ್ಟಿ ಸಿದ್ಧಗೊಂಡಿದೆ. ಆದರೆ ಇದೀಗ ವಿಭಾಗೀಯ ತಾಂತ್ರಿಕ ಶಿಲ್ಪಿಯಿಂದ ಉಪ ಮುಖ್ಯ ತಾಂತ್ರಿಕ ಶಿಲ್ಪಿ ಹುದ್ದೆಗೆ ಬಡ್ತಿ ನೀಡಬೇಕು ಎಂದು ಹಠಕ್ಕೆ ಬಿದ್ದಿರುವುದರ ಪರಿಣಾಮ ಉಳಿದೆಲ್ಲಾ ಶಾಖೆಗಳ ಬಡ್ತಿ ನನೆಗುದಿಗೆ ಬಿದ್ದಿದೆ. ಹೀಗಾಗಿ ಬಡ್ತಿ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಬೆಂಗಳೂರಿನ ಕೇಂದ್ರ ಕಚೇರಿ ಬಾಗಿಲು ತಟ್ಟುತ್ತಿದ್ದಾರೆ.

ಒಬ್ಬರಿಗಾಗಿ ಇನ್ನೊಬ್ಬರಿಗೆ ಹಿಂಬಡ್ತಿ ಚಿಂತನೆ: ಲೆಕ್ಕಪತ್ರ ಶಾಖೆ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಬೇಕು ಎಂದು ಆಡಳಿತ ಮಂಡ ಳಿಯ ನಿರ್ಧಾರವಾಗಿದ್ದು, ಕ್ಲಾಸ್‌ ಒನ್‌ ಸೀನಿಯರ್‌ ಎರಡು ಹುದ್ದೆಗಳು ಇರುವುದರಿಂದ ಜ್ಯೇಷ್ಠತಾ ಪಟ್ಟಿ ಪ್ರಕಾರ ಇಬ್ಬರು ಅರ್ಹತೆ ಹೊಂದಿದ್ದು, ಮೂರನೇ ವ್ಯಕ್ತಿಗೆ ಬಡ್ತಿ ನೀಡುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಬಡ್ತಿ ಪಡೆ ದಿದ್ದ ಅಧಿಕಾರಿಯೊಬ್ಬರಿಗೆ ನೋಟಿಸ್‌ ಜಾರಿ ಮಾಡಿ ಹಿಂಬಡ್ತಿ ಯಾಕೆ ಮಾಡಬಾರದು ಎಂದು ಕಾರಣ ಕೇಳಲಾಗಿದೆ. ವಿಪ ರ್ಯಾಸ ಅಂದರೆ ಬಡ್ತಿ ಕೇಳದ ಅಧಿಕಾರಿಗೆ ಬಡ್ತಿ ನೀಡಿ ಇದೀಗ ಇನ್ನೊಬ್ಬರಿಗಾಗಿ ಹಿಂಬಡ್ತಿ ನೀಡಲು ಮುಂದಾಗಿರುವುದು ಯಾವ ನ್ಯಾಯ ಎಂಬುದು ಅಧಿಕಾರಿಗಳ ವಾದ.

ಸಂಸ್ಥೆಯಲ್ಲಿ ನಡೆದಿದ್ದ ಅವ್ಯವಹಾರ, ಸಂಸ್ಥೆಗೆ ನಷ್ಟ ಮಾಡು ವಂತಹ ಪ್ರಕರಣದಲ್ಲಿ ದಿಟ್ಟ ಕ್ರಮ ಕೈಗೊಂಡ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉನ್ನತಾಧಿಕಾರಿಯ ಮೇಲೆ ಬಡ್ತಿಗಾಗಿ ಒತ್ತಡ ಹಾಕುತ್ತಿದ್ದು, ಇದಕ್ಕೆ ಒಪ್ಪದಿರುವ ಕಾರಣದಿಂದ ಬಡ್ತಿ ಪಟ್ಟಿಗೆ ಹಂತಿಮ ಅಂಕಿತ ಬಿದ್ದು ಹೊರಬೀಳಲು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಸರ್ಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ: ಇಲಾಖೆಯಲ್ಲಿ ರಾಜಕೀಯ ಒತ್ತಡ, ಇನ್ನಾವುದೇ ಕಾರಣದಿಂದ ಅಧಿಕಾರಿಗಳ ಮೇಲಿನ ಶಿಸ್ತು ಪ್ರಕರಣದ ಹೆಸರಲ್ಲಿ ಬಡ್ತಿ, ಸೇರಿದಂತೆ ಇತರೆ ಸೌಲಭ್ಯಗಳು ತಡೆ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ.ಆದೇಶ ಸಮರ್ಪಕವಾಗಿ ಪಾಲನೆಯಾಗ ದಿ ರುವುದು ಸಣ್ಣ ಪುಟ್ಟ ಶಿಸ್ತು ಪ್ರಕರಣಗಳ ಬಾಕಿಯಿಟ್ಟು ಬಡ್ತಿಯಿಂದ ವಂಚಿಸಲಾಗುತ್ತಿದೆ.

ಸ್ವಜನ ಪಕ್ಷ , ಪ್ರಾಮಾಣಿಕ ಅಧಿಕಾರಿಗಳನ್ನು ಹತ್ತಿಕ್ಕುವ ಪ್ರಕರಣಗಳು ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಜ್ಯೇಷ್ಠತಾ ಪಟ್ಟಿ ಪ್ರಕಾರ ಬಡ್ತಿಗೆ ಅರ್ಹತೆಯಿದೆ. ಯಾವುದೇ ಶಿಸ್ತು ಪ್ರಕರಣಗಳಿಲ್ಲ. ಇನ್ನೇನು ಬಡ್ತಿ ದೊರೆಯುತ್ತದೆ ಎನ್ನುವ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ.
-ಹೆಸರು ಹೇಳಲಿಚ್ಛಿಸದ ಅಧಿಕಾರಿ

* ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.