ಕಚೇರಿ ಕಿರುಕುಳ, ತಾರತಮ್ಯ ಪ್ರತಿಭಟಿಸಿ ಹೊರನಡೆದ ಗೂಗಲ್‌ ನೌಕರರು

Team Udayavani, Nov 1, 2018, 7:26 PM IST

google-700.jpg

ಸ್ಯಾನ್‌ಫ್ರಾನ್ಸಿಸ್ಕೋ : ಕಂಪೆನಿಯ ಕಚೇರಿಗಳಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ, ಕಿರುಕುಳವನ್ನು ಪ್ರತಿಭಟಿಸಿ ಏಶ್ಯದಲ್ಲಿನ ನೂರಾರು ಗೂಗಲ್‌ ನೌಕರರು ಮತ್ತು ಗುತ್ತಿಗೆದಾರರು ಇಂದು ಮಧ್ಯಾಹ್ನ ಕಾರ್ಯಾಲಯದಿಂದ ಹೊರ ನಡೆದ ಅತ್ಯಪರೂಪದ ವಿದ್ಯಮಾನ ನಡೆಯಿತು. 

ದುಡಿಯುವ ಸ್ಥಳದಲ್ಲಿ (ಕಚೇರಿಯಲ್ಲಿ) ಕಂಪೆನಿಯ ಕಾರ್ಯನಿರ್ವಾಹಕರಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ, ಲೈಂಗಿಕ ಶೋಷಣೆಯೇ ಮೊದಲಾದ ಅತಿರೇಕಗಳನ್ನು ಪ್ರತಿಭಟಿಸಲು ವಿಶ್ವಾದ್ಯಂತದ ಗೂಗಲ್‌ ಕಾರ್ಯಾಲಯಗಳಿಂದ ಹಲವು ಸಾವಿರ ಮಂದಿ ನೌಕರರು ಹೊರಬಂದು ಪ್ರತಿಭಟಿಸುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

ನಿನ್ನೆ ಬುಧವಾರ ತಡವಾಗಿ ಹೊರಡಿಸಲಾಗಿರುವ ಹೇಳಿಕೆಯಲ್ಲಿ ಸಂಘಟಕರು ಗೂಗಲ್‌ ಮಾತೃ ಸಂಸ್ಥೆಯಾಗಿರುವ Alphabet Inc. ಮುಖ್ಯಸ್ಥರನ್ನು ಭೇಟಿಯಾಗಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ನೌಕರ ಪ್ರತಿನಿಧಿಯೋರ್ವರನ್ನು ಸೇರಿಸಿಕೊಳ್ಳುವಂತೆ ಮತ್ತು ವೇತನ-ಸಮಾನತೆ ಅಂಕಿ ಅಂಶವನ್ನು ಆಂತರಿಕವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು; ಜತೆಗೆ ಕಾರ್ಯ ಸ್ಥಳದಲ್ಲಿನ ಕಿರುಕುಳ-ಸಂಬಂಧಿ ಪರಿಹಾರ ಕೋರಿಕೆ ಪ್ರಕರಣಗಳನ್ನು ನ್ಯಾಯೋಚಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿನ ಮಾನವ ಸಂಪನ್ಮೂಲ ಉಪಕ್ರಮಗಳಿಗೆ ಬದಲಾವಣೆ ತರಬೇಕು ಎಂದು ವರದಿಗಳು ತಿಳಿಸಿವೆ. 

Alphabet ನ 94,000 ಕ್ಕೂ ಅಧಿಕ ಉದ್ಯೋಗಿಗಳಲ್ಲಿ  ಮತ್ತು ಹತ್ತಾರು ಸಾವಿರ ಗುತ್ತಿಗೆದಾರರಲ್ಲಿ ಲಿಂಗ, ಜನಾಂಗ, ವೇತನ ತಾರತಮ್ಯ ಮತ್ತು ಸರ್ವಾಧಿಕಾರಿ ಪ್ರವೃತ್ತಿಯ ಕಿರುಕುಳದ ಫ‌ಲವಾಗಿ ಮಡುಗಟ್ಟಿರುವ ನೋವಿನಲ್ಲಿ ಪ್ರಬಲ ಪ್ರತಿಭಟನೆ ವ್ಯಕ್ತವಾಗಿರುವ ಹೊರತಾಗಿಯೂ ಗೂಗಲ್‌ ಕಂಪೆನಿಯ ಶೇರುಗಳ ಧಾರಣೆ ಶೇರು ಮಾರುಕಟ್ಟೆಗಳಲ್ಲಿ  ಕುಸಿಯದಿರುವುದು ಗಮನಾರ್ಹವಾಗಿದೆ. 

ಟಾಪ್ ನ್ಯೂಸ್

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ: ವಿಜಯೇಂದ್ರ

B. Y. Vijayendra ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway ಪ್ಲಾಟ್‌ಫಾರ್ಮ್ ಟಿಕೆಟ್‌, ಸೇವೆ ಜಿಎಸ್‌ಟಿ ಮುಕ್ತ

Railway ಪ್ಲಾಟ್‌ಫಾರ್ಮ್ ಟಿಕೆಟ್‌, ಸೇವೆ ಜಿಎಸ್‌ಟಿ ಮುಕ್ತ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

ನೆಕ್ಸಸ್‌ ಸೆಲೆಕ್ಟ್ ಮಾಲ್‌: ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯುಷ್ಮನ್‌ ಖುರಾನಾ

ನೆಕ್ಸಸ್‌ ಸೆಲೆಕ್ಟ್ ಮಾಲ್‌: ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯುಷ್ಮನ್‌ ಖುರಾನಾ

ತಮಿಳುನಾಡು, ಗುಜರಾತ್‌ ಸಮುದ್ರದಲ್ಲಿ ಗಾಳಿ ವಿದ್ಯುತ್‌ ಕೇಂದ್ರ: ಸಚಿವ ವೈಷವ್‌

ತಮಿಳುನಾಡು, ಗುಜರಾತ್‌ ಸಮುದ್ರದಲ್ಲಿ ಗಾಳಿ ವಿದ್ಯುತ್‌ ಕೇಂದ್ರ: ಸಚಿವ ವೈಷ್ಣವ್‌

Jio internet connectivity gap: Customer outrage

Jio ಇಂಟರ್ನೆಟ್‌ ಸಂಪರ್ಕದಲ್ಲಿ ವ್ಯತ್ಯಯ: ಗ್ರಾಹಕರ ಆಕ್ರೋಶ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

16-madamakki

Madamakki : ವಿಷ ಸೇವಿಸಿ ಆತ್ಮಹತ್ಯೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.