ವಾಣಿಜ್ಯ ಸಮರ ಭೀತಿ: 2ನೇ ದಿನವೂ ಸೆನ್ಸೆಕ್ಸ್ ಕುಸಿತ, 51 ಅಂಕ ನಷ್ಟ
Team Udayavani, Jun 22, 2018, 10:31 AM IST
ಮುಂಬಯಿ : ವಾಣಿಜ್ಯ ಸಮರ ಭೀತಿ ಜಾಗತಿಕ ಶೇರು ಮಾರುಕಟ್ಟೆಗಳನ್ನು ಕಾಡಲು ಆರಂಭವಾಗಿದ್ದು ಮುಂಬಯಿ ಶೇರು ಪೇಟೆ ಕೂಡ ಈ ಭೀತಿಯಿಂದಾಗಿ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 50 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ನಿನ್ನೆ ಗುರುವಾರ 115 ಅಂಕಗಳ ನಷ್ಟಕ್ಕೆ ಗುರಿಯಾಗಿ ಇಂದು ಕೂಡ ತನ್ನ ಸೋಲಿನ ನಡೆಯನ್ನು ಆರಂಭಿಸಿದ ಮುಂಬಯಿ ಶೇರು ಪೇಟೆಯಲ್ಲಿ ಕ್ಯಾಪಿಟಲ್ ಗೂಡ್ಸ್, ರಿಯಲಿ, ಇನ್ಫ್ರಾಸ್ಟ್ರಕ್ಚರ್, ಪವರ್, ಹೆಲ್ತ್ ಕೇರ್ ಮತ್ತು ಮೆಟಲ್ ಶೇರುಗಳು ಶೇ.0.35ರ ನಷ್ಟಕ್ಕೆ ಗುರಿಯಾದವು.
ಕೋಲ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಏಶ್ಯನ್ ಪೇಂಟ್, ಎಸ್ಬಿಐ, ಅದಾನಿ ಪೋರ್ಟ್, ಸನ್ ಫಾರ್ಮಾ,ಇಂಡಸ್ಇಂಡ್ ಬ್ಯಾಂಕ್, ಎಸ್ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ಆಟೋ, ಮಾರುತಿ ಸುಜುಕಿ, ಎಚ್ ಡಿ ಎಫ್ಸಿ ಬ್ಯಾಂಕ್ ಶೇರುಗಳು ಇಂದು ಶೇ.1.40 ಕುಸಿತಕ್ಕೆ ಗುರಿಯಾದವು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 78.20 ಅಂಕಗಳ ನಷ್ಟದೊಂದಿಗೆ 35,354.19 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.60 ಅಂಕಗಳ ನಷ್ಟದೊಂದಿಗೆ 10,711.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್