ಪೈಲಟ್ಗಳ ಎಡವಟ್ಟು
Team Udayavani, Sep 8, 2018, 10:43 AM IST
ಹೊಸದಿಲ್ಲಿ: ಮಾಲ್ಡೀವ್ಸ್ನ ಮಾಲೆ ನಗರದ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ರನ್ ವೇನಲ್ಲಿ ಏರ್ ಇಂಡಿಯಾದ ವಿಮಾನ ಇಳಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅಚಾತುರ್ಯ ಎಸಗಿದ ಇಬ್ಬರೂ ಪೈಲಟ್ಗಳನ್ನು ಅಮಾನತುಗೊಳಿಸಲಾಗಿದೆ. ತಿರುವನಂತಪುರಂನಿಂದ ಮಾಲೆಗೆ ಹೊರಟಿದ್ದ ಈ ವಿಮಾನದಲ್ಲಿ 136 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ನಿರ್ಮಾಣ ಹಂತದ ರನ್ ವೇ ಮೇಲೆ ಇಳಿಸಿದ ಕಾರಣ ವಿಮಾನದ ಟೈರ್ಗಳಿಗೆ ಹಾನಿಯಾಗಿದ್ದು, ವಿಮಾನ ಪಾರ್ಕಿಂಗ್ ಸ್ಥಳದ ಕಡೆಗೆ ಬಂದು ವಾಲಿಕೊಂಡಿತು ಎನ್ನಲಾಗಿದೆ.