ತನ್ನ ಆತ್ಮಹತ್ಯೆಯನ್ನು ಫೇಸ್‌ ಬುಕ್‌ನಲ್ಲಿ ಲೈವ್‌ ಮಾಡಿದ ಆಗ್ರಾ ಯುವಕ

Team Udayavani, Jul 12, 2018, 11:40 AM IST

agra-youth-600.jpg

ಆಗ್ರಾ : ದೇಶದ ಯುವ ಜನರು ತಮ್ಮ ಅತ್ಯಮೂಲ್ಯ ಜೀವವನ್ನು ಕ್ಷುಲ್ಲಕ ಕಾರಣಕ್ಕೆ  ಆತ್ಮಹತ್ಯೆ ಮೂಲಕ ವ್ಯರ್ಥ ಮಾಡಿಕೊಳ್ಳುವುದು ಈಚಿನ ದಿನಗಳಲ್ಲಿ ತೀರ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಎಂಬಂತೆ ಆಗ್ರಾದ 24ರ ಹರೆಯದ ಯುವಕನೋರ್ವ ತಾನು ಐದು ಬಾರಿ ಸೇನಾ ಸೇರ್ಪಡೆಯ ಪರೀಕ್ಷೆಯಲ್ಲಿ ಫೇಲಾದುದಕ್ಕೆ ಜುಗುಪ್ಸೆ ಪಟ್ಟು ಆತ್ಮಹತ್ಯೆ ಮಾಡಿಕೊಂಡದ್ದಲ್ಲದೆ ತನ್ನ ಈ ಕೃತ್ಯವನ್ನು ಫೇಸ್‌ ಬುಕ್‌ನಲ್ಲಿ ಲೈವ್‌ ಸ್ಟ್ರೀಮ್‌ ಮೂಡಿರುವುದು ಆಘಾತಕಾರಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಮುನ್ನಾ ಕುಮಾರ್‌ ಒಬ್ಬ ಬಿಎಸ್ಸಿ ಪದವೀಧರ; ನ್ಯೂ ಆಗ್ರಾ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದ ಶಾಂತಿ ನಗರದ ನಿವಾಸಿ. ಸೇನೆ ಸೇರುವ ಪರೀಕ್ಷೆಯನ್ನು ಐದು ಬಾರಿ ಎದುರಿಸಿಯೂ ತಾನು ವಿಫ‌ಲನಾದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಮುಂದಾದ ಮುನ್ನಾ ಕುಮಾರ್‌ ಫೇಸ್‌ ಬುಕ್‌ ನಲ್ಲಿ ತನ್ನ ಆತ್ಮಹತ್ಯೆ ಕೃತ್ಯವನ್ನು ಸುಮಾರು 1 ನಿಮಿಷ 9 ಸೆಕೆಂಡುಗಳ ಕಾಲ ಆತ ಲೈವ್‌ ಸ್ಟ್ರೀಮ್‌ ಮಾಡಿದ್ದಾನೆ. 

ವಿಶೇಷವೆಂದರೆ ಆತನ ಈ ಲೈವ್‌ ಸ್ಟ್ರೀಮನ್ನು 2,750ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆದರೆ ಇವರಲ್ಲಿ ಯಾರೊಬ್ಬರೂ ಮುನ್ನಾ ಮನೆಯವರನ್ನು ಜಾಗೃತಗೊಳಿಸಿಲ್ಲ; ಪೊಲೀಸರ ಗಮನಕ್ಕೂ ಈ ವಿಷಯವನ್ನು ತರಲಿಲ್ಲ. ಒಂದು ಅಮೂಲ್ಯ ಜೀವ ತಮ್ಮ ಕಣ್ಣ ಮುಂದೆಯೇ ಸಾಯುವುದನ್ನು ನಿರ್ಲಿಪ್ತರಾಗಿ ನೋಡಿ ತೆಪ್ಪಗಿದ್ದರು. ಇನ್ನೊಬ್ಬರ ಸಾವಿಗೆ ಸ್ಪಂದನೆಯನ್ನೇ ತೋರದ ಅವಗುಣಕ್ಕೆ ಸಾಕ್ಷಿಯಾದರು. 

ಮುನ್ನಾ ಕುಮಾರ್‌ ಸುಮಾರ 6 ಪುಟಗಳ ಡೆತ್‌ ನೋಟ್‌ ಬರೆದಿಟ್ಟಿದ್ದ. ಐದು ಬಾರಿಯೂ ಆರ್ಮಿ ಪರೀಕ್ಷೆಯಲ್ಲಿ ಫೇಲಾದುದಕ್ಕೆ ಮತ್ತು ತನ್ನ ಆತ್ಮಹತ್ಯೆಗೆ ತಾನೇ ಕಾರಣ ಎಂದು ಬರೆದಿದ್ದಾನೆ. 

ಮುನ್ನಾ ಕುಮಾರ್‌ನ ಸಹೋದರ ಹೇಳುವ ಪ್ರಕಾರ “ಮುನ್ನಾ ಭಗತ್‌ ಸಿಂಗ್‌ ನಿಂದ ಪ್ರೇರಿತನಾಗಿ ಸೇನೆಯನ್ನು ಸೇರಲು ಬಯಸಿದ್ದ. ಆತ್ಮಹತ್ಯೆ ತಾಸುಗಳ ಮುನ್ನ ನಾವೆಲ್ಲ ಒಟ್ಟಿಗೇ ಕುಳಿತು ಊಟಮಾಡಿದ್ದೆವು; ಆತ ನಾರ್ಮಲ್‌ ಆಗಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಾನು ಎಂದು ನಾವು ಯಾರೂ ಕನಸಿನಲ್ಲೂ ಎಣಿಸಿರಲಿಲ್ಲ.

ಮುನ್ನಾ ಕುಮಾರ್‌ ಗಾಗಿ ಆತನ ತಂದೆ ಪ್ರಭು ಪ್ರಸಾದ್‌ ಈಚೆಗಷ್ಟೇ ಗ್ರಾಸರಿ ಸ್ಟೋರ್‌ ತೆರೆದಿದ್ದರು. ಆರ್ಮಿ ಪರೀಕ್ಷೆ ಫೇಲಾಗಿ ಜುಗುಪ್ಸೆಗೊಂಡಿದ್ದ ಮಗನನ್ನು ಜೀವನಮುಖೀಯನ್ನಾಗಿಸಲು ಯತ್ನಿಸಿದ್ದರು. ಆದರೆ ಎಲ್ಲವೂ ನೀರಿನಲ್ಲಿ ಮಾಡಿದ ಹೋಮವಾಯಿತು.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.