ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗಿಂತ ಅವರ ಪುತ್ರ ಐದು ಪಟ್ಟು ಶ್ರೀಮಂತ!
Team Udayavani, Jan 3, 2022, 6:10 AM IST
ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗಿಂತ ಅವರ ಪುತ್ರ ನಿಶಾಂತ್ ಐದು ಪಟ್ಟು ಶ್ರೀಮಂತ!
ಡಿ.31ರಂದು ನಿತೀಶ್ ಕುಮಾರ್ ಮತ್ತು ಅವರ ಸಂಪುಟ ಸದಸ್ಯರು ಬಿಹಾರ ಸರಕಾರದ ವೆಬ್ಸೈಟ್ನಲ್ಲಿ ಆಸ್ತಿವಿವರ ಸಲ್ಲಿಸಿದ್ದಾರೆ.
ಆ ಪ್ರಕಾರ ನಿತೀಶ್ ಅವರ ಚರಾಸ್ತಿ, ಸ್ಥಿರಾಸ್ತಿ ಮೌಲ್ಯ 75.36 ಲಕ್ಷ ರೂ. ನಿತೀಶ್ ಬಳಿ 29,385 ರೂ. ನಗದು ಇದೆ.
ಬ್ಯಾಂಕ್ ಖಾತೆ ಯಲ್ಲಿ 42,763 ಹಣವಿದೆ. 16.51 ಲಕ್ಷ ರೂ. ಮೌಲ್ಯದ ಚರಾಸ್ತಿಗಳಿವೆ. ಸ್ಥಿರಾಸ್ತಿ ಮೌಲ್ಯ 58.85 ಲಕ್ಷ ರೂ. ಅವರ ಪುತ್ರ ನಿಶಾಂತ್ ಚರಾಸ್ತಿ ಮೌಲ್ಯ 1.63 ಕೋಟಿ ರೂ., ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂ. ಮುಖ್ಯ ಮಂತ್ರಿ ನಿತೀಶ್ ದಿಲ್ಲಿಯ ದ್ವಾರಕಾದಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಅವರ ಪುತ್ರ ನಿಶಾಂತ್ ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೃಷಿಭೂಮಿ ಮತ್ತು ಮನೆಗಳನ್ನು ಹೊಂದಿದ್ದಾರೆ. ಪಟ್ನಾದ ಕಂಕಾರ್ಬಾಘನಲ್ಲೂ ಆಸ್ತಿ ಹೊಂದಿದ್ದಾರೆ.
ಇನ್ನೂ ವಿಶೇಷವೆಂದರೆ ನಿತೀಶ್ ಬಳಿ 13 ಹಸುಗಳು, 9 ಕರುಗಳು ಇವೆ. ಇವುಗಳ ಬೆಲೆ 1.45 ಲಕ್ಷ ರೂ.!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ