ಮುಂಬಯಿ ಶೇರು ಐದನೇ ದಿನವೂ ಮುನ್ನಡೆ, 60 ಅಂಕ ಏರಿಕೆ
Team Udayavani, Apr 11, 2018, 4:15 PM IST
ಮುಂಬಯಿ : ದಿನಪೂರ್ತಿ ಎದ್ದು ಬಿದ್ದು ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು, ನಿರಂತರ ಐದನೇ ದಿನದ ಏರಿಕೆಯಲ್ಲಿ, 60 ಅಂಕಗಳ ಮುನ್ನಡೆಯೊಂದಿಗೆ 33,940 ಅಂಕಗಳ ಮಟ್ಟಕ್ಕೆ ಏರುವ ಮೂಲಕ ಆಶಾದಾಯಕವಾಗಿ ಕೊನೆಗೊಳಿಸಿತು.
ಏಶ್ಯನ್ ಶೇರು ಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆಯನ್ನು ಇಂದು ಮೆಟಲ್, ಐಟಿ, ಕನ್ಸೂಮರ್ ಡ್ನೂರೇಬಲ್ ಶೇರುಗಳು ಬಹುವಾಗಿ ಆಧರಿಸಿದವು.
ಇದೇ ಶುಕ್ರವಾರದಿಂದ ಇನ್ಫೋಸಿಸ್ ನೊಂದಿಗೆ ಮುಂಚೂಣಿ ಕಂಪೆನಿಗಳ ನಾಲ್ಕನೇ ತ್ತೈಮಾಸಿಕ ಹಾಗೂ ವಾರ್ಷಿಕ ಫಲಿತಾಂಶಗಳು ಪ್ರಕಟವಾಗಲಿವೆ. ಈ ನಡುವೆ ನಾಳೆ ಗುರುವಾರ ಚಿಲ್ಲರೆ ಹಣದುಬ್ಬರ, ಕೈಗಾರಿಕಾ ಉತ್ಪಾದನೆ ಸಹಿತ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ಪ್ರಕಟಗೊಳ್ಳಲಿವೆ. ಹಾಗಾಗಿ ಹೂಡಿಕೆದಾರರು ಮತ್ತು ವಹಿವಾಟುದಾರರ ಕಣ್ಣು ಈಗಿನ್ನು ಇವುಗಳ ಮೇಲೆ ಸಹಜವಾಗಿಯೇ ನೆಟ್ಟಿದೆ.
ಸೆನ್ಸೆಕ್ಸ್ ಇಂದಿನ ವಹಿವಾಟನ್ನು 60.19 ಅಂಕಗಳ ಮುನ್ನಡೆಯೊಂದಿಗೆ 33,940.44 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.90 ಅಂಕಗಳ ಮುನ್ನಡೆಯೊಂದಿಗೆ 10,417.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 861.18 ಅಂಕಗಳನ್ನು ಸಂಪಾದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ