ಅಂತೂ ಇಂತೂ “ದಳಪತಿ’ ಪ್ರೇಮ್ ಬಂದ್ರು: ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ
Team Udayavani, Nov 15, 2017, 1:08 PM IST
“ನೆನಪಿರಲಿ’ ಪ್ರೇಮ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿರೋ “ದಳಪತಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಪ್ರೇಮ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೈಟಲ್ಗೆ ತಕ್ಕಂತೆ ಚಿತ್ರವು ಆ್ಯಕ್ಷನ್ ಕಂ ಲವ್ಸ್ಟೋರಿಯಾಗಿದೆ. ಅಲ್ಲದೇ ವಾರ್ ಫಾರ್ ಲವ್ ಎಂಬ ಅಡಿ ಬರಹವಿದೆ. ಚಿತ್ರದಲ್ಲಿ ಕೃತಿ ಕರಬಂದ ನಾಯಕಿಯಾಗಿ ಪ್ರೇಮ್ ಎದುರಿಗೆ ನಟಿಸಿದ್ದಾರೆ. ಇನ್ನು ಪ್ರಶಾಂತ್ ರಾಜ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದರೆ, ಕವಿರಾಜ್, ಪವನ್ ಒಡೆಯರ್ ಮತ್ತು ಕೃಷ್ಣೇಗೌಡ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದ ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ.