ತನ್ನ ಚೇಂಬರ್ಗೆ ಸಿಸಿಟಿವಿ : ಮದ್ರಾಸ್ ಹೈಕೋರ್ಟ್ ಜಸ್ಟಿಸ್ ಆದೇಶ
Team Udayavani, Feb 15, 2019, 7:05 AM IST
ಚೆನ್ನೈ : ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳ ವನ್ನು ತಡೆಯುವ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಎಸ್ ಎಂ ಸುಬ್ರಮಣಿಯಮ್ ಅವರು ತಾವೇ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ, ತನ್ನ ಕಾರ್ಯಾಲಯಕ್ಕೇ ಮೊದಲಾಗಿ, ಎರಡು ವಾರಗಳ ಒಳಗೆ, ಸಿಸಿಟಿವಿ ಅಳವಡಿಸುವಂತೆ ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶ ನೀಡಿದ್ದಾರೆ.
ಟನ್ಗಟ್ಟಲೆ ಉಪದೇಶಕ್ಕಿಂತ ಒಂದು ಔನ್ಸಿನಷ್ಟು ಆಚರಣೆಯೇ ಮೇಲು ಎಂಬ ಮಹಾತ್ಮ ಗಾಂಧೀಜಿಯವರ ಉಕ್ತಿಯನ್ನು ಉಲ್ಲೇಖೀಸಿದ ಜಸ್ಟಿಸ್ ಸುಬ್ರಮಣಿಯಂ ಅವರು, ತಮಿಳು ನಾಡು ಸರಕಾರದ ಉನ್ನತಾಧಿಕಾರಿಗಳ ಕಾರ್ಯಾಲಯಕ್ಕೂ ಇದೇ ರೀತಿ ಸಿಸಿಟಿವಿ ಅಳವಡಿಸಬೇಕು ಎಂಬ ಸಲಹೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ಎಸ್ ಮುರುಗನ್ ಮತ್ತು ಓರ್ವ ಮಹಿಳಾ ಪೊಲೀಸ್ ಸುಪರಿಂಟೆಂಡೆಂಟ್, ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪದ ಅರ್ಜಿಯನ್ನು ವಿಲೇವಾರಿ ಮಾಡಿದ ಸಂದರ್ಭದಲ್ಲಿ ಜಸ್ಟಿಸ್ ಸುಬ್ರಮಣಿಯಮ್ ಅವರು ಈ ನಿದೇಶ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ