LS Polls; ಕಟ್ಟರ್‌ ಕಾಂಗ್ರೆಸ್‌ ಪ್ರದೇಶವಾಗಿದ್ದ ದ.ಕ.ಈಗ ಕೇಸರಿ ಭದ್ರಕೋಟೆ

ಜಾತಿ ಲೆಕ್ಕಾಚಾರಕ್ಕೆ ಇಲ್ಲಿ ಮಾನ್ಯತೆಯೇ ಇಲ್ಲ...ಜನಾರ್ದನ ಪೂಜಾರಿ, ಧನಂಜಯ ಕುಮಾರ್‌ 4 ಬಾರಿ ಗೆದ್ದ ಕ್ಷೇತ್ರ 

Team Udayavani, Mar 8, 2024, 6:55 AM IST

nalin-kumar-2
ಮಂಗಳೂರು: ಒಂದೆಡೆ ಅರಬ್ಬೀ ಸಮುದ್ರ, ಇನ್ನೊಂದೆಡೆ ಕೇರಳ ರಾಜ್ಯದ ಗಡಿ, ವಿಭಿನ್ನ ರಾಜಕೀಯ ಚಿಂತನೆಯ ಕೇಂದ್ರ, ರಾಜ್ಯದಲ್ಲೇ ಕುತೂಹಲಕಾರಿ ಬೆಳವಣಿಗೆಗೆ ಕಾರಣವಾಗುವ ಕ್ಷೇತ್ರ..ಇದು ದಕ್ಷಿಣ ಕನ್ನಡ.
2008ರ ಕ್ಷೇತ್ರ ಮರುವಿಂಗಡಣೆವರೆಗೆ ಮಂಗಳೂರು ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಉಳ್ಳಾಲ, ಮಂಗಳೂರು, ವಿಟ್ಲ, ಪುತ್ತೂರು, ಸುಳ್ಯ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದೂ ಬೆಳ್ತಂಗಡಿ ವಿಧಾನಸಭೆ ಕ್ಷೇತ್ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2009ರ ಚುನಾವಣೆಗೆ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಹೆಸರು ಬಂದಿದ್ದಷ್ಟೇ ಅಲ್ಲ, ಮಡಿಕೇರಿ, ವಿರಾಜಪೇಟೆ ಮೈಸೂರಿಗೆ ಹೋದರೆ ಸೋಮವಾರ ಪೇಟೆ ಕ್ಷೇತ್ರವನ್ನು ರದ್ದುಗೊಳಿಸಲಾಯಿತು. ಬೆಳ್ತಂಗಡಿಯು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿತು.
ಈಗ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿವೆ. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ (ಹಿಂದಿನ ಸುರತ್ಕಲ್‌), ಮಂಗಳೂರು (ಹಿಂದಿನ ಉಳ್ಳಾಲ), ಮೂಡುಬಿದಿರೆ, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳು.
ಹಿಂದಿನ ಬಾರಿ ಇದರಲ್ಲಿ ಮಂಗಳೂರು ಬಿಟ್ಟು ಉಳಿದೆಲ್ಲವನ್ನೂ ಬಿಜೆಪಿ ಗೆದ್ದಿದ್ದರೆ,  2023ರ ಚುನಾವಣೆಯಲ್ಲಿ ಬಿಜೆಪಿ ಪುತ್ತೂರು ಕ್ಷೇತ್ರವನ್ನೂ ಕಳೆದುಕೊಂಡಿತ್ತು. ಸದ್ಯ ಬಿಜೆಪಿ-6, ಕಾಂಗ್ರೆಸ್‌-2 ಕ್ಷೇತ್ರಗಳಲ್ಲಿ ಗೆದ್ದಿವೆ.
1951ರಿಂದ ಇದುವರೆಗೆ 9 ಬಾರಿ ನಿರಂತರ ವಾಗಿ ಕಾಂಗ್ರೆಸ್‌ ಈ ಕ್ಷೇತ್ರವನ್ನು ಗೆಲ್ಲುತ್ತಲೇ ಬಂದಿದೆ. ಅನಂತರದ 8 ಚುನಾವಣೆಗಳಲ್ಲಿ ನಿರಂತರ ಬಿಜೆಪಿ ಗೆಲುವು ಸಾಧಿಸಿದೆ. ಹಾಗಾಗಿ ಒಂದೊಮ್ಮೆ ಕಟ್ಟರ್‌ ಕಾಂಗ್ರೆಸ್‌ ಪ್ರದೇಶವಾಗಿದ್ದ ದಕ್ಷಿಣ ಕನ್ನಡವೀಗ ಕೇಸರಿ ಭದ್ರಕೋಟೆಯೆಂದೇ ಕರೆಯಲ್ಪಡುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳಿಗೆ ಇಲ್ಲಿ ಗೆಲುವು ಲಭಿಸಿಲ್ಲ ಎನ್ನುವುದು ಗಮನಾರ್ಹ. ಬಿಲ್ಲವ ಸಮುದಾಯದ ಬಿ. ಜನಾರ್ದನ ಪೂಜಾರಿ ಹಾಗೂ ಜೈನ ಸಮುದಾಯದ ವಿ.ಧನಂಜಯ ಕುಮಾರ್‌ ಇಬ್ಬರೂ ಇಲ್ಲಿ ತಲಾ 4 ಬಾರಿ ಸತತವಾಗಿ ಗೆದ್ದಿದ್ದರು. ಕಾಂಗ್ರೆಸ್‌ನ ನಿರಂತರ ಗೆಲುವಿನ ಅಭಿಯಾನವನ್ನು 1991ರಲ್ಲಿ ಕೊನೆ ಯಾಗಿಸಿದ್ದೂ ಧನಂಜಯ ಕುಮಾರ್‌. ಡಾ| ಎಂ.ವೀರಪ್ಪ ಮೊಲಿ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಧನಂಜಯ ಕುಮಾರ್‌ ಅವರ ಬಳಿಕ 2004ರಲ್ಲಿ ಬಿಜೆಪಿಯಿಂದ ಗೆದ್ದ ಡಿ.ವಿ.ಸದಾನಂದ ಗೌಡರು 2009ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು.   2009ರಿಂದ ಇದುವರೆಗೆ ನಳಿನ್‌ ಕುಮಾರ್‌ ಕಟೀಲು 3 ಬಾರಿ ಗೆದ್ದಿದ್ದಾರೆ.
ಜಾತಿ ಸಮೀಕರಣ ಲೆಕ್ಕಕ್ಕಿಲ್ಲ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜಾತಿ ಆಧಾರಿತವಾಗಿ ಚುನಾವಣೆಗಳೂ ನಡೆದಿಲ್ಲ. ಒಂದೊಮ್ಮೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷಗಳು ಜಾತಿ ಸಮೀಕರಣ ಮಾಡಿದ್ದಿದ್ದರೂ ಮತ ಗಳಿಕೆಯಲ್ಲಿ ದೊಡ್ಡ ಯಶಸ್ಸು ಕಂಡಿಲ್ಲ. ಇಲ್ಲಿ ಹೆಚ್ಚಾಗಿ ಪûಾ ಧಾರಿತ ನಿಲುವೇ ಮೇಲುಗೈ. ಅಲ್ಪಸಂಖ್ಯಾಕ ಸಮುದಾಯ ಹಿಂದಿನಿಂದಲೂ ಸಾಂಪ್ರದಾಯಿಕ ವಾಗಿ ಕಾಂಗ್ರೆಸ್‌ಗೆ ಮತಹಾಕುವುದು ಬಿಟ್ಟರೆ ಉಳಿ ದಂತೆ ಇಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲ.
ನಳಿನ್‌ ಕುಮಾರ್‌ ಕಟೀಲು, ಹಾಲಿ ಸಂಸದ
ಪಕ್ಷ: ಬಿಜೆಪಿ
ಪಡೆದ ಮತ:  7,74,285
ಗೆಲುವಿನ ಅಂತರ:  2,74,621
ಮತದಾರರ ವಿವರ
ಮತದಾರರು 2024      2019
ಪುರುಷರು 8,73,380     8,45,308
ಮಹಿಳೆಯರು 9,12,369     9,79,050
ಇತರ   77    102
ಒಟ್ಟು   17,85,826    18,24,460
 ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.