CONNECT WITH US  

ಖರ್ಗೆ ದೇಶದ ಜನರ ಕ್ಷಮೆಯಾಚಿಸಲಿ: ಈಶ್ವರಪ್ಪ

ಶಿವಮೊಗ್ಗ: ಅಟಲ್‌ ಜೀ ಅವರ ಚಿತಾಭಸ್ಮ ಬಿಡುವ ನಾಟಕ ನಿಲ್ಲಿಸಿ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ನೋವಿನ ಸಂಗತಿ. ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕೆಂದು ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದ್ದಾರೆ. 

ನಗರದಲ್ಲಿ ಮಾತನಾಡಿ, ಕಾಂಗ್ರೆಸ್‌ ಮುಖಂಡರ ವಿರುದ್ಧ ಕಿಡಿಕಾರಿದರು. ದೇಶಕ್ಕೆ ಗಂಡಾಂತರ ಬಂದಾಗ, ಪಾಕಿಸ್ತಾನ-ಭಾರತ ಯುದ್ಧ ನಡೆಯುವಾಗ ಅಟಲ್‌ ಜೀ ಅವರು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ  ಅವರನ್ನು ಮಾ ದುರ್ಗೆ ಎಂದು ಕರೆದರು. ಇದು ದೇಶದ ಸಂಸ್ಕೃತಿ. ಅಟಲ್‌ ಜೀ ಅವರು ತಂದಂತಹ ವ್ಯವಸ್ಥೆ ಅದು. ಆದರೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ಮುಖಂಡರು ಇಂಥವರ ಬಗ್ಗೆಯೂ ರಾಜಕೀಯವಾಗಿ ಯೋಚನೆ ಮಾಡುತ್ತಿರುವುದು ನೋವಾಗಿದೆ. ಇದು ದೇಶಭಕ್ತನಿಗೆ ಮಾಡುತ್ತಿರುವ ಅಪಮಾನ. ಈ ಬಗ್ಗೆ ಕ್ಷಮೆ ಯಾಚಿಸಬೇಕು. ಇನ್ಮುಂದೆ ಯಾರೂ ಅಟಲ್‌ ಜೀ ಅವರ ಬಗ್ಗೆ, ಅವರ ಚಿತಾಭಸ್ಮದ ಬಗ್ಗೆ ಮಾತನಾಡಬಾರದು ಎಂದು ಎಚ್ಚರಿಸಿದರು.

Trending videos

Back to Top