CONNECT WITH US  

ಮಹಾಮಸ್ತಕಾಭಿಷೇಕ: 6 ಬೃಹತ್‌ ಸಾರ್ವಜನಿಕ ಭೋಜನಾಲಯ ನಿರ್ಮಾಣ

ಶ್ರವಣಬೆಳಗೊಳ: ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತ ಕಾಭಿಷೇಕ ಮಹೊತ್ಸವದ ಅಂಗ ವಾಗಿ 12 ತಾತ್ಕಾಲಿಕ ಉಪನಗರಗಳ ಸಹಿತ ಎಪಿಎಂಸಿ ಆವರಣದ ಸಮೀಪ 6 ಬೃಹತ್‌ ಸಾರ್ವಜನಿಕ ಭೋಜ ನಾಲಯಗಳನ್ನು ನಿರ್ಮಿಸಲಾಗಿದೆ.

ಸಾರ್ವಜನಿಕ ಭೋಜನ ಶಾಲೆ ಯಲ್ಲಿ ದಕ್ಷಿಣಕನ್ನಡ, ಬೆಳಗಾವಿ, ಮಂಡ್ಯ, ತುಮಕೂರು ಹೀಗೆ ನಾನಾ ಜಿಲ್ಲೆಗಳ ಸ್ವಯಂಸೇವಕರು ಭೋಜನ ಶಾಲೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಬಂದಿರುವ ಯಾತ್ರಾರ್ಥಿಗಳಿಗೆ ವಿವಿಧ ಶೈಲಿಯ ಭೋಜನವನ್ನು ತಯಾರಿಸಲಾಗುತ್ತಿದೆ.

12 ಉಪ ನಗರಗಳ ಸಹಿತ 17 ಭೋಜನಾಲಯಗಳು: ಪಂಚಕಲ್ಯಾಣ ನಗರ, ಎರಡು ಕಲಶಾ ನಗರಗಳು, ಅಧಿಕಾರಿಗಳ ನಗರ, ಸ್ವಯಂ ಸೇವಕ ನಗರ, ಜನಪ್ರತಿನಿಧಿಗಳ ನಗರ, ಮಹಿಳಾ ಪೊಲೀಸ್‌, ಪುರುಷರ ಪೊಲೀಸ್‌ ನಗರ, ಮಾಧ್ಯಮ ನಗರ, ಸ್ವಯಂ ಸೇವಕ ನಗರ, ಅತಿ ಗಣ್ಯರಿಗೆ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠದಲ್ಲಿ ನಿರಂತರವಾಗಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈಶ್ವರನಿಗೆ ಪೂಜೆ ಸಲ್ಲಿಸಿದ ಚಾರುಕೀರ್ತಿ ಶ್ರೀ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಹಾ ಶಿವರಾತ್ರಿ ಪ್ರಯುಕ್ತ ಶ್ರವಣಬೆಳಗೊಳದ ಶ್ರೀಕಂಠೇಶ್ವರ ಬಡಾವಣೆಯಲ್ಲಿನ ಈಶ್ವರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಸರ್ವ ಧರ್ಮ ಸೌಹಾರ್ದತೆ ಮೆರೆದರು.

ಶ್ರೀಗಳಿಂದ ಪ್ರವಚನ 
ಮಹಾಮಸ್ತಕಾಭಿಷೇಕ ಮಹೋ ತ್ಸವದ ಅಂಗವಾಗಿ ಪಂಚಕಲ್ಯಾಣ ನಗರದಲ್ಲಿರುವ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆದ ಚರ್ತುವಿಂಶತಿ ತೀರ್ಥಂಕರರ ಆರಾಧನೆ ಹಿನ್ನೆಲೆಯಲ್ಲಿ ಆಚಾರ್ಯಶ್ರೀ ಗಳಿಂದ ಪ್ರವಚನ ಕಾರ್ಯಕ್ರಮ ನಡೆಯಿತು.

ಮಹಾಮಜ್ಜನಕ್ಕೆ ಪ್ರಾಕೃತ ವಿವಿ ಶಾಶ್ವತ ಕೊಡುಗೆ
ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮೂರ್ತಿಯ 88ನೇ ಮಹಾ ಮಸ್ತಕಾ ಭಿಷೇಕದ ಸ್ಮರಣಾರ್ಥ ಶಾಶ್ವತ ಯೋಜನೆಗಳ ಪೈಕಿ ಪ್ರಾಕೃತ ವಿಶ್ವ ವಿದ್ಯಾನಿಲಯ ನಿರ್ಮಾಣ ಪ್ರಮುಖ ವಾದದು. ಪ್ರಾಕೃತ ಭಾಷೆಯ ಅಧ್ಯಯನ, ಆ ಭಾಷೆಯಲ್ಲಿರುವ ಜೈನ ಸಾಹಿತ್ಯದ ಪ್ರಕರಣಕ್ಕಾಗಿ ರೂಪುಗೊಳ್ಳುತ್ತಿರುವ ವಿಶ್ವದ ಪ್ರಥಮ ವಿ.ವಿ. ಎಂಬ ಹೆಗ್ಗಳಿಕೆಗೂ ಶ್ರವಣಬೆಳಗೊಳದ ಪ್ರಾಕೃತ ವಿ.ವಿ. ಪಾತ್ರವಾಗಲಿದೆ. ಹಾಸನ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿರುವ ಪ್ರಥಮ ವಿಶ್ವವಿದ್ಯಾನಿಲಯವೂ  ಹೌದು. ವಿ.ವಿ.ಗೆ ಬಾಹುಬಲಿ ಹೆಸರಿಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಮಹಾಮಸ್ತಕಾಭಿಷೇಕಕ್ಕೆ ಹೆಚ್ಚುವರಿ ರೈಲು 
ಈ ಶತಮಾನದ ಎರಡನೇ ಮಹಾ ಮಸ್ತಕಾಭಿಷೇಕಕ್ಕೆ ಆಗಮಿಸಲಿರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಹೆಚ್ಚುವರಿ ರೈಲು ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಕಲಾಕೃತಿ ಸ್ಪರ್ಧೆ ಆಯೋಜನೆ ಮಹಾಮಸ್ತಕಾಭಿಷೇಕ ಮಹೋ ತ್ಸವದ ಭಾಗವಾಗಿ ಶ್ರವಣ ಬೆಳಗೊಳದಲ್ಲಿ ಮಕ್ಕಳು ಹಾಗೂ 12ರಿಂದ 21 ವರ್ಷದೊಳಗಿನ ವರಿಗೆ ಕಲಾಕೃತಿ ಸ್ಪರ್ಧೆ ಆಯೋ ಜನೆಯಾಗಿದೆ.

ಶ್ರವಣಬೆಳಗೊಳದ ಕಲೆ ಮತ್ತು ವಾಸ್ತುಶಿಲ್ಪ ಇಲ್ಲವೇ ಬಾಹುಬಲಿಯ ಜೀವನ, ಬೋಧನೆ ಆಧರಿಸಿ ಮಕ್ಕಳು ಕಲಾಕೃತಿ ರಚಿಸಬೇಕು. ಅತ್ಯು ತ್ತಮವಾದ 3 ಕಲಾಕೃತಿಗಳಿಗೆ ಕ್ರಮವಾಗಿ 7,500 ರೂ., 5000 ರೂ. ಹಾಗೂ 3,500 ರೂ. ನಗದು ಪುರಸ್ಕಾರ ನೀಡಲಾಗುವುದು. ನಂತರದ ಐದು ಉತ್ತಮ ಕಲಾಕೃತಿ ಗಳಿಗೆ ತಲಾ 1000 ರೂ. ಬಹುಮಾನ ನೀಡಲಾಗುವುದು. ಜತೆಗೆ ಕಲಾಕೃತಿ ಗಳನ್ನು ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಆಸಕ್ತರು ಫೆ.26ರೊಳಗೆ ಕೆಳಕಂಡ ಇ-ಮೇಲ್‌ ವಿಳಾಸಕ್ಕೆ ಸಲ್ಲಿಸಬಹುದು. ಇ-ಮೇಲ್‌ ವಿಳಾಸ : sbgartfestival@gmail.com.. ಹೆಚ್ಚಿನ ಮಾಹಿತಿ ವೆಬ್‌ಸೈಟ್‌ ವಿಳಾಸ: www.sbgartfestival.com

ಬೆಳಗ್ಗಿನ ಉಪಹಾರಕ್ಕೆ ಚಿತ್ರಾನ್ನ, ಟೊಮೆಟೋ ಪಲಾವ್‌, ಪುಳಿಯೋಗರೆ, ಜೀರಾರೈಸ್‌, ಅವಲಕ್ಕಿ ಉಪ್ಪಿಟ್ಟು, ಜೊತೆಗೆ ಸಿಹಿತಿಂಡಿಯಾಗಿ ಪಾಯಸ, ಜಿಲೇಬಿ, ಕೇಸರಿ ಬಾತ್‌ನ್ನು ನೀಡಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ಮುದ್ದೆ ಸಾಂಬಾರ್‌, ರಸಂ, ಮಜ್ಜಿಗೆ, ಮೊಸರು, ಪಲ್ಯ ನೀಡಲಾಗುತ್ತಿದೆ. ಪ್ರತಿದಿನವೂ ಕೂಡ 50-60 ಸಾವಿರ ಯಾತ್ರಾರ್ಥಿಗಳು ಭೋಜನವನ್ನು ಸ್ವೀಕರಿಸುತ್ತಿದ್ದಾರೆ ಎಂದು ಭೋಜನ ಸಮಿತಿಯ ವ್ಯವಸ್ಥಾಪಕರು ತಿಳಿಸಿದರು.

Trending videos

Back to Top