UPI ಬಳಕೆ ಮುಂದುವರಿಕೆ:ಎನ್‌ಪಿಸಿಐ ನೊಂದಿಗೆ ಪೇಟಿಎಂ ಮಾತುಕತೆ
ಮಾ.1ರ ನಂತರ ತಾಂತ್ರಿಕ ಬದಲಾವಣೆ ಸಾಧ್ಯತೆ
Team Udayavani, Feb 11, 2024, 12:43 AM IST
ನವದೆಹಲಿ: ಪೇಟಿಎಂ ಬಳಕೆದಾರರಿಗೆ ಯುಪಿಐ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್(ಟಿಪಿಎಪಿ) ಅತ್ತ ಪೇಟಿಎಂ ಮಾಲೀಕತ್ವದ ಒನ್ 97 ಕಮ್ಯೂನಿಕೇಷನ್ಸ್ ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ)ದೊಂದಿಗೆ ಕಂಪನಿ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಪ್ರಸ್ತುತ, ಪಾವತಿ ಮಾಡಲು ಯುಪಿಐ ಬಳಸುವ ಪೇಟಿಎಂ ಬಳಕೆದಾರರು ಃಟಚyಠಿಞ ನಿಂದ ಕೊನೆಗೊಳ್ಳುವ ವರ್ಚುಯಲ್ ಪೇಮೆಂಟ್ ವಿಳಾಸ (ವಿಪಿಎ)ವನ್ನು ಹೊಂದಿರುತ್ತಾರೆ. ಮಾ.1ರ ನಂತರ ಬೇರೆ ಬ್ಯಾಂಕ್‌ನ ವಿಪಿಎ ಗೆ ಇದು ಬದಲಾಗಬಹುದು. ಪೇಟಿಎಂ ತನ್ನ ಗ್ರಾಹಕರಿಗೆ ಮುಂದಿನ ತಿಂಗಳಿನಿಂದ ಹೊಸ ವಿಪಿಎ ಗಳನ್ನು ನೀಡಲು ಮೂರು ಅಥವಾ ಹೆಚ್ಚಿನ ಬ್ಯಾಂಕುಗಳನ್ನು ಬಳಸುವ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಎಚ್‌ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ನೊಂದಿಗೆ ಒನ್ 97 ಕಮ್ಯೂನಿಕೇಷನ್ಸ್ ಮಾತುಕತೆಯಲ್ಲಿ ತೊಡಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಗಡುವು ವಿಸ್ತರಣೆ?
ಹಣ ಪಾವತಿಗೆ ಸಂಬಂಧಿಸಿದಂತೆ ಆರ್‌ಬಿಐ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಫೆ.29ರಿಂದ ಯುಪಿಐ ವ್ಯವಹಾರಗಳನ್ನು ಕೂಡ ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆರ್‌ಬಿಐ ಸೂಚಿಸಿದೆ. ಆದರೆ ಸಾಕಷ್ಟು ಗ್ರಾಹಕರ ಠೇವಣಿಗಳನ್ನು ಹಿಂಪಡೆಯದಿದ್ದರೆ, ಈ ಗಡುವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು