AFSPA: ಮೇಘಾಲಯದಲ್ಲಿ ಸಂಪೂರ್ಣ ರದ್ದು; ಅರುಣಾಚಲದಲ್ಲಿ ಆಂಶಿಕ
Team Udayavani, Apr 23, 2018, 5:26 PM IST
ಹೊಸದಿಲ್ಲಿ : ಪ್ರಕ್ಷುಬ್ಧ ಪ್ರದೇಶಗಳಲ್ಲಿ ಸೇನೆಗೆ ಅಪರಿಮಿತ ಅಧಿಕಾರ ನೀಡುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರಿ ಕಾಯಿದೆ (AFSPA) ಯನ್ನು ಇದೇ ಎಪ್ರಿಲ್ 1ರಿಂದ ಜಾರಿಗೆ ಬಂದಿರುವಂತೆ ಮೇಘಾಲಯದಲ್ಲಿ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ಕೇವಲ ಎಂಟು ಪೊಲೀಸ್ ಠಾಣೆಗಳಿಗೆ ಮಾತ್ರವೇ ಅದನ್ನು ಸೀಮಿತಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯನ್ನು ಉಲ್ಲೇಖೀಸಿ ಐಎಎನ್‌ಎಸ್ ಮಾಡಿರುವ ಪ್ರಕಾರ “ಕೇಂದ್ರ ಗೃಹ ಸಚಿವಾಲಯ AFSPA ಕಾಯಿದೆಯನ್ನು ಮೇಘಾಲಯದಿಂದ ಸಂಪೂರ್ಣವಾಗಿ ತೆಗೆದು ಹಾಕಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ಹದಿನಾರು ಪೊಲೀಸ್ ಠಾಣೆಗಳಿಗೆ ಬದಲು ಕೇವಲ ಎಂಟು ಪೊಲೀಸ್ ಠಾಣೆಗಳಿಗೆ ಮಾತ್ರವೇ ಅದನ್ನು ಸೀಮಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮೇಘಾಲಯ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆಯು ಗಮನಾರ್ಹವಾಗಿ ಸುಧಾರಿಸಿರುವುದನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.