ಫೈರಿಂಗ್‌ನಲ್ಲಿ ಎಎಸ್‌ಐ ಸಾವು

Team Udayavani, May 3, 2019, 6:23 AM IST

ಪಶ್ಚಿಮ ಬಂಗಾಲದ ಹೌರಾ ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದ ಅಸ್ಸಾಂ ರೈಫ‌ಲ್ಸ್‌ನ ಯೋಧ ಗುಂಡು ಹಾರಿಸಿದ ಪರಿಣಾಮ ಒಬ್ಬ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಅಸುನೀಗಿ, ಇಬ್ಬರು ಗಾಯಗೊಂಡಿದ್ದಾರೆ.

ಬಗ್ನಾನ್‌ ಎಂಬಲ್ಲಿ ಲಕ್ಷ್ಮೀಕಾಂತ್‌ ಬರ್ಮನ್‌ ಎಂಬಾತ 13 ಸುತ್ತು ಗುಂಡು ಹಾರಿಸಿದ್ದಾನೆ. ಅಸುನೀಗಿದ ಅಧಿಕಾರಿಯನ್ನು ಭೋಲಾನಾಥ್‌ ದಾಸ್‌ ಮತ್ತು ಗಾಯಗೊಂಡವರನ್ನು ಅನಿಲ್‌ ರಾಜ್‌ಬಾನ್‌ ಶಾಹಿ, ರಂತು ಮನಿ ಎಂಬವರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಹೀಗಾಗಿ ಆತನನ್ನು ಚುನಾವಣೆ ಕರ್ತವ್ಯದಿಂದ ಹೊರಗಿಡಲಾಗಿತ್ತು. ಇದರ ಹೊರತಾಗಿಯೂ ಲಕ್ಷ್ಮೀಕಾಂತ್‌ ಬರ್ಮನ್‌ ಎಂಬಾತ ಗನ್‌ ಸೆಳೆದು ಗುಂಡು ಹಾರಿಸಿದ್ದಾನೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸಿದ್ಧಿನಾಥ್‌ ಗುಪ್ತಾ ಹೇಳಿದ್ದಾರೆ. ಮೊದಲ ಹಂತದ ಮತದಾನದ ದಿನದಿಂದಲೂ ಪಶ್ಚಿಮ ಬಂಗಾಲದಲ್ಲಿ ಹಿಂಸಾಚಾರ ಸಂಭವಿಸುತ್ತಿದೆ. ಅದಕ್ಕೆ ಪೂರಕವಾಗಿ ಗುರುವಾರ ಈ ಘಟನೆ ನಡೆದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ