Udayavni Special

ನ್ಯಾಯಾಧೀಶರ ನೇಮಕ: ಕೇಂದ್ರ ಸರಕಾರಕ್ಕೆ ಹಿನ್ನಡೆ


Team Udayavani, Aug 7, 2017, 6:00 AM IST

07-PTI-1.jpg

ಹೊಸದಿಲ್ಲಿ: ನ್ಯಾಯಾಂಗ ನೇಮಕ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಕೇಂದ್ರ ಸರಕಾರದ ಆಶಯಕ್ಕೆ ಭಾರೀ ಹಿನ್ನಡೆಯಾಗಿದೆ.

ದೇಶಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ ಸುಮಾರು 4,452 ನ್ಯಾಯಾಧೀಶರ ಸ್ಥಾನ ಖಾಲಿ ಇದ್ದು, ಇವುಗಳ ನೇಮಕ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಹೈಕೋರ್ಟ್‌ಗಳು ಹೊಂದಿರುವ ಈ ನೇಮಕ ಅಧಿಕಾರವನ್ನು ಕೇಂದ್ರ ಸರಕಾರ, ಅಖೀಲ ಭಾರತ ನ್ಯಾಯಾಂಗ ನೇಮಕ ಆಯೋಗ ರಚಿಸುವ ಮೂಲಕ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿ ದೇಶದ 24 ಹೈಕೋರ್ಟ್‌ಗಳಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವಕ್ಕೆ ಕರ್ನಾಟಕ ಸಹಿತ 9 ಹೈಕೋರ್ಟ್‌ಗಳು ವಿರೋಧ ವ್ಯಕ್ತಪಡಿಸಿದ್ದು, ನೇಮಕಾಧಿಕಾರ ತಮಗೇ ಇರಲಿ ಎಂದು ಖಂಡಾತುಂಡವಾಗಿ ಹೇಳಿವೆ.

ಎಂಟು ಹೈಕೋರ್ಟ್‌ಗಳು ಕೆಲವು ಬದಲಾವಣೆ ಮಾಡಲು ಸೂಚನೆ ನೀಡಿದ್ದರೆ, ಎರಡು ಹೈಕೋರ್ಟ್‌ಗಳು ಮಾತ್ರ ನ್ಯಾಯಾಂಗ ಆಯೋಗಕ್ಕೆ ಸಹಮತ ವ್ಯಕ್ತಪಡಿಸಿವೆ. ಇನ್ನೂ ಮೂರು ಹೈಕೋರ್ಟ್‌ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಕಾನೂನು ಇಲಾಖೆಯ ದಾಖಲೆಯೊಂದು ವಿವರ ನೀಡಿದೆ.

ಕೇಂದ್ರ ನಾಗರಿಕ ಸೇವೆಗೆ ಆಯ್ಕೆ ಮಾಡುವ ರೀತಿಯಲ್ಲೇ ಒಂದು ಪರೀಕ್ಷಾಧಿಕಾರ ರೂಪಿಸಿ ಈ ಮೂಲಕ ಹೈಕೋರ್ಟ್‌ಗಳಿಗಿಂತ ಕೆಳಹಂತ ದಲ್ಲಿರುವ ನ್ಯಾಯಾಲಯಗಳಿಗೆ ನ್ಯಾಯಾಧೀಶ ರನ್ನು ನೇಮಕ ಮಾಡಲು ಕೇಂದ್ರ ಸರಕಾರ ಪ್ರಸ್ತಾವನೆ ಇಟ್ಟಿತ್ತು. ವಿಶೇಷವೆಂದರೆ ಇದು ಈಗಿನ ಪ್ರಸ್ತಾವನೆ ಅಲ್ಲವೇ ಅಲ್ಲ. 1960ರಲ್ಲೇ ಅಂದರೆ ನೆಹರೂ ಕಾಲದಲ್ಲಿ ಈ ಸಲಹೆ ಕೇಳಿಬಂದಿತ್ತು.

ಈಗ ಕೆಳಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹು¨ªೆಗಳು ಖಾಲಿ ಇರುವುದರಿಂದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಎಂಬ ಕಾರಣದಿಂದ ಆಯೋಗ ರಚನೆ ಮಾಡಿ ಈ ಮೂಲಕ ನೇಮಕ ಮಾಡಿಕೊಳ್ಳಬಹುದು ಎಂದು ಮತ್ತೂಮ್ಮೆ ಪ್ರಸ್ತಾವನೆ ಮುಂದಿಟ್ಟಿದೆ. ಅಲ್ಲದೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ಕೂಡ ನ್ಯಾಯಾಧೀಶರ ನೇಮಕಕ್ಕೆ ನೀಟ್‌ ಮಾದರಿಯ ಪರೀಕ್ಷೆಯಾಗಬೇಕು ಎಂಬ ಸಲಹೆಯನ್ನೂ ನೀಡಿತ್ತು. ಇದಕ್ಕೆ ಒಪ್ಪಿಗೆ ನೀಡಿದ್ದ ಕಾನೂನು ಸಚಿವಾಲಯ ನೀಟ್‌ ಜತೆಗೆ ನೇಮಕ ಆಯೋಗವೂ ಇರಬೇಕು ಎಂದಿತ್ತು. ಅಲ್ಲದೆ ನ್ಯಾಯಾಧೀಶರ ಆಯ್ಕೆ ಗಾಗಿ ಪರೀಕ್ಷೆ ನಡೆಸಲು ಯುಪಿಎಸ್ಸಿಗೂ ಕೇಳಿಕೊಂಡಿತ್ತು. ವಿಶೇಷವೆಂದರೆ ಅದೂ ಒಪ್ಪಿತ್ತು.

2015ರ ಡಿ. 31ರ ಮಾಹಿತಿಯಂತೆ ದೇಶಾದ್ಯಂತ 4,452 ನ್ಯಾಯಾಧೀಶರ ಹು¨ªೆ ಖಾಲಿ ಇವೆ. 20,502 ಹು¨ªೆಗಳಿದ್ದರೆ, ಸದ್ಯ ಭರ್ತಿಯಾಗಿರುವುದು 16,050 ಮಾತ್ರ. ಆದರೆ ಬಹುತೇಕ ಹೈಕೋರ್ಟ್‌ಗಳು ಆಡಳಿತಾತ್ಮಕ ವಿಚಾರ ತಮಗೇ ಇರಲಿ ಎಂದಿವೆ. ಸದ್ಯ ಹಲವಾರು ರಾಜ್ಯ ಹೈಕೋರ್ಟ್‌ ಗಳು ನ್ಯಾಯಾಧೀಶರ ನೇಮಕಕ್ಕೆ ಪರೀಕ್ಷೆ ನಡೆಸುವ ವ್ಯವಸ್ಥೆ ಹೊಂದಿವೆ.

ಎನೆjಎಸಿ (ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ) ರದ್ದು ಮಾಡಿದ ಬಳಿಕ ಕೊಲಿಜಿಯಂನಲ್ಲಿ ಕೆಲವು ಬದಲಾವಣೆಗಳನ್ನೊಳಗೊಂಡಂತೆ ಪ್ರಸ್ತಾವನೆ ನೀಡುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಸೂಚನೆ ಅನ್ವಯ ಕೇಂದ್ರ ಸರಕಾರ ನೀಡಿದ್ದ ಹೊಸ ಮತ್ತು ಅಂತಿಮ ಪ್ರಸ್ತಾವನೆಯನ್ನೂ ಐವರಿದ್ದ ಕೊಲಿಜಿಯಂ ಸಮಿತಿ ತಿರಸ್ಕರಿಸಿದೆ. ಅಲ್ಲದೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಗಳ ನ್ಯಾಯಮೂರ್ತಿಗಳ ನೇಮಕವನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದಿದೆ. ಯಾವುದೇ ಕಾರಣಕ್ಕೂ ವ್ಯವಸ್ಥೆಯೊಂದರ ಕೆಳಗೆ ನ್ಯಾಯಾಂಗ ವ್ಯವಸ್ಥೆ ಸಿಲುಕುವುದು ಬೇಡ. ಇದು ಎಂದಿಗೂ ಸ್ವತಂತ್ರವಾಗಿಯೇ ಇರಬೇಕು ಎಂದು ಕೊಲಿಜಿಯಂ ಅಭಿಪ್ರಾಯ ಪಟ್ಟಿದ್ದು, ಕೇಂದ್ರ ಸರಕಾರದ ಮನವೊಲಿಕೆಯ ಕಡೇ ಪ್ರಯತ್ನವನ್ನೂ ಅದು ತಳ್ಳಿಹಾಕಿದೆ.

ಮಾರ್ಚ್‌ನಲ್ಲಿ ಕೇಂದ್ರ ಸರಕಾರಕ್ಕೆ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಕ್ರಿಯೆಯ ಒಪ್ಪಂದ (ಮೆಮೊರಂಡಮ್‌ ಆಫ್ ಪೊ›ಸೀಜರ್‌)ನ ಅಂತಿಮ ಕರಡನ್ನು ಕಳುಹಿಸಿದ್ದು, ಇದರಲ್ಲಿ ತಮ್ಮ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂಬುದನ್ನು ಖಚಿತವಾಗಿ ಹೇಳಿತ್ತು.

ಆದರೆ ಜುಲೈನಲ್ಲಿ ಕೊಲ್ಕತ್ತಾ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರ ಕುರಿತಂತೆ ತೀರ್ಪು ನೀಡುವಾಗ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಸೂಕ್ತ ವ್ಯವಸ್ಥೆ ಇರಬೇಕು ಎಂದು ಸಂವಿಧಾನ ಪೀಠದಲ್ಲಿದ್ದ ನ್ಯಾ| ಜೆ. ಚಲಮೇಶ್ವರ ಮತ್ತು ನ್ಯಾ| ರಂಜನ್‌ ಗೊಗೋಯ್‌ ಪ್ರತ್ಯೇಕವಾಗಿಯೇ ಹೇಳಿದ್ದರು. ಈ ಬಳಿಕ ಕೇಂದ್ರ ಸರಕಾರ ಮಾರ್ಚ್‌ನಲ್ಲಿ ನೀಡಲಾಗಿದ್ದ ಅಂತಿಮ ಕರಡಿನಲ್ಲಿ ಮತ್ತೆ ಬದಲಾವಣೆ ತರುವ ಬಗ್ಗೆ ಮರುಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿತ್ತು.

ಇತ್ತೀಚೆಗಷ್ಟೇ ಸಭೆ ಸೇರಿದ್ದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಸಮಿತಿ ಕೇಂದ್ರದ ಮರುಮನವಿಯನ್ನು ತಿರಸ್ಕರಿಸಿದೆ. ವಿಶೇಷವೆಂದರೆ ಈ ಸಮಿತಿಯಲ್ಲಿ ನ್ಯಾ| ಚಲಮೇಶ್ವರ ಮತ್ತು ನ್ಯಾ| ರಂಜನ್‌ ಗೊಗೋಯ್‌ ಕೂಡ ಇದ್ದರು. ಅಲ್ಲದೆ ನ್ಯಾ| ಜೆ. ಚಲಮೇಶ್ವರ್‌ ಅವರು ಎನ್‌ಜೆಎಸಿ ವಿರುದ್ಧ ನೀಡಿದ್ದ ತೀರ್ಪಿನಲ್ಲೂ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂಬ ಅಭಿಪ್ರಾಯಪಟ್ಟಿದ್ದರು. ಈ ಮೂಲಕ ಕೊಲಿಜಿಯಂ ವಿರುದ್ಧವೇ ಪ್ರತ್ಯೇಕ ತೀರ್ಪು ನೀಡಿದ್ದರು. ಇದಷ್ಟೇ ಅಲ್ಲ, ಇದೇ ತಿಂಗಳ 27ಕ್ಕೆ ಸಿಜೆಐ ಜೆ.ಎಸ್‌. ಖೆಹರ್‌ ಅವರು ನಿವೃತ್ತಿಯಾಗಲಿದ್ದು, ಇದರ ಒಳಗೆ ಕೊಲಿಜಿಯಂ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಬಂಧ ಪ್ರಧಾನಮಂತ್ರಿಗಳ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಸುಪ್ರೀಂ ಕೋರ್ಟ್‌ ಜತೆ ಮಧ್ಯಸ್ಥಿಕೆಗೆ ಮುಂದಾಗಿದ್ದರು. ಆದರೆ ಈಗ ಈ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

Untitled-1

ಶಶಿಕಲಾ ಎಐಎಡಿಎಂಕೆಯ ಸ್ವಯಂಘೋಷಿತ ಪ್ರಧಾನ ಕಾರ್ಯದರ್ಶಿ!

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.