CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ದಿ| ಕೆ. ಬಿ. ಕೋಟ್ಯಾನ್‌ ಹಾಗೂ ಪರಿವಾರದಿಂದ ದೈವಗಳ ನೇಮೋತ್ಸವ

ಮುಂಬಯಿ: ಲಯನ್‌ ಪ್ರಿನ್ಸಿಪಾಲ್‌ ದಿ| ಕೆ. ಬಿ. ಕೋಟ್ಯಾನ್‌ ಹಾಗೂ ಪರಿವಾರದವರ ಆರಾಧಿಸಿಕೊಂಡು ಬಂದಿರುವ ತುಳುನಾಡಿನ ಆರಾಧ್ಯ ದೈವಗಳಾದ ಶ್ರೀ ಧೂಮಾವತಿ ಬಂಟ ದೈವ, ಚಾಮುಂಡಿ, ಗುಳಿಗ, ರಾಹು ಪಂಜುರ್ಲಿ ದೈವಗಳ ನೇಮೋತ್ಸವವು ಎ. 15 ಮತ್ತು ಎ. 16ರಂದು ಬಾಂದ್ರಾ ಪೂರ್ವದ ಖೇರ್‌ ನಗರದ ಪುರುಷೋತ್ತಮ ಹೈಸ್ಕೂಲ್‌ ಸಭಾಗೃಹದಲ್ಲಿ ನಿರ್ಮಿಸಿರುವ ಕೊಡಿಯಡಿಯ ಚಪ್ಪರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಶರತ್‌ ಕೆ. ಕೋಟ್ಯಾನ್‌ ಅವರ ನೇತೃತ್ವದಲ್ಲಿ ಹಾಗೂ ಹಳೆಯಂಗಡಿ ಕೇಶವ ಸನಿಲ್‌ ಅವರ ಮಾರ್ಗದರ್ಶನದಲ್ಲಿ ನಡೆದ ನೇಮೋತ್ಸವದಲ್ಲಿ ಮಧ್ಯಸ್ಥರಾಗಿ ಸುಧಾಕರ ಬಂಡ್ರಿಯಾಲ್‌ ಅವರು ಸಹಕರಿಸಿದರು. ಪ್ರವೀಣ್‌ ಬಂಗೇರ, ಮಾಧವ ಬಂಗೇರ, ಸುರೇಂದ್ರ ಕೊರಿಂಜ, ಕಮಲಾಕ್ಷ ಮಿಜಾರು, ಸಚಿನ್‌ ಮಿಜಾರು, ಸತೀಶ್‌ ಮಿಜಾರು ಅವರು ದೈವ ನರ್ತನ ಸೇವೆಯಲ್ಲಿ ಸಹಕರಿಸಿದರು.

ದೈವಪಾತ್ರಗಳಾಗಿ ಮಾನಂಪಾಡಿ ಯಾದವ ಪೂಜಾರಿ, ಪಾಂಗಾಳ ಭಾಸ್ಕರ ಪೂಜಾರಿ, ಚೇಳಾÂರು ವಸಂತ ಅವರು ಜೀಟಿಗೆಯಲ್ಲಿ ಸಹಕರಿಸಿದರು. ಊರ ಹಾಗೂ ಪರವೂರ ಭಕ್ತಾಭಿಮಾನಿಗಳು, ಸ್ಥಳೀಯ ಗಣ್ಯರು, ರಾಜಕೀಯ ನೇತಾರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Back to Top