ಅಗಸ್ಟಾ: ಆರ್ಜಿ ಬಗ್ಗೆ ತನಿಖೆ
Team Udayavani, Apr 4, 2019, 3:00 AM IST
ನವದೆಹಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಹಲವು ಬಾರಿ ಉಲ್ಲೇಖವಾಗಿರುವ ಆರ್ಜಿ ಎಂಬ ಹೆಸರಿನ ವ್ಯಕ್ತಿ ಯಾರು ಎಂಬುದರ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
ಈ ಬಗ್ಗೆ ದೆಹಲಿ ಕೋರ್ಟ್ಗೆ ಬುಧವಾರ ವಿವರಣೆ ನೀಡಿದ ಜಾರಿ ನಿರ್ದೇಶನಾಲಯ, ಸುಶೇನ್ ಮೋಹನ್ ಗುಪ್ತಾ ಎಂಬ ಆರೋಪಿ ಬಳಿ ಸಿಕ್ಕ ಡೈರಿಯಲ್ಲಿ ಆರ್ಜಿ ಎಂಬ ವ್ಯಕ್ತಿಗೆ 50 ಕೋಟಿ ರೂ. ನೀಡಲಾಗಿದೆ ಎಂದು ಉಲ್ಲೇಖೀಸಲಾಗಿದೆ.
ಸುಶೇನ್ ವಿಚಾರಣೆ ನಡೆಸಿದಾಗ ರಜತ್ ಗುಪ್ತಾ ಎಂಬ ಹೆಸರನ್ನೇ ಆರ್ಜಿ ಎಂದು ಬರೆಯಲಾಗಿದೆ ಎಂದಿದ್ದಾರಾದಾರೂ, ಇದು ನನಗೆ ಸಂಬಂಧಿಸಿದ್ದಲ್ಲ ಎಂದು ರಜತ್ ಗುಪ್ತಾ ಹೇಳಿಕೆ ನೀಡಿದ್ದಾರೆ.