ಟೆಂಪೋ-ಟ್ಯಾಂಕರ್ ಢಿಕ್ಕಿ : 10 ಸಾವು, 32 ಮಂದಿಗೆ ಗಾಯ
Team Udayavani, May 12, 2018, 4:39 PM IST
ಮುಂಬಯಿ : ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಲಾತೂರ್ -ಮುಖೇಡ್ ರಸ್ತೆಯಲ್ಲಿ ಇಂದು ಸಂಭವಿಸಿದ ಟೆಂಪೋ – ಟ್ಯಾಂಕರ್ ಢಿಕ್ಕಿಯಲ್ಲಿ 10 ಮಂದಿ ಮೃತಪಟ್ಟು ಇತರ 32 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ನಾಂದೇಡ್ನ ಜಾಂಬ್ ಗ್ರಾಮದಲ್ಲಿ ಈ ಭೀಕರ ಅವಘಡ ಇಂದು ಬೆಳಗ್ಗೆ ಸಂಭವಿಸಿತು. ಮದುವೆ ಸಮಾರಂಭಕ್ಕೆ ಜನರನ್ನು ಒಯ್ಯುತ್ತಿದ್ದ ಟೆಂಪೋಗೆ ತೈಲ ಟ್ಯಾಂಕರ್ ಢಿಕ್ಕಿ ಹೊಡೆಯಿತು ಎಂದು ಮುಖೇಡ್ ನ ಹಿರಿಯ ಪೊಲೀಸ್ ಅಧಿಕಾರಿ ಎಸ್ ಬಿ ಚೌಬೆ ತಿಳಿಸಿದ್ದಾರೆ.
10 ಮಂದಿ ಮೃತರಲ್ಲಿ ಎಂಟು ಮಂದಿ ಮಹಿಳೆಯರಾಗಿದ್ದಾರೆ. 32 ಗಾಯಾಳುಗಳಲ್ಲಿ 10 ಮಂದಿಯ ಪರಿಸ್ಥಿತಿ ಚಿಂತಾಜನಕವಿದೆ ಎಂದು ಚೌಬೆ ತಿಳಿಸಿದ್ದಾರೆ. ಟೆಂಪೋದಲ್ಲಿದ್ದವರು ಲಾತೂರ್ನ ಔಸಾ ತೆಹಸೀಲ್ನ ಖರೋಸಾ ಗ್ರಾಮದವರೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ