ಖಾಸಗಿ ಕಂಪನಿಗಳಿಗೆ ವಿದ್ಯುತ್ ಬಿಲ್ ಶೇ.80 ಇಳಿಕೆ
ಕರ್ನಾಟಕದ ಮೇಲಿದ್ದ ಖರೀದಿ ನಿರ್ಬಂಧವೂ ತೆರವು
Team Udayavani, Aug 21, 2022, 7:15 AM IST
ನವದೆಹಲಿ: ಯಾವ ರಾಜ್ಯಗಳು ಖಾಸಗಿ ಕಂಪನಿಗಳಿಗೆ ವಿದ್ಯುತ್ ಬಿಲ್ ಬಾಕಿಯುಳಿಸಿಕೊಂಡಿವೆಯೋ, ಅವು ಗುರುವಾರ ಮಧ್ಯರಾತ್ರಿಯಿಂದ ವಿದ್ಯುತ್ ಖರೀದಿ ಮಾಡುವಂತಿಲ್ಲವೆಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಅದಾಗಿ ಒಂದೇ ದಿನದಲ್ಲಿ ಬಾಕಿ ಮೊತ್ತ ಶೇ.80 ಕಡಿಮೆಯಾಗಿದೆ! ಅರ್ಥಾತ್ 5100 ಕೋಟಿ ರೂ. ಇದ್ದ ಬಾಕಿ ಮೊತ್ತ ಒಂದೇ ಬಾರಿಗೆ 1037 ಕೋಟಿ ರೂ.ಗಿಳಿದಿದೆ. ಸಂತೋಷದ ಸಂಗತಿಯೆಂದರೆ ಕರ್ನಾಟಕದ ಮೇಲೆ ಹೇರಿದ್ದ ಖರೀದಿ ನಿರ್ಬಂಧವೂ ತೆರವಾಗಿದೆ.
ಇಷ್ಟರ ಮಧ್ಯೆಯೂ ಐದು ರಾಜ್ಯಗಳ ಮೇಲಿನ ನಿರ್ಬಂಧ ಹಾಗೆಯೇ ಮುಂದುವರಿದಿದೆ. ತಮಿಳುನಾಡು, ಮಧ್ಯಪ್ರದೇಶ, ಜಮ್ಮುಕಾಶ್ಮೀರ, ರಾಜಸ್ಥಾನ, ಮಿಜೋರಾಮ್ ರಾಜ್ಯಗಳ ಮೇಲಿನ ನಿರ್ಬಂಧ ಮುಂದುವರಿದಿದೆ. ಈ ಪೈಕಿ ಗರಿಷ್ಠ 435 ಕೋಟಿ ರೂ. ಬಿಲ್ ಬಾಕಿಯನ್ನು ಜಮ್ಮುಕಾಶ್ಮೀರ ಉಳಿಸಿಕೊಂಡಿದೆ. ಮಧ್ಯಪ್ರದೇಶ 234 ಕೋಟಿ ರೂ. ಬಾಕಿಯುಳಿಸಿಕೊಂಡಿದೆ.
ಪ್ರಸಕ್ತ ಚಾಲ್ತಿಯಲ್ಲಿರುವ ವಿದ್ಯುತ್ ಬಿಲ್ ಬಾಕಿಯೊಂದಿಗೆ ಖಾಸಗಿ ಕಂಪನಿಗಳು ಇತರೆ ರೂಪದ 1 ಲಕ್ಷ ಕೋಟಿ ರೂ. ಬಾಕಿಯನ್ನೂ ಸಂಗ್ರಹಿಸಿವೆ. ಇವನ್ನೆಲ್ಲ ಕೇಂದ್ರ ಸರ್ಕಾರ ರೂಪಿಸಿದ ನಿಯಮಾವಳಿಗಳಂತೆಯೇ ಸಂಗ್ರಹಿಸಲಾಗುತ್ತದೆ.
ರಾಜ್ಯಗಳ ಸ್ಥಿತಿ ಹೇಗಿದೆ?: ಕೇಂದ್ರದ ಸೂಚನೆ ಬೆನ್ನಲ್ಲೇ ಬಿಹಾರ, ಮಣಿಪುರ, ಜಾರ್ಖಂಡ್‌ಗಳು ಬಿಲ್ ಪಾವತಿಸಿವೆ. ಆಂಧ್ರಪ್ರದೇಶ ತನ್ನಿಂದ ಬಿಲ್ ಬಾಕಿಯೇ ಇಲ್ಲ ಎಂದು ಹೇಳಿದೆ. ಮಹಾರಾಷ್ಟ್ರ ತಾನು ನಿಯಂತ್ರಣ ಪ್ರಾಧಿಕಾರದ ಆದೇಶದಂತೆ ಪಾವತಿ ಮಾಡುತ್ತಿದ್ದೇನೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!