ಭೀಮಾ-ಕೋರೇಗಾಂವ್ ಸುದ್ದಿಗೋಷ್ಠಿ: ಮಹಾ ಪೊಲೀಸರಿಗೆ ಹೈಕೋರ್ಟ್ ತರಾಟೆ
Team Udayavani, Sep 3, 2018, 4:10 PM IST
ಮುಂಬಯಿ : ನ್ಯಾಯಾಂಗದ ವ್ಯಾಪ್ತಿಗೆ ಒಳಪಟ್ಟಿರುವ ಭೀಮಾ ಕೋರೇಗಾಂವ್ ಕೇಸಿಗೆ ಸಂಬಂಧಿಸಿ ಕಳೆದ ಶುಕ್ರವಾರ ನಡೆಸಿರುವ ಪತ್ರಿಕಾ ಗೋಷ್ಠಿಗಾಗಿ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಈ ಕೇಸು ನ್ಯಾಯಾಂಗದ ಅಧೀನದಲ್ಲಿರುವುದರಿಂದ (sub judice), ತೀರ್ಪು ಬರುವುದಕ್ಕೆ ಮುನ್ನವೇ ನೀವು ಪತ್ರಿಕಾಗೋಷ್ಠಿಯನ್ನು ನಡೆಸುವ ಮೂಲಕ ನಿಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದೀರಿ ಎಂದು ಹೈಕೋರ್ಟ್ ಮಹಾರಾಷ್ಟ್ರ ಪೊಲೀಸರಿಗೆ ತಪರಾಕಿ ಬಾರಿಸಿದೆ
ಬಂಧಿತ ಕಾರ್ಯಕರ್ತರು ಮತ್ತು ಮಾವೋವಾದಿ ಸಂಘಟನೆಗಳಿಗೆ ನಂಟು ಇರುವುದನ್ನು ಸಾಬೀತು ಪಡಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ತಮಗೆ ವಿವಿಧೆಡೆಗಳಲ್ಲಿ ತಾವು ನಡೆಸಿದ್ದ ದಾಳಿಯಲ್ಲಿ ತಮಗೆ ಸಿಕ್ಕಿವೆ ಎಂದು ಮಹಾರಾಷ್ಟ್ರ ಪೊಲೀಸರು ಕಳೆದ ಶುಕ್ರವಾರ ನಡೆಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಇದೇ ವೇಳೆ ಬಾಂಬೆ ಹೈಕೋರ್ಟ್, ಎಲ್ಗರ್ ಪರಿಷತ್ ವಿರುದ್ಧವೂ ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ತನಿಖೆ ನಡೆಯಬೇಕು ಎಂದು ಆಗ್ರಹಿಸುವ ಮನವಿಯ ಮೇಲಿನ ವಿಚಾರಣೆಯನ್ನು ಸೆ.7ಕ್ಕೆ ನಿಗದಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿಗೆ ಸೇರ್ಪಡೆ..!
ತಮಿಳುನಾಡಿನ ಡಾ.MGR ಮೆಡಿಕಲ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ನಾಳೆ ಮೋದಿ ಭಾಗಿ.!
ಗುಂಪುಗಳ ನಡುವೆ ಗಲಭೆಯಲ್ಲಿ ಆರ್ ಎಸ್ಎಸ್ ಕಾರ್ಯಕರ್ತನ ಕೊಲೆ: 6 ಎಸ್ ಡಿಪಿಐ ಕಾರ್ಯಕರ್ತರ ಬಂಧನ
ಮಾ.1ರಿಂದ 2ನೇ ಹಂತ : ಹಿರಿಯರು, ರೋಗಪೀಡಿತರಿಗೆ ಕೊರೊನಾ ಲಸಿಕೆ ನೀಡಿಕೆ