ಮಗಳ ಆಶ್ಲೀಲ ವಿಡಿಯೋ ಅಪ್ಲೋಡ್: ಪ್ರಶ್ನಿಸಲು ಹೋದ ಯೋಧನನ್ನೇ ಥಳಿಸಿ ಹತ್ಯೆ; 7 ಮಂದಿ ಬಂಧನ
Team Udayavani, Dec 27, 2022, 8:51 AM IST
ಗಾಂಧಿನಗರ: ಗುಜರಾತ್ನ ನದಿಯಾದ್ ಜಿಲ್ಲೆಯಲ್ಲಿ ತನ್ನ ಮಗಳ ಅಶ್ಲೀಲ ವೀಡಿಯೋ ಪ್ರಸಾರ ಮಾಡಿದ ಬಗ್ಗೆ ಪ್ರಶ್ನಿಸಲು ಹೋದ ಬಿಎಸ್ಎಫ್ ಯೋಧರೊಬ್ಬರರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಸ್ಎಫ್ ಯೋಧರ ಮೆಲಾಜಿ ವಘೇಲಾ (45) ಅವರ ಮಗಳು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಕೆ ತನ್ನ ಸಹಪಾಠಿ ಶೈಲೇಶ್ ನನ್ನು ಪ್ರೀತಿಸುತ್ತಿದ್ದರು. ಸಲುಗೆಯನ್ನು ದುರುಪಯೋಗಪಡಿಸಿಕೊಂಡ ಶೈಲೇಶ್, ಆಕೆಯ ಅಶ್ಲೀಲ ವೀಡಿಯೋ ಅನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೆಲಾಜಿ ವಘೇಲಾ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಕುಟುಂಬದ ಸದಸ್ಯರು ಶೈಲೇಶ್ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ ಶೈಲೇಶ್ ಮನೆಯಲ್ಲಿರಲಿಲ್ಲ. ಮನೆಯಲ್ಲಿದ್ದ ಉಳಿದವರು ಮಾತಾನಾಡುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಎರಡು ಕುಟುಂಬದ ಜಗಳದಲ್ಲಿ ಬಾಲಕನ ಮನೆಯವರು ಮೆಲಾಜಿ ವಘೇಲಾ ಅವರ ಮೇಲೆ ಹಲ್ಲೆ ಮಾಡಿ, ಚೂಪಾದ ಆಯುಧದಿಂದ ಹೊಡೆದಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೆಲಾಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಯೋಧನ ಮಗ ನವ್ ದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೆಲಾಜಿ ಅವರ ಪತ್ನಿ ಕೊಟ್ಟ ದೂರಿನ ಆಧಾರದಲ್ಲಿ ಪೊಲೀಸರು ಶೈಲೇಶ್ ಮನೆಯ 7 ಮಂದಿ ಸದಸ್ಯರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ