Rs 2,000; ಹಿಂತೆಗೆದುಕೊಂಡ ಬಳಿಕ 93% ರಷ್ಟು ನೋಟುಗಳು ರಿಟರ್ನ್
Team Udayavani, Sep 1, 2023, 8:15 PM IST
ಹೊಸದಿಲ್ಲಿ: ಆಗಸ್ಟ್ 31 ರ ವರೆಗೆ ಹಿಂದಿರುಗಿದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ಹೇಳಿದೆ.
“ಬ್ಯಾಂಕ್ಗಳಿಂದ ಪಡೆದ ಮಾಹಿತಿಯ ಪ್ರಕಾರ, ಚಲಾವಣೆಯಿಂದ ಮರಳಿ ಪಡೆದ 2,000 ರೂ.ಗಳ ನೋಟುಗಳ ಒಟ್ಟು ಮೌಲ್ಯ 0.24 ಲಕ್ಷ ಕೋಟಿ ರೂ. ಪರಿಣಾಮವಾಗಿ, ಆಗಸ್ಟ್ 31 ರ ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿರುವ 2,000 ರೂ. ಬ್ಯಾಂಕ್ ನೋಟುಗಳಲ್ಲಿ 93 ಪ್ರತಿಶತವು ಹಿಂತಿರುಗಿದೆ”ಎಂದು ಆರ್ಬಿಐ ಹೇಳಿದೆ. ಮೇ 19 ರಂದು ಚಲಾವಣೆಯಲ್ಲಿದ್ದ 2,000 ರೂ. ನೋಟುಗಳನ್ನು ಹಿಂಪಡೆಯಲಾಗಿತ್ತು.
2,000ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸುವ ನಿರ್ಧಾರವನ್ನು ಆರ್ಬಿಐನ ‘ಕ್ಲೀನ್ ನೋಟ್ ನೀತಿ’ಗೆ ಅನುಗುಣವಾಗಿ ಮಾಡಲಾಗಿದೆ.ಸಾರ್ವಜನಿಕರು ಸೆಪ್ಟೆಂಬರ್ 30, 2023 ರವರೆಗೆ ತಮ್ಮ ಬಳಿ ಇರುವ 2,000 ರೂ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಬಳಸಿಕೊಳ್ಳಲು ಅವಕಾಶವಿದೆ” ಎಂದು ಆರ್ಬಿಐ ಹೇಳಿದೆ.