ಇಂದು ಅಸಾರಾಂ ಕೇಸಿನ ತೀರ್ಪು: ಬಿಗಿಭದ್ರತೆ
Team Udayavani, Apr 25, 2018, 8:20 AM IST
ಜೋಧ್ಪುರ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಎದುರಿಸುತ್ತಿರುವ ಅತ್ಯಾಚಾರ ಮೊಕದ್ದಮೆ ಸಂಬಂಧ ಬುಧವಾರ ಇಲ್ಲಿಯ ಕೆಳಹಂತದ ಕೋರ್ಟ್ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್ ಹಾಗೂ ಹರ್ಯಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಗಳು ಇರುವುದರಿಂದ ರಾಜಸ್ಥಾನ ಹೈಕೋರ್ಟ್ ಆದೇಶದ ಮೇರೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.