ಮದುವೆ ಆಗ್ಬೇಕು; ಪೆರೋಲ್ ಕೊಡಿ ಎಂದ ಪಾತಕಿ ಸಲೇಂ
Team Udayavani, Jul 18, 2017, 3:40 AM IST
ಮುಂಬಯಿ: ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರು ನೋಡುತ್ತಿರುವ ಗ್ಯಾಂಗ್ಸ್ಟರ್ ಅಬು ಸಲೇಂಗೆ ಪೆರೋಲ್ ಬೇಕಂತೆ. ಅದೂ ಯಾಕೆ ಗೊತ್ತಾ? 26 ವರ್ಷದ ಯುವತಿಯನ್ನು ಮದುವೆಯಾಗಲು! ಹೌದು. ಕಳೆದ ತಿಂಗಳಷ್ಟೇ ದೋಷಿ ಎಂದು ಘೋಷಿಸಲ್ಪಟ್ಟ ಅಬು ಸಲೇಂ ಇದೀಗ, ತಾನು ಮದುವೆಯಾಗಲು ಬಯಸಿದ್ದು, ತನಗೆ ಪೆರೋಲ್ ಅಥವಾ ತಾತ್ಕಾಲಿಕ ಜಾಮೀನು ನೀಡುವಂತೆ ಕೋರಿ ಮುಂಬೈ ಕೋರ್ಟ್ನ ಮೊರೆಹೋಗಿದ್ದಾನೆ.
26 ವರ್ಷದ ಯುವತಿಯೊಬ್ಬಳು 2015ರಲ್ಲಿ ಅಬು ಸಲೇಂನನ್ನು ಮದುವೆ ಆಗಬೇಕು ಎಂದು ವಿಶೇಷ ಟಾಡಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಸಲೇಂ ಕೂಡ ಕೋರ್ಟ್ ಮೆಟ್ಟಿಲೇರಿದ್ದು, “ಮದುವೆಯಾಗಲು ಅಪರಾಧಿಗಳಿಗೆ ಅವಕಾಶ ನೀಡಬೇಕು’ ಎಂಬ ಎರಡು ಹೈಕೋರ್ಟ್ಗಳ ತೀರ್ಪನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ