ಮತ್ತಷ್ಟು ಹಾರೋಪ್ ಸೇರ್ಪಡೆಗೆ ವಾಯುಸೇನೆ ನಿರ್ಧಾರ
Team Udayavani, Jan 28, 2019, 12:30 AM IST
ಹೊಸದಿಲ್ಲಿ: ಮಾನವ ರಹಿತ ಸಮರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿರುವ ಭಾರತೀಯ ವಾಯುಪಡೆ, ತನ್ನಲ್ಲಿರುವ ಚಾಲಕ ರಹಿತ ಹಾರೋಪ್ ಮಾದರಿಯ ಡ್ರೋಣ್ ತಂತ್ರಜ್ಞಾನ ಆಧಾರಿತ ಯುದ್ಧ ವಿಮಾನಗಳ ಸಮೂಹಕ್ಕೆ ಇನ್ನೂ 15 ವಿಮಾನಗಳನ್ನು ಸೇರ್ಪಡೆಗೊಳಿಸಲು ತೀರ್ಮಾನಿಸಿದೆ. ಶತ್ರು ವಲಯದ ಉನ್ನತ ಮಟ್ಟದ ಸೇನಾ ನೆಲೆಗಳ ಮೇಲೆರಗಿ ಅವನ್ನು ಧ್ವಂಸ ಮಾಡುವ ಛಾತಿಯನ್ನು ಹಾರೋಪ್ ಮಾದರಿ ಯುದ್ಧ ವಿಮಾನಗಳು ಹೊಂದಿವೆ.
ಮುಂದಿನ ವಾರ, ರಕ್ಷಣಾ ಸಚಿ ವಾಲಯ ಹಾಗೂ ವಾಯು ಸೇನೆಯ ಅಧಿಕಾರಿಗಳುಳ್ಳ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ಹಾರೋಪ್ ಯುದ್ಧ ವಿಮಾನ ಕೊಳ್ಳುವಿಕೆ ಬಗ್ಗೆ ಹೊಸ ಪ್ರಸ್ತಾವನೆ ಮಂಡಿಸುವ ಬಗ್ಗೆ ಚರ್ಚಿ ಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಲ್ಲಿ, ಈಗಾಗಲೇ ಭಾರತಕ್ಕೆ ಮಾನವ ರಹಿತ ವಿಚಕ್ಷಣಾ ವಿಮಾನ ಹಾಗೂ ಯುದ್ಧ ವಿಮಾನಗಳನ್ನು ಸರಬರಾಜು ಮಾಡುತ್ತಿರುವ ಇಸ್ರೇಲ್ಗೆ ಹೊಸ ಮಾದರಿ ವಿಮಾನಗಳ ತಯಾರಿಕೆಗೆ ಸೂಚಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ