ವಾರಾಂತ್ಯ ಸರಣಿ ರಜೆಗೆ ಸಜ್ಜು: ಮುಂಬಯಿ ಶೇರು 24 ಅಂಕ ನಷ್ಟ
Team Udayavani, Oct 17, 2017, 4:41 PM IST
ಮುಂಬಯಿ: ದೀಪಾವಳಿ ಹಬ್ಬದ ಪ್ರಯುಕ್ತ ಸುದೀರ್ಘ ವಾರಾಂತ್ಯ ರಜೆಯ ಕಾರಣ, ಕಳೆದ ಮೂರು ದಿನಗಳ ನಿರಂತರ ಏರಿಕೆಯಿಂದಾದ ಲಾಭದ ನಗದೀಕರಣದಲ್ಲೇ ವಹಿವಾಟುದಾರರು ಹಾಗೂ ಹೂಡಿಕೆದಾರರು ಆಸಕ್ತಿ ತೋರಿದ ಕಾರಣ, ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ ದಿನದ ವಹಿವಾಟಿನ ಉದ್ದಕೂ ಏರುಪೇರು ಕಾಣುತ್ತಾ ಸಾಗಿ ಅಂತಿಮವಾಗಿ ದಿನದ ವಹಿವಾಟನ್ನು 24.48 ಅಂಕಗಳ ನಷ್ಟದೊಂದಿಗೆ 32,609.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆದರೆ ವ್ಯಕ್ತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.60 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,234.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,377 ಶೇರುಗಳು ಮುನ್ನಡೆ ಸಾಧಿಸಿದರೆ 1,299 ಶೇರುಗಳು ಹಿನ್ನಡೆಗೆ ಗುರಿಯಾದವು; 129 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದು ಬಿಎಸ್ಇ ನಡೆಸಿದ ವಹಿವಾಟು ಕೇವಲ 2,336.05 ಕೋಟಿ ರೂ. ನಿನ್ನೆ ಸೋಮವಾರದ ವಹಿವಾಟು 3,457.79 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್