ದಿನಪೂರ್ತಿ ಎದ್ದು ಬಿದ್ದ ಮುಂಬಯಿ ಶೇರು ಕೊನೆಗೂ 10 ಅಂಕ ನಷ್ಟ

Team Udayavani, Nov 1, 2018, 4:52 PM IST

ಮುಂಬಯಿ : ದಿನದ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 10.08 ಅಂಕಗಳ ನಷ್ಟದೊಂದಿಗೆ 34,431.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.15 ಅಂಕಗಳ ನಷ್ಟದೊಂದಿಗೆ 10,380.45 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

ನಿನ್ನೆ ಬುಧವಾರ ಸೆನ್ಸೆಕ್ಸ್‌ 550.92 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತ್ತು. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸುಮಾರು 376 ಅಂಕಗಳ ಏಳು ಬೀಳುಗಳ ನಡುವೆ ಓಲಾಡುತ್ತಿತ್ತು. 

ಡಾಲರ್‌ ಎದುರು ರೂಪಾಯಿ ಇಂದು 35 ಪೈಸೆಗಳ ಚೇತರಿಕೆಯನ್ನು ಕಂಡು 73.60 ರೂ. ಮಟ್ಟ ತಲುಪಿದುದು ಚೇತೋಹಾರಿ ಎನಿಸಿತು.

ಇಂದಿನ ವಹಿವಾಟಿನಲ್ಲಿ ಅತ್ಯಂಕ ಕಳಪೆ ನಿರ್ವಹಣೆ ತೋರಿದ ಇನ್‌ಫೋಸಿಸ್‌ ಶೇರು ಶೇ.2.90 ಕುಸಿತ ಕಂಡಿತು. ವಿಪ್ರೋ ಶೇರು ಶೇ.0.47 ಮತ್ತು ಟಿಸಿಎಸ್‌ ಶೇರು ಶೇ.0.15ರ ಕುಸಿತವನ್ನು ಕಂಡವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,729 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,613 ಶೇರುಗಳು ಮುನ್ನಡೆ ಸಾಧಿಸಿದವು; 988 ಶೇರುಗಳು ಹಿನ್ನಡೆಗೆ ಗುರಿಯಾದವು; 128 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ