ಲಸಿಕೆ ಪ್ರಯೋಗ ಪುನರಾರಂಭ
Team Udayavani, Sep 13, 2020, 12:05 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬ್ರಿಟನ್ನಲ್ಲಿ ಸ್ವಯಂ ಸೇವಕರೊಬ್ಬರಲ್ಲಿ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಆಕ್ಸ್ಫರ್ಡ್ ವಿ.ವಿ.ಯ ಕೋವಿಡ್ ಲಸಿಕೆ ಪ್ರಯೋಗವನ್ನು ಮತ್ತೆ ಆರಂಭ ಮಾಡಲಾಗಿದೆ. ಈ ಸಂಬಂಧ ಈ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಆಸ್ಟ್ರಾ ಝೆನೆಕಾ ಕಂಪೆನಿ ಹೇಳಿಕೊಂಡಿದೆ.
ಕೆಲವು ದಿನಗಳ ಹಿಂದಷ್ಟೇ ಪ್ರಯೋಗದಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರೊಬ್ಬರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ ಜಗತ್ತಿನ ಬೇರೆ ಬೇರೆ ದೇಶಗಳು ಈ ಲಸಿಕೆಯ ಪ್ರಯೋಗವನ್ನು ಸ್ಥಗಿತ ಮಾಡಿದ್ದವು. ಭಾರತಲ್ಲಿಯೂ ಪುಣೆಯ ಸೀರಮ್ ಸಂಸ್ಥೆ ಸೆ. 10ರಂದು ಪ್ರಯೋಗ ಸ್ಥಗಿತ ಮಾಡಿತ್ತು.
ಈಗ ಬ್ರಿಟನ್ನಲ್ಲಿ ಮತ್ತೆ ಪ್ರಯೋಗ ಆರಂಭವಾಗಿರುವುದರಿಂದ ಭಾರತದಲ್ಲೂ ಕೋವಿಶೀಲ್ಡ್ನ ಪ್ರಯೋಗ ಪುನರಾರಂಭವಾಗಬಹುದು ಎಂಬುದು ಸೀರಮ್ನ ನಿರೀಕ್ಷೆಯಾಗಿದೆ. ಬ್ರಿಟನ್ನ ತಜ್ಞರ ಗುಂಪೊಂದು ಈ ಲಸಿಕೆ ಬಗ್ಗೆ ಅಧ್ಯಯನ ನಡೆಸಿದ್ದು, ಯಾವುದೇ ಅಪಾಯವಿಲ್ಲ ಎಂದಿದೆ. ಹೀಗಾಗಿ ಪ್ರಯೋಗ ಆರಂಭಿಸಲಾಗಿದೆ ಎಂದು ಆಸ್ಟ್ರಾ ಝೆನೆಕಾ ಹೇಳಿದೆ.