ಮೀನಿನ ಸಾರು ಸೇವನೆ: 168 ಮಂದಿ ಆಸ್ಪತ್ರೆಗೆ
Team Udayavani, Apr 3, 2017, 11:48 AM IST
ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರದ ಪಲ್ಲಿಪುರಂನಲ್ಲಿರುವ ಸಿಆರ್ಪಿಎಫ್ ಕ್ಯಾಂಪ್ನ 168 ಸಿಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೀನಿನ ಸಾರು ಸೇವನೆ ಬಳಿಕ ಈ ಬೆಳವಣಿಗೆಯಾಗಿದೆ ಎಂದು ಶಂಕಿಸಲಾಗಿದ್ದು, ತನಿಖೆಗಾಗಿ ಸಮಿತಿ ರಚಿಸಲಾಗಿದೆ. ಶನಿವಾರ ರಾತ್ರಿ ಊಟದ ಬಳಿಕ ಸಿಬಂದಿ ಹೊಟ್ಟೆ ನೋವು ಮತ್ತು ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 50 ಮಂದಿಯನ್ನು ಹೊರರೋಗಿಗಳಾಗಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.