ಕೆಲವಕ್ಕೆ ಜಿಎಸ್ಟಿ ರಿಯಾಯಿತಿ ಕೇಂದ್ರ ವಿತ್ತ ಸಚಿವಾಲಯ ಸ್ಪಷ್ಟನೆ
ಅಕ್ಕಿ, ಗೋಧಿ, ಹಿಟ್ಟು ಬ್ರ್ಯಾಂಡೆಡ್ ಅಲ್ಲದಿದ್ದರೆ ತೆರಿಗೆ ಇಲ್ಲ
Team Udayavani, Jul 19, 2022, 7:08 AM IST
ಹೊಸದಿಲ್ಲಿ: ಪೊಟ್ಟಣ ಮಾಡಲಾಗಿದ್ದರೂ “ಬ್ರ್ಯಾಂಡೆಡ್’ ಅಲ್ಲದ ಏಕದಳ – ದ್ವಿದಳ ಧಾನ್ಯಗಳಿಗೆ ಶೇ. 5 ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ದಿನಬಳಕೆಯ ವಸ್ತುಗಳಿಗೆ ಕೂಡ ಜಿಎಸ್ಟಿ ವಿಧಿ ಸಿರುವ ಬಗ್ಗೆ ಜನರು ಮತ್ತು ವಿಪಕ್ಷಗಳಿಂದ ಕಟು ಟೀಕೆ ವ್ಯಕ್ತವಾದ ಬಳಿಕ ಕೇಂದ್ರ ವಿತ್ತ ಸಚಿ ವಾಲಯ ದರ ಹೆಚ್ಚಳದ ಬಗ್ಗೆ ಸ್ಪಷ್ಟನೆ ನೀಡಿದೆ.
ಅಕ್ಕಿ, ಗೋಧಿ ಮತ್ತು ಹಿಟ್ಟುಗಳು ಬ್ರ್ಯಾಂಡೆಡ್ ಅಲ್ಲದಿದ್ದರೆ ಪ್ಯಾಕ್ ಮಾಡಲಾಗಿದ್ದರೂ ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ.
25 ಕೆ.ಜಿ. ಗಳಿಗಿಂತ ಅಧಿಕ ತೂಕದ ಧಾನ್ಯಗಳು ಮತ್ತು ಬೇಳೆ ಕಾಳುಗಳು, ಹಿಟ್ಟು, 25 ಲೀ.ಗಳಿಗಿಂತ ಹೆಚ್ಚು ತೂಕದ ಮೊಸರು, ಲಸ್ಸಿಗಳನ್ನು ಮೊದಲೇ ಪ್ಯಾಕ್ ಮಾಡಲಾಗಿರುವ ಮತ್ತು ಬ್ರ್ಯಾಂಡೆಡ್ ಎಂದು
ಪರಿಗಣಿಸಲಾಗುವುದಿಲ್ಲ. ಹೀಗಾಗಿ ಜಿಎಸ್ಟಿ ವಿಧಿಸ ಲಾಗುವುದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.
ಬಿಡಿ ಮಾರಾಟಕ್ಕೆ ಇಲ್ಲ
ಅಂಗಡಿಗಳ ಮಾಲಕರು ಚಿಲ್ಲರೆಯಾಗಿ ಮಾರಾಟ ಮಾಡುವ ಅಕ್ಕಿ ಮತ್ತಿತರ ಧಾನ್ಯ ಗಳು ಶೇ. 5 ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ಹತ್ತು ಕೆ.ಜಿ. ಹಿಟ್ಟನ್ನು ಹತ್ತು ಚಿಲ್ಲರೆ ಪ್ಯಾಕ್ಗಳಾಗಿ ದೊಡ್ಡ ಪ್ಯಾಕ್ನಲ್ಲಿರಿಸಿ ಮಾರಾಟ ಮಾಡಿದರೆ ಅದಕ್ಕೆ ತೆರಿಗೆ ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್