ಇಂದು ಬಿಸಿಸಿಐಗೆ ನಿಯೋಜಿತ ಆಡಳಿತಾಧಿಕಾರಿಗಳ ನೇಮಕ
Team Udayavani, Jan 20, 2017, 3:45 AM IST
ನವದೆಹಲಿ: ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೆ ತರದ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಅಧ್ಯಕ್ಷ ಅನುರಾಗ್ ಠಾಕೂರ್‌ರನ್ನು ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅಮಾನತು ಮಾಡಿತ್ತು.
ಇದೀಗ ಬಿಸಿಸಿಐನ ಕೆಲ ಮುಖ್ಯಪಟ್ಟ ಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು (ವೀಕ್ಷಕರನ್ನು) ಸರ್ವೋಚ್ಚ ನ್ಯಾಯಾಲಯ ನೇಮಿಸುವ ಸಾಧ್ಯತೆ ಇದೆ. ಸುಪ್ರೀಂನಿಂದ ನೇಮಕವಾಗಲಿರುವ ಆಡಳಿತಾಧಿಕಾರಿಗಳು ಬಿಸಿಸಿಐಗೆ ಹೊಸ ಪದಾಧಿಕಾರಿಗಳು ನೇಮಕವಾಗುವ ತನಕ ಬಿಸಿಸಿಐ ಮೇಲ್ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.