ಷರತ್ತುಗಳಿಲ್ಲದ ಪರಿಶುದ್ಧ ಪ್ರೀತಿ ಮತ್ತು ಒಲುಮೆ

Team Udayavani, Oct 13, 2020, 6:10 AM IST

ಷರತ್ತುಗಳಿಲ್ಲದ ಪರಿಶುದ್ಧ ಪ್ರೀತಿ ಮತ್ತು ಒಲುಮೆ

ಸಾಂದರ್ಭಿಕ ಚಿತ್ರ

ಸಂಬಂಧಗಳು ಷರತ್ತು ಬದ್ಧವಾಗಿರುತ್ತವೆ. ಆದರೆ ಪ್ರೀತಿ, ಒಲುಮೆ, ಗೆಳೆತನಗಳು ಹಾಗಲ್ಲ. ಷರತ್ತು, ನಿಯಮಕ್ಕೆ ಒಳಪಟ್ಟರೆ ಅದು ಪ್ರೀತಿಯಾಗದು, ಗೆಳತನವಾ ಗದು. ಪ್ರೀತಿಯ ಸಂಬಂಧಗಳಲ್ಲಿ “ನಾನು ಇದನ್ನು ಕೊಡುತ್ತೇನೆ, ನೀನು ಅದನ್ನು ನೀಡು’ ಎಂದಿ ರುವುದಿಲ್ಲ. “ನೀನು ಅದು ಕೊಟ್ಟಿಲ್ಲ, ಹಾಗಾಗಿ ನಾನು ಇದನ್ನು ಕೊಡುವುದಿಲ್ಲ’ ಎಂಬುದೂ ಇರುವುದಿಲ್ಲ. ಪ್ರೀತಿ ಸದಾ ಪರಿಶುದ್ಧ. ನಮ್ಮ ಬದುಕನ್ನು ಕೂಡ ನಾವು ಷರತ್ತುಗಳಿಲ್ಲದೆ ಪ್ರೀತಿಸಬೇಕು. ಈ ಜಗತ್ತನ್ನು, ನಮ್ಮ ಸುತ್ತಮುತ್ತಲಿನವ ರನ್ನು, ನಿಸರ್ಗವನ್ನು ಕೂಡ ಲಾಭ-ನಷ್ಟಗಳ ಹಂಗಿಲ್ಲದೆ, ಪ್ರೀತಿಸಬೇಕು. ಸದ್ಗುರು ಜಗ್ಗಿ ವಾಸುದೇವ್‌ ಇದಕ್ಕೊಂದು ಕಥೆ ಹೇಳುತ್ತಾರೆ.

ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನಿಗೆ ಇಬ್ಬರು ಮಕ್ಕಳು. ಸಣ್ಣಂದಿನಿಂ ದಲೇ ಇಬ್ಬರೂ ತಂದೆಯೊಂದಿ ಗೆ ಹೊಲದಲ್ಲಿ ಕೆಲಸ ಮಾಡು ವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ದೊಡ್ಡವರಾದ ಮೇಲೆಯೂ ಅದನ್ನು ಮುಂದು ವರಿಸಿದರು. ತಂದೆ ಮಕ್ಕಳ ಪರಿಶ್ರಮದಿಂದ ಆಸ್ತಿ ಹೆಚ್ಚಿತು, ಉತ್ಪಾದನೆಯೂ ವೃದ್ಧಿಸಿತು. ಕಾಲಾಂತರದಲ್ಲಿ ರೈತ ವೃದ್ಧನಾದಾಗ ಮಕ್ಕಳನ್ನು ಕರೆದು ಹೇಳಿದ, “ಒಂದು ನೆನಪಿಡಿ, ನನ್ನ ಅವಸಾನ ವಾದ ಬಳಿಕ ನೀವು ಒಲುಮೆ ಯಿಂದ ಬಾಳಬೇಕು. ಆಸ್ತಿ ಯನ್ನು ಪಾಲು ಮಾಡಿಕೊಳ್ಳ ಬಾರದು. ಉತ್ಪಾದನೆಯಲ್ಲಿ ಅರ್ಧರ್ಧ ಹಂಚಿಕೊಳ್ಳಬೇಕು’. ಸ್ವಲ್ಪ ಸಮಯದ ಬಳಿಕ ರೈತ ಮರಣಿಸಿದ. ಇಬ್ಬರೂ ಮಕ್ಕಳು ಪಿತೃವಾಕ್ಯವನ್ನು ಶಿರಸಾ ವಹಿಸಿರು. ಅವರಲ್ಲಿ ಒಬ್ಬನಿಗೆ ಮದುವೆ ಯಾಯಿತು. ಮಕ್ಕಳಾದರು. ಬದುಕು ಸುಖವಾಗಿ ಸಾಗುತ್ತಿತ್ತು.

ಒಂದು ದಿನ ಒಂದು ಹುಳ ಹಾರಿಬಂದು ತಮ್ಮನ ತಲೆಯನ್ನು ಹೊಕ್ಕು ಒಂದು ಆಲೋಚನೆಯನ್ನು ಉಂಟು ಮಾಡಿತು. “ಅಣ್ಣನಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ. ನಾನು ಒಂಟಿ. ಅಣ್ಣನಿಗೆ ಹೆಚ್ಚು ಉತ್ಪನ್ನದ ಅಗತ್ಯವಿದೆ. ನಾನು ಹೀಗೆಯೇ ಕೊಟ್ಟರೆ ಅವನು ತೆಗೆದುಕೊಳ್ಳಲಾರ…’ ಇದಕ್ಕಾಗಿ ತಮ್ಮ ಒಂದು ಉಪಾಯ ಮಾಡಿದ. ಪ್ರತೀ ದಿನ ತನ್ನ ಗೋದಾಮಿನಿಂದ ಕೆಲವು ಗೋಣಿ ಧಾನ್ಯವನ್ನು ಹೊತ್ತೂಯ್ದು ಅಣ್ಣನ ಗೋದಾಮಿನಲ್ಲಿರಿಸತೊಡಗಿದ.

ಅದೇ ಹುಳ ಅಣ್ಣನ ತಲೆಯನ್ನೂ ಹೊಕ್ಕಿತು. ಆತ ಯೋಚಿಸಿದ, “ನನಗೆ ಸಂಸಾರ ವಿದೆ. ಆದರೆ ತಮ್ಮ ಒಂಟಿ. ವಯಸ್ಸಾದ ಬಳಿಕ ಅವನಿಗೆ ದುಡಿಯಲು ಆಗದು. ಆ ಕಾಲಕ್ಕಾಗಿ ಈಗಲೇ ಶೇಖರಿಸಿಕೊಳ್ಳಬೇಕು. ಅದಕ್ಕಾಗಿ ನನ್ನ ಪಾಲಿನಿಂದ ಅವನಿಗೆ ಹೆಚ್ಚು ಕೊಡಬೇಕು. ಹೀಗೆಯೇ ಕೊಟ್ಟರೆ ಅವನು ಸ್ವೀಕರಿಸಲಾರ…’ ಅದಕ್ಕಾಗಿ ಅವನೂ ಪ್ರತೀ ರಾತ್ರಿ ತನ್ನ ಉಗ್ರಾಣದಿಂದ ಒಂದು ಚೀಲ ಧಾನ್ಯವನ್ನು ಒಯ್ದು ತಮ್ಮನ ಉಗ್ರಾಣದಲ್ಲಿರಿಸಿ ಬರತೊಡಗಿದ.

ಅನೇಕ ವರ್ಷಗಳು ಹೀಗೆಯೇ ಸಂದವು. ಪರಸ್ಪರರಿಗೆ ಈ ರಹಸ್ಯ ಬಯಲಾಗಲೇ ಇಲ್ಲ. ಇಬ್ಬರೂ ವೃದ್ಧರಾದರು. ಕೊನೆ ಗೊಂದು ದಿನ ರಾತ್ರಿ ಧಾನ್ಯದ ಗೋಣಿ ಒಯ್ಯುತ್ತಿ ದ್ದಾಗ ಇಬ್ಬರೂ ಮುಖಾ ಮುಖೀಯಾದರು. ಯಾರೂ ಏನೂ ಹೇಳಲೇ ಇಲ್ಲ. ಗೋಣಿ ಚೀಲದೊಂದಿಗೆ ಮನೆಗೆ ಮರಳಿ ಮಲಗಿದರು. ಸ್ವಲ್ಪ ಕಾಲದ ಬಳಿಕ ಇಬ್ಬರದೂ ದೇಹಾಂತ್ಯವಾಯಿತು.

ಕೆಲವು ವರ್ಷಗಳು ಕಳೆದ ಬಳಿಕ ಆ ಊರವರಿಗೆ ಅಲ್ಲೊಂದು ದೇಗುಲ ಕಟ್ಟಬೇಕು ಎಂಬ ಹಂಬಲ ಹುಟ್ಟಿತು. ಪಂಡಿತರ ಜತೆಗೂಡಿ ಯೋಗ್ಯ ಸ್ಥಳ ಹುಡುಕಿದಾಗ ಒಂದು ಜಾಗ ಪ್ರಶಸ್ತವಾಗಿ ಕಂಡು ಬಂತು. ಅದು ವರ್ಷಗಳ ಹಿಂದೆ ನಡುರಾತ್ರಿ ಧಾನ್ಯದ ಗೋಣಿಚೀಲ ಹೊತ್ತು ಅಣ್ಣತಮ್ಮಂದಿ ರಿಬ್ಬರು ಮುಖಾಮುಖಿಯಾದ ಸ್ಥಳವೇ ಆಗಿತ್ತು. ಷರತ್ತು, ನಿಯಮಗಳ ಹಂಗಿಲ್ಲದ ಪರಿಶುದ್ಧ, ನಿಷ್ಕಲ್ಮಶವಾದ ಪ್ರೀತಿಯಿಂದ ಜೀವ ಮತ್ತು ಜೀವನ ಎರಡೂ ಎಷ್ಟು ಎತ್ತರಕ್ಕೆ ಏರುತ್ತವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚು ಒಳ್ಳೆಯ ವಿವರಣೆ ಬೇಕಾಗಲಾರದು.

( ಸಾರ ಸಂಗ್ರಹ)

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.